ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆ: ಯಾವ ಕೆಟಗೆರಿಗೆ ಎಷ್ಟು ನಿವೇಶನ?

By Mahesh
|
Google Oneindia Kannada News

ಬೆಂಗಳೂರು, ಜುಲೈ 03: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಿ ರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ವಿವಿಧ ಆಳತೆಯ 5 ಸಾವಿರ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಮೀಸಲು (ಕಟ್ ಆಫ್) ಪಟ್ಟಿಯನ್ನು ಬಿಡಿಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ಮೂಲಕ ನಿವೇಶನದಾರರ ಸಂಭಾವ್ಯ ಪಟ್ಟಿಯಲ್ಲಿ ಯಾವ ಕೆಟಗೆರಿಗೆ ಎಷ್ಟು ನಿವೇಶನ ಲಭ್ಯವಿದೆ ಎಂಬುದು ಸ್ಪಷ್ಟವಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೆಬ್ ಸೈಟ್ (bdabangalore.org) ನಲ್ಲಿ ಪ್ರಕಟಿಸಿರುವ ಸಂಭಾವ್ಯ ಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದರೆ ಜುಲೈ 30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿಯ ಕಚೇರಿಗೆ ಕಳಿಸಬಹುದು.

ಕೆಂಪೇಗೌಡ ಬಡಾವಣೆಯ ಮೊದಲ ಹಂತದ ನಿವೇಶನಗಳು ಮೈಸೂರು ರಸ್ತೆ, ಯಶವಂತಪುರ ಹಾಗೂ ನೈಸ್ ರಸ್ತೆ ನಡುವೆ ಪಡೆಯಬಹುದಾಗಿದೆ. ಒಟ್ಟಾರೆ 5,000 ನಿವೇಶನಗಳಿಗಾಗಿ 31,349 ಅರ್ಜಿಗಳು ಬಂದಿತ್ತು.

ಆಯ್ಕೆ ಮಾನದಂಡ ಹೇಗೆ?: ಅರ್ಜಿದಾರರ ಜೇಷ್ಠತೆಯನ್ನು ಆಧರಿಸಿ, ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಜೇಷ್ಠತೆಯ ಪ್ರಮಾಣ ಸಮನಾಗಿದ್ದಲ್ಲಿ, ವಯಸ್ಸಿನ ಹಿರಿತನ ಪರಿಗಣಿಸಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಬಿಡಿಎ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಬಿಡಿಎ ನಿರ್ವಿುಸುತ್ತಿರುವ 5 ಸಾವಿರ ನಿವೇಶನಗಳ ಪೈಕಿ 20 X 30 ಅಡಿ ವಿಸ್ತೀರ್ಣದ 1 ಸಾವಿರ ನಿವೇಶನಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ, 500 ನಿವೇಶನಗಳನ್ನು ಆರ್ಥಿಕವಾಗಿ ಸಶಕ್ತರಾದವರಿಗೆ ಹಂಚಲಾಗಿದೆ.

BDA Kempegowda Layout Cut-off for allotment of 5000 sites Category wise List

* 30X40 ಅಡಿ ವಿಸ್ತೀರ್ಣದ 2 ಸಾವಿರ,
* 40X60 ಅಡಿ ವಿಸ್ತೀರ್ಣದ 1 ಸಾವಿರ
* 50X80 ಅಡಿ ವಿಸ್ತೀರ್ಣದ 500 ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಲಾಗಿದೆ.

ಇದೇ ರೀತಿ ಸಾಮಾನ್ಯವರ್ಗಕ್ಕೆ 20X30 ವಿಸ್ತೀರ್ಣದ ನಿವೇಶನ, 30X40, 40X60, 50X80 ವಿವಿಧ ವಿಸ್ತೀರ್ಣಗಳಲ್ಲಿ ಹಂಚಿಕ ಮಾಡಿರುವವರ ವಿವರಗಳು ವೆಬ್ ಸೈಟ್ ನಲ್ಲಿ ಲಭ್ಯವಿದೆ. ಅರ್ಜಿದಾರರ ಅರ್ಜಿ ಸಂಖ್ಯೆ, ಹೆಸರು, ನೋಂದಣಿ ಸಂಖ್ಯೆ, ಕೆಟಗೆರಿ, ವಿಸ್ತೀರ್ಣ, ವಯಸ್ಸು, ಅರ್ಜಿ ಎಷ್ಟು ಬಾರಿ ಸಲ್ಲಿಸಲಾಗಿದೆ, ಡಿಪಾಸಿಟ್ ಮೊತ್ತ ಎಲ್ಲವನ್ನು ಕಾಣಬಹುದು.[ನಿವೇಶನದ ದರಗಳ ಮಾಹಿತಿ ಇಲ್ಲಿದೆ]

ಮೀಸಲು ಎಷ್ಟೆಷ್ಟು?

ಬಿಡಿಎ ನಿವೇಶನ ಹಂಚಿಕೆ ನಿಯಮದಂತೆ ಕೆಟಗರಿ 1ಕ್ಕೆ ಶೇ.2,
* ಪರಿಶಿಷ್ಟ ಪಂಗಡಕ್ಕೆ ಶೇ.3,
* ಪರಿಶಿಷ್ಟ ಜಾತಿಗೆ ಶೇ.15,
* ಹಿಂದುಳಿದ ವರ್ಗಕ್ಕೆ ಶೇ.10,
* ನಿವೃತ್ತ ಯೋಧರಿಗೆ ಶೇ.5,
* ರಾಜ್ಯ ಸರ್ಕಾರಿ ನೌಕರರಿಗೆ ಶೇ.8,
* ಕೇಂದ್ರ ಸರ್ಕಾರಿ ನೌಕರರಿಗೆ ಶೇ.2,
* ಅಂಗವಿಕಲರಿಗೆ ಶೇ.3,
* ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶೇ.2
* ಸಾಮಾನ್ಯ ವರ್ಗಕ್ಕೆ ಶೇ.50ರಷ್ಟು ಮೀಸಲು ಒದಗಿಸಲಾಗಿದೆ.

ನಿವೇಶನಗಳ ಹಂಚಿಕೆ ಹೇಗೆ

20X30 ವಿಸ್ತೀರ್ಣದ ನಿವೇಶನ, 30X40, 40X60, 50X80 ವಿವಿಧ ವಿಸ್ತೀರ್ಣಗಳಲ್ಲಿ ಹಂಚಿಕ ಮಾಡಲಾಗಿದ್ದು ಸಂಪೂರ್ಣ ವಿವರವನ್ನು ಪಿಡಿಎಫ್ ನಲ್ಲಿ ನೀಡಲಾಗಿದ್ದು ಡೌನ್ ಲೋಡ್ ಮಾಡಿಕೊಳ್ಳಿ ಹೆಚ್ಚಿನ ಮಾಹಿತಿಗೆ ಬಿಡಿಎ ಬೆಂಗಳೂರು ವೆಬ್ ತಾಣಕ್ಕೆ ಭೇಟಿ ಕೊಡಿ ಲಿಂಕ್ ಇಲ್ಲಿದೆ

English summary
Nearly 5,000 residential sites in Nadaprabhu Kempegowda Layout will be available for the general public. Here are the details of cut-off incategory wise. It is estimated that these 5,000 sites on over 300 acres the first phase are located between Mysuru Road and Yeshwantpur, along NICE Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X