ಮಹಾನಗರದಲ್ಲಿ ಮತ್ತೆರೆಡು ಹೊಸ ವರ್ತುಲ ರಸ್ತೆಗಳು

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 27 : ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ಮತ್ತೆರೆಡು ವರ್ತುಲ ರಸ್ತೆಗಳು ಹಾಗೂ ನಮ್ಮ ಮೆಟ್ರೋ ಸೇವೆಯ ಎರಡು ಹೊಸ ವರ್ತುಲ ರಸ್ತೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಮಹಾ ಯೋಜನೆ 2031ರಲ್ಲಿ ಪ್ರಸ್ಥಾಪಿಸಿದೆ.

ಹೆಬ್ಬಾಳ ಫ್ಲೈ ಓವರ್ ವಿಸ್ತರಣೆ ಕಾರ್ಯ ಆರಂಭಿಸಿದ ಬಿಡಿಎ

ಪರಿಷ್ಕೃತ ಮಹಾಯೋಜನೆ-2031 ರ ಭಾಗವಾಗಿ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫೆರೆಫರಲ್ ರಿಂಗ್ ರಸ್ತೆಗಳಿಗೆ ಸಮಾನಾಂತರವಾಗಿ ಮಾರ್ಗಗಳನ್ನು ಅನುಷ್ಠಾನಗೊಳಿಸಲು ಬಿಡಿಎ ತನ್ನ ಪರಿಷ್ಕೃತ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿದೆ. ನಗರದ ಎಲ್ಲ ವರ್ತುಲ ರಸ್ತೆಗಳನ್ನು ಸಂಪರ್ಕಿಸಲು 100ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಿಸುವ ಕುರಿತು ಇಲ್ಲಿ ಗಮನ ಸೆಳೆಯಲಾಗಿದೆ.

BDA Proposed two more ring roads in RMP

ಸದ್ಯ ಬಿಎಂಆರ್ ಸಿ ಎಲ್ ವತಿಯಿಂದ ಮೆಟ್ರೋ ೨ಎ ಫೇಸ್ ಬೋರ್ಡ್ ನಿಂದ ಕೆ.ಆರ್. ಪುರದವರೆಗೆ ಮೆಟ್ರೋ ಮಾರ್ಗನಿರ್ಮಿಸಲಾಗುತ್ತಿದೆ. ಅದನ್ನು ವಿಸ್ತರಿಸಿ ಹೆಬ್ಬಾಳ-ಮಾಗಡಿರಸ್ತೆ-ಮೈಸೂರು ರಸ್ತೆ ಹೀಗೆ ಸಂಪೂರ್ಣ ವರ್ತುಲ ರಸ್ತೆಗೆ ಸಂಪರ್ಕಿಸುವ ರೀತಿಯಲ್ಲಿ ವಿಸ್ತರಿಸುವ ಪ್ರಸ್ತಾವನೆಯನ್ನು ತಿಳಿಸಲಾಗಿದೆ.

ಮೂರು ಯೋಜನೆ ವಲಯಗಳು: ಎ-ಹೊರವರ್ತುಲ ರಸ್ತೆಗಳ ಒಳಗಿರುವ ವಾಣಿಜ್ಯ ಪ್ರದೇಶಗಳು, ಬಿ-ಹೊರವರ್ತುಲ ರಸ್ತೆಗಳ ಹೊರ ಭಾಗದ ಪ್ರದೇಶಗಳು, ಸಿ- ಕೃಷಿ ಭೂಮಿಯನ್ನು ಸುಧಾರಿತ ಆದಾಯಗಳಿಗೆ ವ್ಯವಸ್ಥೆಗೆ ಕಾಯ್ದಿರಿಸುವುದು.

ದೆಹಲಿ ಮಾದರಿಯಲ್ಲಿ ಟ್ರಾಫಿಕ್ ನಿಯಂತ್ರಣ: ಸಮ-ಬೆಸ ಜಾರಿಗೆ ಚಿಂತನೆ

ಪ್ರಸ್ತಾಪಿತ ಪ್ರಮುಖ ಅಂಶಗಳು: ನಾಲ್ಕು ಕ್ರೀಡಾ ಸಂಕೀರ್ಣ ನಿಮಾಣ, 12 ಪಾರಂಪರಿಕ ವಲಯಗಳ ಪರಿಚಯ, ಕೈಗೆಟುಕುವ ದರದಲ್ಲಿ ಮನೆಗಾಗಿ ಭೂ ಬ್ಯಾಂಕ್, ತಂತ್ರಜ್ಞಾನಗಳ ಅಳವಡಿಕೆ, ಬೃಹತ್ ಅಭಿವೃದ್ಧಿ ಕೈಗೊಳ್ಳುವಾಗ ಸಂಚಾರದ ಮೇಲೆ ಬೀರುವ ಮರಿಣಾಮಗಳ ಮಾಪನ ಕಡ್ಡಾಯ, ಹಸಿರು ವಲಯದಲ್ಲಿ ಭೂಮಿ ಖರೀದಿಗೆ ಟಿಡಾರ್ ಪ್ರಮಾಣ ಪತ್ರ ಪರಿಗಣಿಸುವುದು ಪ್ರಮುಖ ಅಂಶಗಳನ್ನೊಳಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bengaluru Development Authority has been proposed two more ring roads in Revised Master plan(RMP).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ