ಸಿಎ ನಿವೇಶನ ದುರ್ಬಳಕೆ: ಶಿಕ್ಷಣ ಸಂಸ್ಥೆಗಳಿಗೆ ಬಿಡಿಎ ನೋಟಿಸ್

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 05: ಸಿಎ ನಿವೇಶನ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ 7 ಶಿಕ್ಷಣ ಸಂಸ್ಥೆಗಳಿಗೆ ಬಿಡಿಎ ಶುಕ್ರವಾರ ನೋಟಿಸ್ ನೀಡಿದೆ.

ಸಿಎ ನಿವೇಶನ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ 7 ಶಿಕ್ಷಣ ಸಂಸ್ಥೆಗಳಿಗೆ ಬಿಡಿಎ ನೋಟಿಸ್ ನೀಡಿದೆ. ಕನ್ನಡ ಶಾಲೆ ನಿರ್ಮಾಣ ಬದಲಿಗೆ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಕ್ಕೆ ವಂಚನೆ ನಡೆದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.

BDA issues notice to Seven Education Institutes

ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ

ಕನ್ನಡ ಶಾಲೆಗಳಿಗೆ ಅನುಮತಿ ಪಡೆದು ಇಂಗ್ಲೀಷ್ ಶಾಲೆಗಳ ಸ್ಥಾಪನೆ ಮಾಡಲಾಗಿದೆ. ಬಿಡಿಎ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಶಿಕ್ಷಣ ಸಂಸ್ಥೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಕ್ರಮ ಕೈಗೊಂಡಿರುವ ಬಗ್ಗೆ ಉತ್ತರ ನೀಡಲು ಬಿಡಿಎ ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.

ಬಿಡಿಎ ಸೈಟನ್ನು ಯಾರಾದರೂ ಕೈಗೆಟುಕುವ ಬೆಲೆ ಅನ್ನುವುದಕ್ಕೆ ಸಾಧ್ಯವಾ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 15 ದಿನದೊಳಗೆ ಉತ್ತರ ನೀಡುವಂತೆ ಬಿಡಿಎಗೆ ಸೂಚನೆ ನೀಡಲಾಗಿದೆ. ಬಿಇಎಲ್ ಬಳಿ ಇರುವ ಮಾರುತಿ ವಿದ್ಯಾಮಂದಿರ, ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ - ಚಂದ್ರಾ ಬಡಾವಣೆ, ಗಂಗ ರವೀಂದ್ರನಾಥ ಠಾಗೋರ್ - ಬನಶಂಕರಿ, ಕರ್ನಾಟಕ ಅಂಗವಿಕಲ ಸಂಘ - ಎಚ್‌ಎಎಲ್ ರೋಡ್, ಸೈರಾ ಎಜುಕೇಶನ್ ಸೊಸೈಟಿ - ಕುಂದಲಹಳ್ಳಿ, ಸಿಎಂಆರ್ ಜ್ಞಾನಧಾರ ಟ್ರಸ್ಟ್ - ಎಚ್‌ಬಿಆರ್ 2ನೇ ಹಂತ, ಶ್ರೀ ಬಸವೇಶ್ವರ ಮಹಾವಿದ್ಯಾಲಯ - ಒಎಂಬಿಆರ್ ಬಡಾವಣೆ ಇವುಗಳು ಸಿಎ ನಿವೇಶನವನ್ನು ದುರ್ಬಳಕೆ ಮಾಡಿಕೊಂಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BDA has issued show cause notice to seven education institution which alloted CA sites for the purpose of open the Kannada medium schools. But these institution have allegedly opened English medium schools in the sites

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ