ಜು.2ಕ್ಕೆ ಎಚ್‌.ಎಸ್‌.ಆರ್‌.ಲೇಔಟ್‌ನಲ್ಲಿ ಬಿಡಿಎ ಕುಂದುಕೊರತೆ ಸಭೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 30 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎಚ್‌.ಎಸ್‌.ಆರ್.ಲೇಔಟ್‌ನಲ್ಲಿ ಜುಲೈ 2ರಂದು ಸಾರ್ವಜನಿಕ ಕಂದುಕೊರತೆ ಸಭೆಯನ್ನು ಆಯೋಜಿಸಿದೆ. ಬಿಡಿಎ ಆಯುಕ್ತ ರಾಜ್‌ಕುಮಾರ್ ಖತ್ರಿ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಡಿಎ ವಿಭಾಗೀಯ ಕಚೇರಿ ಆವರಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಈ ಮೇಲ್ ಮೂಲಕ ಮುಂಚಿತವಾಗಿ ಕಳಿಸಬಹುದು ಅಥವ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿ ನೀಡಬಹುದಾಗಿದೆ. [ಕೆಂಪೇಗೌಡ ಬಡಾವಣೆ : ಸೈಟ್ ಪಡೆದವರ ಪಟ್ಟಿ ಬಿಡುಗಡೆಗೆ ಕ್ಷಣಗಣನೆ]

bda

ಈ ಮೇಲ್ ವಿಳಾಸ : eeeasthsr@gmail.com, eo3bda@gmail.com ಅಥವ pro@bdanangalore.org [ಚಾಲುಕ್ಯ ವೃತ್ತ-ಹೆಬ್ಬಾಳ ಉಕ್ಕಿನ ಸೇತುವೆ ಯೋಜನೆಗೆ ಅಸ್ತು]

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ : 9663067674, 9845630128 [ಬಿಡಿಎ ಆಯುಕ್ತ ಶ್ಯಾಂ ಭಟ್ ವರ್ಗಾವಣೆ]

ಸೋಮವಾರ ಪಟ್ಟಿ ಪ್ರಕಟ : ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆದವರ ಪಟ್ಟಿಯನ್ನು ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ. ಬುಧವಾರ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿವೇಶನ ಪಡೆದವರ ಪಟ್ಟಿ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ.

ಬಡಾವಣೆಯ ನಿವೇಶನಗಳ ಹಂಚಿಕೆಗೆ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಲಾಗಿದೆ. ಬಿಡಿಎ ಅಧ್ಯಕ್ಷ ಮಹೇಂದ್ರ ಜೈನ್ ನೇತೃತ್ವದ ಸಮಿತಿಯಲ್ಲಿ ಬಿಡಿಎ ಆಯುಕ್ತರು, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಶಾಸಕರಾದ ಬೈರತಿ ಬಸವರಾಜ್, ಎಸ್‌.ಟಿ.ಸೋಮಶೇಖರ್ ಮುಂತಾದವರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Development Authority (BDA) organized public grievances meeting at HSR Layout on July 2, 2016. BDA Commissioner Rajkumar Khatri will participate in meeting.
Please Wait while comments are loading...