ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಪ್ಲಾನ್: ಕ್ಲಬ್ ಹೌಸ್ ನಿರ್ಮಾಣ ಮಾಡಲು ಹೊರಟ ಬಿಡಿಎ

|
Google Oneindia Kannada News

ಬೆಂಗಳೂರು, ನವೆಂಬರ್ 21: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕ್ಲಬ್ ಹೌಸ್ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ಜೊತೆಗೆ ಫ್ಲ್ಯಾಟ್‌ಗಳತ್ತ ಜನರನ್ನು ಸೆಳೆಯಲು ಮುಂದಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಕಣಿಮಿಣಿಕೆ ಫ್ಲ್ಯಾಟ್‌ಗಳ ಮೇಲೆ ಶೇ.5 ರಷ್ಟು ಮತ್ತು 10 ರಿಯಾಯಿತಿಯನ್ನು ಬಿಡಿಎ ಘೋಷಣೆ ಮಾಡಿತ್ತು. ರಿಯಾಯಿತಿ ಪ್ರಕಟಿಸಿದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿರಲಿಲ್ಲ, ನಿವೇಶನ ಕೊಳ್ಳಲು ಆಸಕ್ತಿ ತೋರಿಸಿರಲಿಲ್ಲ. ಇದೀಗ ಬಿಡಿಎ ಪ್ರಾಧಿಕಾರದ ಕಣಿಮಿಣಿಕೆ ವಸತಿ ಸಮುಚ್ಛಯದಲ್ಲಿ ಕ್ಲಬ್ ಹೌಸ್ ನಿರ್ಮಾಣ ಮಾಡಲು ಮುಂದಾಗಿದೆ.

ಬಿಡಿಎ ದಾಸನಪುರ ಬಳಿ ನಿರ್ಮಿಸಲಿರುವ 4 ಬಿಎಚ್‌ಕೆ ವಿಲ್ಲಾಗಳಿಗೆ ಈಗಲೇ ಬೇಡಿಕೆ ಆರಂಭವಾಗಿದೆ. ದಾಸನಪುರ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ 320 ವಿಲ್ಲಾಗಳ ಪೈಕಿ 200 ಕ್ಕೂ ವಿಲ್ಲಾಗಳಿಗೆ ಈಗಲೇ ಭಾರಿ ಬೇಡಿಕೆ ಬಂದಿದೆ.

ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ

ಕಳೆದ ಎರಡು ವರ್ಷಗಳಿಂದ ಬಹುತೇಕ ಬಿಡಿಎ ಅಪಾರ್ಟ್ ಮೆಂಟ್‌ಗಳು ಖಾಲಿ ಇವೆ, ರಿಯಾಯ್ತಿಯನ್ನು ಘೋಷಿಸಿದರೂ ಪ್ರಯೋಜನವಾಗುತ್ತಿಲ್ಲ, ಏಕೆಂದರೆ ಮೈಸೂರು ರಸ್ತೆ ಬಳಿ ಇನ್ನಿತರೆ ಕಡೆಗಳಲ್ಲಿ ಬಿಡಿಎ ನಿರ್ಮಿಸಿರುವ ಪ್ಲಾಟ್‌ಗಳು ಕಡಿಮೆ ವಿಸ್ತೀರ್ಣವನ್ನು ಹೊಂದಿದೆ ಎನ್ನುವುದು ಒಂದು ಕಾರಣವಾಗಿದೆ.

ಕೆಂಪೇಗೌಡ ಬಡಾವಣೆ: ಫಲಾನುಭವಿಗಳಿಂದ ನಿವೇಶನ ವಾಪಸ್

ಕೆಂಪೇಗೌಡ ಬಡಾವಣೆ: ಫಲಾನುಭವಿಗಳಿಂದ ನಿವೇಶನ ವಾಪಸ್

ಸೆಪ್ಟೆಂಬರ್ ತಿಂಗಳಲ್ಲಿ ಕೆಂಪೇಗೌಡ ಬಡಾವಣೆಯ ಎರಡನೇ ಹಂತದ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು ಆದರೆ ಎರಡೇ ತಿಂಗಳಲ್ಲಿ ನಿವೇಶನ ಫಲಾನುಭವಿಗಳು ನಿವೇಶನ ವಾಪಸ್ ನೀಡಲು ಮುಂದಾಗಿದ್ದಾರೆ. ಹಂಚಿಕೆ ಪತ್ರ ಪಡೆದವರಲ್ಲಿ ಕೆಲವರು ಬಾಕಿ ಹಣ ಪಾವತಿಗೆ ಹೆಚ್ಚುವರಿ ಸಮಯ ನಿಗದಿ ಮಾಡದಿರುವುದು, ಸೈಟ್ ಮೌಲ್ಯ ಹೆಚ್ಚಳ ಇತ್ಯಾದಿ ಕಾರಣ ನೀಡಿ ನಿವೇಶನ ವಾಪಸ್ ಮಾಡಲು ಮುಂದಾಗಿದ್ದಾರೆ. 20/30 ಅಳತೆಯ ನಿವೇಶನ ಹಂಚಿಕೆ ಪತ್ರವನ್ನು ವಾಪಸ್ ಮಾಡಲು ಕೆಲವು ಫಲಾನುಭವಿಗಳು ಮುಂದಾಗಿದ್ದಾರೆ. ಇದೇ ರೀತಿ ಇನ್ನೂ ಕೆಲವು ಜನರು ನಿವೇಶನವನ್ನು ವಾಪಸ್ ಮಾಡುವ ಕುರಿತು ಮಾತನಾಡಿದ್ದಾರೆ.

ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ

ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ

ಬಿಡಿಎ ಅಧ್ಯಕ್ಷರೂ ಆಹೂ ಉಪ ಮುಖ್ಯಮಂತ್ರಿಯೂ ಆಗಿರುವ ಜಿ ಪರಮೇಶ್ವರ ಮತ್ತು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ನೇತೃತ್ವದಲ್ಲಿ ಇತ್ತೀಚೆಗೆ ಕಣಿಮಿಣಿಕೆ ಫ್ಲ್ಯಾಟ್ ಮಾರಾಟದ ವಿಷಯ ಚರ್ಚೆಗೆ ಬಂತು. ಈ ವೇಳೆ ರಿಯಾಯಿತಿ ನೀಡಿದರೂ ಯಾಕೆ ಫ್ಲ್ಯಾಟ್ ಕೊಳ್ಳಲು ಜ ಮುಂದಾಗುತ್ತಿಲ್ಲ ಎನ್ನುವ ವಿಷಯದ ಬಗ್ಗೆ ಚರ್ಚೆ ನಡೆಸಲಾಯಿತು.ಸಮುಚ್ಛಯ ನಿವೇಶನಗಳತ್ತ ಜನರನ್ನು ಸೆಳೆಯಲು ಬಿಡಿಎ ಮುಂದಾಗಿದೆ.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

17.35 ಕೋಟಿ ವೆಚ್ಚದಲ್ಲಿ ಕ್ಲಬ್ ಹೌಸ್

17.35 ಕೋಟಿ ವೆಚ್ಚದಲ್ಲಿ ಕ್ಲಬ್ ಹೌಸ್

ಕ್ಲಬ್ ಹೌಸ್ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 17.35 ಕೋಟಿ ಮೀಸಲಿಟ್ಟಿದೆ. ಆಧುನಿಕ ವ್ಯಾಯಾಮ ಕೇಂದ್ರ,ಸುಸಜ್ಜಿತ ಈಜು ಕೊಳ ಏರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ.

ಐಷಾರಾಮಿ ರೆಸ್ಟೋರೆಂಟ್

ಐಷಾರಾಮಿ ರೆಸ್ಟೋರೆಂಟ್

ಕ್ಲಬ್ ಹೌಸ್ ನಲ್ಲಿ ಗ್ರಾಹಲರಿಗೆ ಅನುಕೂಲಕ್ಕೆ ಐಷಾರಾಮಿ ರೆಸ್ಟೋರೆಂಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ, ಅಲ್ಲದೆ ವಿಶೇಷ ಸೌಲಭ್ಯಗಳನ್ನು ನೀಡಲು ತೀರ್ಮಾನಿಸಲಾಗಿದೆ. ಕಮ್ಯೂನಿಟಿ ಹಾಲ್ ಕೂಡ ನಿರ್ಮಾಣ ಮಾಡಲಾಗುವುದು ಎಂದು ಬಿಡಿಎ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ. ಹೊಸ ಸಮುಚ್ಛಯ ನಿರ್ಮಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಬಿಡಿಎ ಈ ಹಿಂದೆ ಒಂದು ಫ್ಲ್ಯಾಟ್ ಖರೀದಿಸುವವರಿಗೆ ಶೇ.5 ರಷ್ಟು ರಿಯಾಯಿತಿ ನೀಡಿತ್ತು.

English summary
Bengaluru Development Authority is planning to construct in Bengaluru to attract customers for apartments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X