ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆಗೆ "ಕಾಂಗ್ರೆಸ್ ಕೆರೆ" ಎಂದು ಮರು ನಾಮಕರಣ

|
Google Oneindia Kannada News

Recommended Video

Bellandur Lake Renamed As Congress Lake | Oneindia Kannada

ಬೆಂಗಳೂರು, ಆಗಸ್ಟ್ 22: ಮಿತಿಮೀರಿದ ಮಾಲಿನತೆಯಿಂದಾಗಿ ಇಡೀ ರಾಷ್ಟ್ರದ ಗಮನ ಸೆಳೆದಿರುವ ಬೆಳ್ಳಂದೂರು ಕೆರೆಗೆ ಕಾಂಗ್ರೆಸ್ ಕೆರೆ ಎಂದು ಮರು ನಾಮಕರಣ ಮಾಡಿರುವ ನವ ಭಾರತ ಪ್ರಜಾಸತ್ತಾತ್ಮಕ ಪಕ್ಷದ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

ಬೆಳ್ಳಂದೂರು ಕೆರೆ ಮಾಲಿನ್ಯ: 4 ಪ್ರಶ್ನೆಗೆ ಉತ್ತರ ಕೇಳಿದ ಎನ್ ಜಿಟಿಬೆಳ್ಳಂದೂರು ಕೆರೆ ಮಾಲಿನ್ಯ: 4 ಪ್ರಶ್ನೆಗೆ ಉತ್ತರ ಕೇಳಿದ ಎನ್ ಜಿಟಿ

ಇದೇ ವೇಳೆ ಮಾತನಾಡಿದ ಕಾರ್ಯಕರ್ತರು, ಪ್ರಪಂಚದ ಎಂಟನೇ ಅದ್ಭುತವನ್ನು ಸೃಷ್ಟಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಇದು ಸಲ್ಲಿಸಲೇ ಬೇಕಾದ ಗೌರವ ಎಂದು ನವ ಭಾರತ ಕಾರ್ಯಕರ್ತರು ಟೀಕಿಸಿದರು.

Bellandur lake renamed as Congress lake

"ಕಾಂಗ್ರೆಸ್ ಕೆರೆ" ಎನ್ನುವ ಬ್ಯಾನರ್ ಗಳನ್ನು ಬೆಳ್ಳಂದೂರು ಕೆರೆಯ ಸುತ್ತಲೂ ಅಳವಡಿಸುವ ಮೂಲಕ ಹಾಗು ಸಿ.ಎಂ ಸಿದ್ದರಾಮಯ್ಯ ಮತ್ತು ಕೆ. ಜೆ.ಜಾರ್ಜ್ ರವರ ಮುಖವಾಡ ಧರಿಸಿ ಮರುನಾಮಕರಣದ ಉದ್ಘಾಟನೆ ಮಾಡುವ ಮೂಲಕ ಅಣುಕು ಪ್ರದರ್ಶನ ಮಾಡಲಾಯಿತು.

ಬೆಳ್ಳಂದೂರು ಕೆರೆ ಬಳಿ ಹೋಗಿದ್ದರೆ ಸರ್ಕಾರದ ಸಾಧನೆ ತಿಳಿಯುತ್ತಿತ್ತು!ಬೆಳ್ಳಂದೂರು ಕೆರೆ ಬಳಿ ಹೋಗಿದ್ದರೆ ಸರ್ಕಾರದ ಸಾಧನೆ ತಿಳಿಯುತ್ತಿತ್ತು!

ಈ ಸಂಧರ್ಭದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಅನಿಲ್ ಶೆಟ್ಟಿ "ಇತ್ತೀಚೆಗೆ ನಾವು ನೋಡಿದ ಹಾಗೆ ಸಿದ್ದರಾಮಯ್ಯ ಸರ್ಕಾರವು ಜಾರಿಮಾಡುತ್ತಿರುವ ಯೋಜನೆಗಳಿಗೆ ನೆಹರು ಹಾಗು ಗಾಂಧಿ ವಂಶಸ್ಥರ ಹೆಸರಿಡಲು ತುಂಬಾ ಉತ್ಸಾಹ ತೋರಿಸುತ್ತಿದೆ. ಉದಾಹರಣೆ ಇಂದಿರಾ ಕ್ಯಾಂಟೀನ್. ಆದುದರಿಂದ ನಾವ್ಯಾಕೆ ಬೆಳ್ಳಂದೂರು ಕೆರೆಗೆ ಸರ್ಕಾರದ ಹೆಸರಿಟ್ಟು ಗೌರವಿಸಬಾರದು ಎಂಬ ಆಲೋಚನೆಮಾಡಿ ಮರುನಾಮಕರಣ ಮಾಡಿದ್ದೇವೆ. ಈ ಮೂಲಕ ಸರ್ಕಾರವು ಕೊಲ್ಲುತ್ತಿರುವ ಬೆಳ್ಳಂದೂರು ಕೆರೆಯನ್ನು ಉಳಿಸುವಂತೆ ಆಗ್ರಹಿಸುತ್ತಿದ್ದೇವೆ ಹಾಗು ಸರ್ಕಾರವು ಬರಿ ಸುಳ್ಳುಹೇಳುವುದನ್ನು ಬಿಟ್ಟು ಕೆರಗಳನ್ನು ಉಳಿಸುವ ಕೆಲಸ ಮಾಡಬೇಕು" ಎಂದು ಹೇಳಿದರು.

Bellandur lake renamed as Congress lake

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಜನಜಾಗೃತಿ ಹಾಡುಗಳನ್ನು ಹಾಡಿದರು.

English summary
Bellanduru Lake has been renamed as Congress Lake by Nava Bharatha Prajasatthaathama Paksha on August 22nd, 2017. In this way the they protested against the ruling government who is not at all necessary measurement about polluted Bellanduru lake which has drawn a national attension.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X