ಮುಖಕ್ಕೆ ರಾಚುತ್ತಿದೆ ಬೆಳ್ಳಂದೂರು ಕೆರೆಯ ದುರ್ಗಂಧಯುಕ್ತ ನೊರೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಮಳೆಗಾಗಿ ಇಡೀ ರಾಜ್ಯವೂ ಪರಿತಪಿಸುತ್ತಿದ್ದರೆ ಉದ್ಯಾನ ನಗರಿಯಲ್ಲಿ ಬೆಳ್ಳಂದೂರು ಕೆರೆ ಸುತ್ತಮುತ್ತಲ ಭಾಗದ ಜನರು ಮಾತ್ರ ಅಪ್ಪಿ-ತಪ್ಪಿಯೂ ಮಳೆಬಾರದಿದ್ದರೆ ಸಾಕೆಂದು ಬೇಡುತ್ತಿದ್ದಾರೆ. ಸ್ವಲ್ಪ ಮಳೆ ಬಂದರೆ ಸಾಕು ಕೆರೆಯಲ್ಲಿ ತುಂಬಿಕೊಳ್ಳುವ ದುರ್ಗಂಧಯುಕ್ತ ನೊರೆ ಈ ಭಾಗದ ಜನರ ನೆಮ್ಮದಿಯನ್ನೇ ಕಸಿದಿದೆ. ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಕಾಣಿಸಿಕೊಂಡ ತುಂತುರು ಮಳೆಗೆ ಬೆಳ್ಳಂದೂರು ಕೆರೆಯಲ್ಲಿ ಈಗಾಗಲೇ ನೊರೆ ತುಂಬಿಕೊಂಡಿದೆ.

ಕೆರೆಯ ಬಳಿ ತಾತ್ಕಾಲಿಕ ಗ್ರಿಲ್ ಗಳನ್ನು ನಿರ್ಮಿಸಲಾಗಿದೆಯಾದರೂ ನೊರೆ ಪ್ರಯಾಣಿಕರು ಚಲಿಸುವ ರಸ್ತೆಯ ಮೇಲೆಲ್ಲ ಬಿದ್ದು, ದುರ್ಗಂಧ ಬೀರುತ್ತಿದೆ. ಪಾದಾಚಾರಿಗಳ ಮುಖಕ್ಕೂ ನೊರೆ ಬಡಿಯುತ್ತಿದೆ! ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳುತ್ತಲೇ ಬಂದಿದ್ದರೂ, ಅವೆಲ್ಲ ಬೀಸೋ ದೋಣ್ಣೆಯಿಂದ ತಪ್ಪಿಸಿಕೊಳ್ಳುವ ಆಶ್ವಾಸನೆಗಳಾಗಿವೆಯೇ ಹೊರತು, ಗಂಭೀರವಾಗಿ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ.[ಇದು ಬೆಳ್ಳಂದೂರು ಕೆರೆಯೋ ಅಥವಾ ನೊರೆಯೋ!]

Bellandur lake in Bengaluru foams again

ಈ ಬಗ್ಗೆ ನಮ್ಮ ಬೆಂಗಳೂರು ಫೌಂಡೇಶನ್ ಎಂಬ ಎನ್ ಜಿಒ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ್ದ ರಾಷ್ಟ್ರೀಯ ಹಸಿರು ಪ್ರಾಧಿಕಾರ(NGT), ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕೆಂದು ಹೇಳಿದೆ. ತ್ಯಾಜ್ಯಗಳನ್ನು ಸುಟ್ಟು ಕೆರೆಗೆ ಎಸೆಯುತ್ತಿರುವುದು, ಮತ್ತು ಈ ಕೆರೆಯನ್ನೇ ತ್ಯಾಜ್ಯ ವಿಲೇವಾರಿ ಘಟಕ ಎಂಬಂತೆ ಬಳಸುತ್ತಿರುವುದು ಕೆರೆಯ ಇಂದಿನ ಸ್ಥಿತಿಗೆ ಕಾರಣ, ಬೆಳ್ಳಂದೂರು ಕೆರೆಯಲ್ಲಿ ದುರ್ವಾಸನೆ ಬೀರುವ ನೊರೆಯ ಸಮಸ್ಯೆ ಇದೇ ಮೊದಲಲ್ಲ, ಪದೇ ಪದೇ ನೊರೆ ಮತ್ತು ಬೆಂಕಿಯ ಘಟನೆಗಳು ನಡೆಯುತ್ತಲೇ ಇದ್ದರೂ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಎನ್ ಜಿಒ ಆಪಾದಿಸಿತ್ತು.[ಬೆಳ್ಳಂದೂರು ಕೆರೆ ಮತ್ತೆ ನೊರೆ ಉಗುಳಲು ಯಾರು ಕಾರಣ?]

https://twitter.com/ANI_news/status/853880750441189378?ref_src=twsrc%5Etfw&ref_url=http%3A%2F%2Fwww.oneindia.com%2Findia%2Fbellandur-lake-foams-again-froth-flies-in-the-face-of-citizens-2407293.html

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Bellandur lake foams again
English summary
Light showers that came as a respite to the whole of Bengaluru, became a bane to the residents of Bellandur. While the burning sun is raising a stink from the heavily polluted Bellandur lake, the light showers resulted in the froth on Sunday and Monday.
Please Wait while comments are loading...