ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎಯಲ್ಲಿ 2,200 ಕೋಟಿ ಹಗರಣ, ಮೂವರ ಬಂಧನ

|
Google Oneindia Kannada News

ಬೆಂಗಳೂರು, ಆಗಸ್ಟ್ 18 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಮೂವರು ಆರೋಪಿಗಳನ್ನು ಬಂಧಿಸಿದೆ. ಬಿಡಿಎ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ ಹಗರಣವಿದು.

ಬಿಡಿಎ ಹಣಕಾಸು ವಿಭಾಗದ ಅಧಿಕಾರಿಯಾಗಿದ್ದ ಸಂದೀಪ್ ದಾಸ್, ಲೆಕ್ಕ ಪರಿಶೋಧನಾ ವಿಭಾಗದ ನಿವೃತ್ತ ಜಂಟಿ ನಿಯಂತ್ರಕ ಎಂ.ಎನ್.ಶೇಷಪ್ಪ ಮತ್ತು ಪ್ರಥಮ ದರ್ಜೆ ನೌಕರರಾಗಿದ್ದ ಸಿ.ವಸಂತ್ ಕುಮಾರ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. [ಬಿಡಿಎನಲ್ಲಿ ಮ್ಯೂಚುವಲ್ ಫಂಡ್ ಹಗರಣ]

bda

ವಿವಿಧ ಬ್ಯಾಂಕ್‌ಗಳಲ್ಲಿ ಬಿಡಿಎ ಠೇವಣಿ ಇಟ್ಟಿದ್ದ ಸುಮಾರು 2,200 ಕೋಟಿ ಹಣವನ್ನು ನಿಯಮ ಬಾಹಿರವಾಗಿ ಮ್ಯೂಚುವಲ್ ಫಂಡ್‌ಗೆ ವರ್ಗಾವಣೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ವಶಕ್ಕೆ ಪಡೆಯಲಾಗಿದೆ. [ಬಿಡಿಎಯಲ್ಲಿ ಭೂ ದಾಖಲೆ ತಿದ್ದಿದ ಭೂಪರು]

ಹಗರಣ ಸಂಕ್ಷಿಪ್ತ ಮಾಹಿತಿ : ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. 2014ರ ನವೆಂಬರ್‌ನಲ್ಲಿ ಶೇಷಾದ್ರಿಪುರಂ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು.

1999ರಿಂದ 2014ರ ತನಕ ಬಿಡಿಎ ನಾನಾ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಹಣವನ್ನು ನಿಯಮ ಬಾಹಿರವಾಗಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ. ಈ ಅವಧಿಯಲ್ಲಿ ಸಂದೀಪ್ ದಾಸ್ ಹಣಕಾಸು ವಿಭಾಗದ ಅಧಿಕಾರಿಯಾಗಿದ್ದರು.

English summary
Karnataka criminal investigation department (CID) on Monday arrested three persons on connection with the 2,200 core mutual fund scam in Bangalore Development Authority (BDA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X