ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಕೆಟ್ ನಾಟಕಕ್ಕೆ ಟಿಕೆಟ್ ತಗೊಂಡ್ರಾ? ಈಗ್ಲೆ ತಗೊಳ್ಳಿ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 10: ಬೆಂಗಳೂರು ಥಿಯೇಟರ್ ಕಂಪನಿಯು ತನ್ನ ಹೊಸ ಪ್ರಯೋಗ ಬೆಕೆಟ್ ನಾಟಕದ ಏಳನೇ ಪ್ರದರ್ಶನಕ್ಕೆ ಸಿದ್ದವಾಗಿದೆ. ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಫ್ರೆಂಚ್ ಮೂಲದ ಜಾನ್ ಆನ್ವಿಯವರ 'ಬೆಕೆಟ್' ನಾಟಕ ಪ್ರದರ್ಶನ ಬುಧವಾರ ಸಂಜೆ ರಂಗಶಂಕರದಲ್ಲಿ ಕಾಣಬಹುದು.

2015 ರಲ್ಲಿ ರಂಗ ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರು ನಿರ್ದೇಶಿಸಿದ, ತನ್ನ ಮೊದಲ ನಾಟಕ ಚೆರ್ರಿ ಆರ್ಚರ್ಡ್ ಯಶಸ್ವಿ 15 ಪ್ರದರ್ಶನ ನೀಡಿತ್ತು. ಈಗ ಪ್ರಕಾಶ ಬೆಳವಾಡಿ ನಿರ್ದೇಶನದ ಪ್ರೆಂಚ್ ಮೂಲದ ಜಾನ್ ಆನ್ವಿಯವರ ಬೆಕೆಟ್ ನಾಟಕ ನಿರ್ಮಿಸಿದ್ದಾರೆ.

ನಾಟಕ: ಬೆಕೆಟ್
ಪ್ರಸ್ತುತಿ: ಬೆಂಗಳೂರು ಥಿಯೇಟರ್ ಕಂಪನಿ
ಫ್ರೆಂಚ್ ಮೂಲ : ಜಾನ್ ಶನ್ವಿ
ವಿನ್ಯಾಸ ಮತ್ತು ನಿರ್ದೇಶನ : ಪ್ರಕಾಶ್ ಬೆಳವಾಡಿ
ಸ್ಥಳ : ರಂಗಶಂಕರ
ದಿನಾಂಕ ಮತ್ತು ಸಮಯ : 10/08/2016 ಸಂಜೆ 7:30
ಟಿಕೆಟ್ ದರ : ರೂ. 100/-
ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ : 99001 82400

ವೆಬ್ ಸೈಟ್ : www.bookmyshow.com

Becket Kannada play Prakash Belawadi Rangashankara

ನಾಟಕದ ಬಗ್ಗೆ: ಜಾನ್ ಆನ್ವಿ ರಚಸಿದ ಬೆಕೆಟ್ (ಮೂಲ ಫ್ರೆಂಚ್ ನಾಟಕ) ನಾಟಕದ ಐತಿಹಾಸಿಕ ನೆಲೆ 12ನೆ ಶತಮಾನದ ಇಂಗ್ಲೆಂಡಿನ ನಾರ್ಮನ ಜನಾಂಗದ ದೊರೆ ಎರಡನೆ ಹೆನ್ರಿ ಮತ್ತು ಕ್ಯಾಥೋಲಿಕ್ ಚರ್ಚಿನ ಥಾಮಸ್ ಬೆಕೆಟ್ ನಡುವೆ ಆದ ಸಮರ. (ಆನ್ವಿಯವರು ನಾಟಕ ಬರೆಯುವಾಗ ಮುಂದೆ ಸಂತರೆಂದು ಘೋಷಿತರಾದ ಬೆಕೆಟ್ ಅವರನ್ನು ಸಾಕ್ಸನ್ ಜನಾಂಗದವರೆಂದು ತಪ್ಪಾಗಿ ಗ್ರಹಿಸಿದ್ದರು)ಈ ಕೃತಿಯನ್ನು ಟಿ.ಎಸ್. ಎಲಿಯಟ್ ರಚಿಸಿದ ಕಾವ್ಯ ನಾಟಕವಾದ 'Murder in the Cathedralಗೆ ವಿಮರ್ಶಕರು ಆಗಾಗ ಹೋಲಿಸುವುದು ಉಂಟು.

ಅದೇ ಮೂಲ ಐತಿಹ್ಯ ಮತ್ತು ಮುಖ್ಯ ಪಾತ್ರಗಳು ಎರಡೂ ಕೃತಿಗಳಲ್ಲಿ ಕಾಣಿಸಿಕೊಂಡರೂ, ಅವು ಎತ್ತಿ ಹಿಡಿಯುವ ಪ್ರಶ್ನೆಗಳು ಬೇರೆ ಬೇರೆ ಎಂದು ನನ್ನ ಅನಿಸಿಕೆ. ಎಲಿಯಟ್ ನಾಟಕದಲ್ಲಿ ಕೇಂದ್ರ ಕಥನ ಬೆಕೆಟ್ ಪಾತ್ರದ ನೈತಿಕ ಸತ್ವ ಪರಿಕ್ಷೆಯಾದರೆ, ಆನ್ವಿಯ ಬೆಕೆಟ್ ಎದುರಿಸುವುದು ಧರ್ಮಸಂಕಟ. ಆನ್ವಿಯ ಬೆಕೆಟ್ ನಾಟಕದಲ್ಲಿ ಕೇಂದ್ರ ಕಥನ ಎಂದರೆ ರಾಜಕಾರಣ ಮತ್ತು 'ಧರ್ಮ'ದ ನಡುವೆ ಎನ್ನುವವರಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ.

ಇಲ್ಲಿಯ ಬೆಕೆಟ್ ಪರಿಹರಿಸಬೇಕಾದ ಸಮಸ್ಯೆ ನಿಷ್ಠೆಯದು - ಅದನ್ನು ತಾನು ರಾಜನಿಂದ ದೇವರಿಗೆ ವರ್ಗಾಯಿಸಬೇಕು. ಬಗೆಹರಿಸಲಾಗದ ಬಿಕ್ಕಟ್ಟು ಏನಂದರೆ ರಾಜನ ಸೇವೆ, ದೇವರ ಸೇವೆ ಎರಡೂ ಏಕಕಾಲಕ್ಕೆ ತನಗೆ - ರಾಜನ ಸ್ನೇಹಿತ ಮತ್ತು ಪ್ರೀತಿಪಾತ್ರನಾಗಿಯೂ - ಮಾಡಲು ಸಾಧ್ಯವಿಲ್ಲ ಅನ್ನಿಸುವುದು.

Becket Kannada play Prakash Belawadi Rangashankara
ಆನ್ವಿಯ ಬೆಕೆಟ್, ಪಿ. ಲಂಕೇಶರ 'ಸಂಕ್ರಾಂತಿ'ಯ ಸಾತ್ವಿಕ ಬಸವಣ್ಣನಲ್ಲ. ಗಿರೀಶ್ ಕಾರ್ನಾಡರ 'ತಲೆದಂಡ'ದ ಬಸವಣ್ಣನೂ ಅಲ್ಲ. ಈತ ಪ್ರಾರಂಭಕ್ಕೆ ಮೋಜುಗಾರ, ಸೊಗಸುಗಾರ, ವಿಷಯಲಂಪಟ. ಇಂಥವನು ದೇವರಗೆ ಮುಖಕೊಡಬೇಕು, ಕಣ್ಣಲ್ಲಿ ದೇವರನ್ನು ತುಂಬಿಕೊಂಡು ಎಲ್ಲ ಸಾಮ್ರಾಜ್ಯಗಳಂತೆ "ದೇವರ ಸಾಮ್ರಾಜ್ಯ"ವನ್ನೂ ಕಾಪಾಡಬೇಕು.

ಸ್ವಲ್ಪ ಮಟ್ಟಿಗೆ ಈ ಬೆಕೆಟ್ ಪಡುವ ಧರ್ಮಸಂಕಟ, ಸಲಿಮ್-ಜಾವೆದ್ ರಚಿಸಿದ 'ನಮಕ್ ಹರಾಮ್' ಚಿತ್ರದಲ್ಲಿ ಕಾಣಬಹುದು.ಇದಲ್ಲದೆ ವಸಾಹತುಷಾಹಿ ಪ್ರತಿಮೆಗಳು, ಜಾತಿ ಪ್ರಜ್ಞೆ, ರಾಷ್ಟ್ರ ಮತ್ತು ಅಸ್ಮಿತೆಯ ಸಂಕಟಗಳು ಮತ್ತು ಹೆಣ್ಣಿನ ಬಗ್ಗೆ ಇರುವ ಧೋರಣೆ ಕುರಿತಂತೆ ಆನ್ವಿಯ ವ್ಯಂಗ್ಯ ನಾಟಕದಲ್ಲಿದೆ. ಎಲಕ್ಕೂ ಮೀರಿ ಈ ನಾಟಕ ರಾಜಕೀಯವಾಗಿ ತುರ್ತಾಗಿ ಸಮಕಾಲೀನ ಅನ್ನಿಸುವುದು ಆಶ್ಚರ್ಯ ಮೂಡಿಸುತ್ತದೆ
(ಒನ್ಇಂಡಿಯಾ ಸುದ್ದಿ)

English summary
Becket Kannada play directed by Prakash Belawadi will be staged by Bangalore Theatre Company at Rangashankara on Aug 10, 2016. Becket presents the life of a martyred Christian saint through the eyes of a nonbeliever, less concerned with faith than with possible human motivation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X