ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು: ಬೆಂಕಿಯ ಸಮಸ್ಯೆಯಾಯ್ತು ಇದೀಗ ತ್ಯಾಜ್ಯದ ಸರದಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಸತತ ಬೆಂಕಿಗೆ ಆಹುತಿಯಾಗಿ ರಾಷ್ಟ್ರಮಟ್ಟದ ಸುದ್ದಿ ಮಾಡಿದ್ದ ಬೆಳ್ಳಂದೂರು ಕೆರೆ ಸುತ್ತಲಿನ ನಿವಾಸಿಗಳಿಗೆ ಇದೀಗ ಹೊಸದೊಂದು ಸಮಸ್ಯೆ ಎದುರಾಗಿದೆ.

ಕೆರೆ ಸುತ್ತಮುತ್ತಲಿನ ಜಾಗದಲ್ಲಿ ವಾಸಿಸುತ್ತಿರುವ ಸುಮಾರು ಏಳೆಂಟು ಅಪಾರ್ಟ್ ಮೆಂಟ್ ಗಳಲ್ಲಿ ಲೇಔಟ್ ಪಕ್ಕದಲ್ಲಿಯೇ ತ್ಯಾಜ್ಯ ತಂದು ಹಾಕಲಾಗುತ್ತಿದ್ದು, ಇದರಿಂದ ರೋಸಿ ಹೋಗಿರುವ ನಿವಾಸಿಗಳು ಬಿಬಿಎಂಪಿ ವಿರುದ್ಧ ಫೆ.೨೪ರಂದು ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈಗಾಗಲೇ ಜನವಸತಿಗೆ ಅಯೋಗ್ಯ ಎನಿಸಿರುವ ಈ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಕಡಿಮೆಯಾಗುತ್ತಿದೆ ಆದರೂ ಈ ಪ್ರದೇಶಕ್ಕೆ ಬೇರೆಡೆಯಿಂದ ತ್ಯಾಜ್ಯವನ್ನು ತಂದು ಸಂಗ್ರಹಿಸಲಾಗುತ್ತಿದೆ. ಬಳಿಕ ಈ ಯತ್ಯಾಜ್ಯವನ್ನು ವಿಲೇವಾರಿ ಮಾಡಲು ಕೊಟ್ಟ ಗುತ್ತಿಗೆದಾರರು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿಲ್ಲ.

Bellandur residents protest against BBMP seeking clear Garbage

ಇದರಿಂದ ಇಲ್ಲಿನ ನಿವಾಸಿಗಳು ದುರ್ವಾಸನೆ ತ್ಯಾಜ್ಯದಿಂದ ತತ್ತರಿಸಿ ಹೋಗಿದ್ದಾರೆ. ಎಷ್ಟು ಬಾರಿ ಬಿಬಿಎಂಪಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಫೆ.೨೪ರಂದು ಮಾನವ ಸರಪಳಿ ರಚಿಸಿ ಶಾಂತಿಯುವ ಹೋರಾಟ ನಡೆಸಲು ಮುಂದಾಗಿದ್ದಾರೆ.

English summary
Hundreds of residents of Bellandur will hold a human chain protest against BBMP to urging evacuate the garbage which was dumping by the authorities of February 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X