ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಗ ಬಿಡಿಎ ತೆರಿಗೆಯನ್ನೂ ಆನ್‌ಲೈನ್‌ನಲ್ಲಿ ಪಾವತಿಸಬಹುದು!

By Nayana
|
Google Oneindia Kannada News

ಬೆಂಗಳೂರು, ಮೇ 3: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆನ್‌ಲೈನ್‌ ಮೂಲಕ ತೆರಿಗೆ ಪಾವತಿ ಮಾಡಲು ಅನುಕೂಲವಾಗುವಂತೆ ಸರಳ ಪ್ರಕಟಣೆ ಮೂಲಕ ವೆಬ್‌ಸೈಟ್‌ ಪರಿಚಯಿಸಿದೆ.

ಫ್ಲಾಟ್ ಹಾಗೂ ಸೈಟ್ ಮಾಲೀಕರು ಇನ್ನು ಮುಂದೆ ಆನ್ ಲೈನ್ ನಲ್ಲಿಯೇ ತೆರಿಗೆ ಪಾವತಿ ಮಾಡಬಹುದು. ಬಿಡಿಎ ತನ್ನ ವೆಬ್ ಸೈಟ್ ನಲ್ಲಿ ಸರಳ ಪ್ರಕಟಣೆಯ ಮೂಲಕ ನೂತನ ಸೇವೆಯನ್ನು ಪರಿಚಯಿಸಲಾಗಿದೆ.

ಒಂದು ತಿಂಗಳಲ್ಲಿ ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿಒಂದು ತಿಂಗಳಲ್ಲಿ ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ

ಬುಧವಾರದಿಂದಲೇ ಆನ್ ಲೈನ್ ಮೂಲಕ ತೆರಿಗೆ ಪಾವತಿ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿದ್ದು ಆನ್ ಲೈನ್ ಪೋರ್ಟಲ್ ಮೂಲಕ ತೆರಿಗೆ ಪಾವತಿಗೆ ಕೇವಲ ಎರಡು ನಿಮಿಷದ ಕಾಲಾವಧಿ ಸಾಕಾಗಲಿದೆ. ಬುಧವಾರ ರಾತ್ರಿ 10.30 ರ ವೇಳೆಗೆ ಒಟ್ಟು 21 ಮಂದಿ ಆನ್ ಲೈನ್ ಮೂಲಕ ತೆರಿಗೆ ಪಾವತಿ ಮಾಡಿದ್ದಾರೆ. ಇದರಲ್ಲಿ ಒಟ್ಟಾರೆ 1,21,138 ರೂ. ಸಂಗ್ರಹವಾಗಿದೆ ಬಿಡಿಎ ಕಾರ್ಯದರ್ಶಿ ಬಸವರಾಜು ತಿಳಿಸಿದ್ದಾರೆ.

BDA tax may file through online onwards!

ಆಸ್ತಿ ತೆರಿಗೆ ಪಾವತಿಗಾಗಿ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿನ ರೆಡ್ ಸ್ಕ್ರೋಲ್ ಬಾರ್ ಕ್ಲಿಕ್ ಮಾಡಿ ತೆರಿಗೆ ಪಾವತಿಸಬಹುದು. ಅಲ್ಲದೆ ಇದ್ದರೆ ವೆಬ್ ಸೈಟ್ ನ ಮುಖಪುಟದಲ್ಲಿ 'ಹೊಸತು' ವಿಭಾಗದಲ್ಲಿ ಬರುವ 'ಆಸ್ತಿ ತೆರಿಗೆ ಪಾವತಿ' ಲಿಂಕ್ ಅನ್ನು ಕ್ಲಿಕ್ ಮಾಡಬಹುದು.

ತೆರಿಗೆ ಪಾವತಿಗೆ ನೊಂದಣಿ ಸಹ ಬಹಳ ಸರಳವಾಗಿದೆ. ಸೈಟ್ ನಂಬರ್, ಆಸ್ತಿಯ ಐಡಿ ಸಂಖ್ಯೆ, ನಿಮ್ಮ ಪೂರ್ಣ ಹೆಸರನ್ನು ಭರ್ತಿ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ, ಈ ಮೇಲ್ ನೀಡಿ ವೆರಿಫೈ ಮಾಡಿಸಿಕೊಳ್ಳಬೇಕು.ಆಗ ಒನ್ ಟೈಮ್ ಪಾಸ್ ವರ್ಡ್ ಸಂದೇಶ ನಿಮ್ಮ ಮೊಬೈಲ್ ಹಾಗೂ ಈ ಮೇಲ್ ಗೆ ಬರುತ್ತದೆ. ಇದಾದ ಬಳಿಕ ನಿಮ್ಮ ಆಸ್ತಿ ದಾಖಲೆಗಳ ನವೀಕರಣ (ಅಪ್ ಡೇಟ್) ಆಗಲಿದೆ.ಒಟಿಪಿ ದಾಖಲಿಸುವ ಮೂಲಕ ಆಸ್ತಿ ಮಾಲಿಕರು ತಾವು ಆನ್ ಲೈನ್ ತೆರಿಗೆ ಪಾವತಿ ಮಾಡಬಹುದು.

ಬಿಬಿಎಂಪಿ ಆನ್ ಲೈನ್ ತೆರಿಗೆ ಪಾವತಿ ಕ್ರಮ ಸಾಮಾನ್ಯವಾದದ್ದು, ಇದೀಗ ಬಿಡಿಎ ವ್ಯಾಪ್ತಿಯ ಸ್ವತ್ತುಗಳ ಆನ್ ಲೈನ್ ತೆರಿಗೆ ಪಾವತಿ ವ್ಯವಸ್ಥೆ ಕಲ್ಪಿಸಿರುವುದು ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಿದೆ.

English summary
Site and flat owners which was taken from BDA, they pay taxes through BDA website. The new online tax payment system was launched on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X