ವೈಟ್ ಫೀಲ್ಡ್ ಲೈಫ್ ಸ್ಟೈಲ್ ಉದ್ಘಾಟನೆಯಲ್ಲಿ ಕಂಗನಾ ಝಲಕ್

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್, 03: ಬಾಲಿವುಡ್ ತಾರೆ ಕಂಗನಾ ರಣಾವತ್ ಬೆಂಗಳೂರಿನ ವೈಟ್ ಫೀಲ್ಡ್ ನ ಫೀನಿಕ್ಸ್ ಮಾರ್ಕೆಟ್ ಸಿಟಿ ಯಲ್ಲಿ ಹೊಸ ಲೈಫ್ ಸ್ಟೈಲ್ ಸ್ಟೋರ್ ಗೆ ಚಾಲನೆ ನೀಡಿದರು. ಇದು ಭಾರತದ 55ನೇ ಲೈಫ್ ಸ್ಟೈಲ್ ಸ್ಟೋರ್ ಆಗಿದ್ದು ಸಂಭ್ರಮಕ್ಕೆ ಗಣ್ಯರು ಸಾಕ್ಷಿಯಾದರು.

ಲೈಫ್ ಸ್ಟೈಲ್ ನ ರಾಯಭಾರಿಯಾಗಿರುವ ಕಂಗನಾ ಜತೆಗೆ ಲೈಫ್ ಸ್ಟೈಲ್ ಇಂಟರ್ ನ್ಯಾಶನಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ಕಬೀರ್ ಲುಂಬಾ ಇದ್ದರು. ಫ್ಯಾಷನ್ ಲೋಕದಲ್ಲಿ ಹೊಸ ಭಾಷ್ಯ ಬರೆದಿರುವ ಲೈಫ್ ಸ್ಟೈಲ್ ನ ಹೊಸ ಸ್ಟೋರ್ ಮೂರು ಅಂತಸ್ತುಗಳನ್ನು ಹೊಂದಿದ್ದು ವೈಟ್ ಫೀಲ್ಡ್ ಭಾಗದ ಜನರಿಗೆ ಅತ್ಯುತ್ತಮ ಶಾಪಿಂಗ್ ತಾಣವಾಗಿ ಇಷ್ಟವಾಗುವುದರಲ್ಲಿ ಅನುಮಾನ ಇಲ್ಲ.[ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಾಟ ಇಲ್ಲೆ ಕೊನೆ]

ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳನ್ನು ನೀವು ಇಲ್ಲಿ ಕೊಳ್ಳಲು ಸಾಧ್ಯವಿದ್ದು ಗ್ರಾಹಕರಿಗೆ ಪ್ರಿಯವಾದ ರೀತಿಯಲ್ಲಿ ಸೇವೆ ನೀಡಲಿದೆ. ಅತ್ಯುತ್ತಮ ಡಿಸ್ಪ್ಲೇ, ಡಿಜಿಟಲ್ ಸ್ಕ್ರೀನ್ ಈ ಲೈಫ್ ಸ್ಟೈಲ್ ಘಟಕದ ವಿಶೇಷ. ನೀವು ಕಂಗನಾ ರಣಾವತ್ ಅವರೊಂದಿಗೆ ಲೈಫ್ ಸ್ಟೈಲ್ ಸ್ಟೋರ್ ನಲ್ಲಿ ಒಂದು ರೌಂಡ್ ಹಾಕಿಕೊಂಡು ಬನ್ನಿ..

ಕಂಗನಾ ಏನಂದ್ರು?

ಕಂಗನಾ ಏನಂದ್ರು?

ಈ ಸ್ಟೋರ್ ನಲ್ಲಿ ನಿಮಗೆ ಎಲ್ಲ ಬಗೆಯ ಆಧುನಿಕ ಫ್ಯಾಷನ್ ವಸ್ತುಗಳು ಲಭ್ಯವಿದೆ. ಫಾರ್ಮಲ್ ನೊಂದಿಗೆ ಸಾಂಪ್ರದಾಯಿಕ ವಸ್ತುಗಳು ಗಮನ ಸೆಳೆಯಲಿವೆ ಎಂದು ಕಂಗನಾ ರಣಾವತ್ ಹೇಳಿದರು.

ಒಂದೇ ಕಡೆ ಎಲ್ಲ ವಸ್ತು ಲಭ್ಯ

ಒಂದೇ ಕಡೆ ಎಲ್ಲ ವಸ್ತು ಲಭ್ಯ

ಒಂದೇ ಸೂರಿನಡಿ ಮಹಿಳೆಯರು ಮೆಚ್ಚುವ ವಸ್ತುಗಳು, ಬ್ಯಾಗ್, ಪಾದರಕ್ಷೆ, ಮಕ್ಕಳಿಗೆ ಇಷ್ಟವಾಗುವ ವಸ್ತುಗಳು ಲಭ್ಯವಾಗಲಿದೆ.

ಯಾವ ಬ್ರ್ಯಾಂಡ್ ಗಳು

ಯಾವ ಬ್ರ್ಯಾಂಡ್ ಗಳು

Louis Philippe, Vero Moda, Only, Van Heusen, Arrow, Code, US Polo, Allen Solly, Levis, Kappa, Bossini, UCLA, Melange, Juniors, Catwalk ಸೇರಿದಂತೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ವಸ್ತುಗಳು ಲಭ್ಯ.

ದೇಶಾದ್ಯಂತ ಲೈಫ್ ಸ್ಟೈಲ್

ದೇಶಾದ್ಯಂತ ಲೈಫ್ ಸ್ಟೈಲ್

ಲೈಫ್ ಸ್ಟೈಲ್ ಸ್ಟೋರ್ ಗಳು ಆಗ್ರಾ, ಅಹಮದಾಬಾದ್, ಅಮೃತಸರ, ಬೆಂಗಳೂರು, ಚಂಡಿಗಢ, ಚೆನ್ನೈ, ಕೊಯಂಬತೂರ್, ನವದೆಹಲಿ, ಗುರುಗ್ರಾಮ, ಹೈದರಾಬಾದ್, ಜೈಪುರ, ಕೋಲ್ಕತಾ, ಕೊಚ್ಚಿ, ಲಕ್ನೋ, ಲೂಧಿಯಾನ, ಮಂಗಳೂರು, ಮುಂಬೈ, ಪುಣೆ, ಥಾಣೆ, ಕಾನ್ಪುರ, ವಿಜಯವಾಡ ಸೇರಿದಂತೆ ಅನೇಕ ನಗರಗಳಲ್ಲಿ ಜನಪ್ರಿಯವಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lifestyle, India's leading chain of fashion stores, has unveiled its new format Lifestyle store at Phoenix Marketcity, Whitefield, Bangalore. Renowned actress and brand ambassador for Melange by Lifestyle, Kangana Ranaut inaugurated the store along with Mr Kabir Lumba, Mananging Director, Lifestyle International (P) Ltd. The new format store is spread across three floors and 45,000 sq. ft. and creates a seamless shopping environment, elegantly framing the trendy and fashionable offering that Lifestyle is renowned for.
Please Wait while comments are loading...