ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ದಾಳಿ: ಬಿಡಿಎ 'ಶ್ರೀಮಂತ' ಎಂಜಿನಿಯರ್ ಗೌಡಯ್ಯ ಅಮಾನತು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಇತ್ತೀಚೆಗೆ ಬೆಂಗಳೂರಲ್ಲಿ ಎಸಬಿ ದಾಳಿಗೆ ಒಳಗಾಗಿದ್ದ ಬಿಡಿಎ ಅಧಿಕಾರಿ ಗೌಡಯ್ಯ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: 5 ಕೋಟಿ ನಗದು ಪತ್ತೆ ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: 5 ಕೋಟಿ ನಗದು ಪತ್ತೆ

ಅಕ್ಟೋಬರ್ 5ರಂದು ಬೆಂಗಳೂರಿನ ಎರಡು ಕಡೆ ಎಸಿಬಿ ಬೃಹತ್ ದಾಳಿ ನಡೆಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿದ್ದರು, ಅರು ತಮ್ಮ ಕುಟುಂಬದ ಹೆಸರಿನಲ್ಲಿ 2 ಮನೆ 8, ನಿವೇಶನ, 14 ಅಪಾರ್ಟ್ ಮೆಂಟ್, 3 ಕೆಜಿ ಚಿನ್ನ, 10 ಕೆಜಿ ಬೆಳ್ಳಿ, 3 ಕಾರು, 3 ದ್ವಿಚಕ್ರ ವಾಹನ, 75 ಲಕ್ಷ ನಗದು, 30 ಲಕ್ಷ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದರು. ಅವರ ಮಾವನ ಮನೆಯಲ್ಲಿ 4.5 ಕೆಜಿ ಚಿನ್ನಾಭರಣ ಲಭ್ಯವಾಗಿತ್ತು.

ಮಂಗಳೂರಿನಲ್ಲಿ ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪ್ರಾಜೆಕ್ಟ್ ಇಂಜಿನಿಯರ್ ಮಂಗಳೂರಿನಲ್ಲಿ ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪ್ರಾಜೆಕ್ಟ್ ಇಂಜಿನಿಯರ್

BDA engineer N.G.Gowdaiah suspended following ACB raid

ಮೈಸೂರು ದಸರಾ - ವಿಶೇಷ ಪುರವಣಿ

ಇಷ್ಟೇ ಅಲ್ಲದೆ ಅಂದು ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಅವರ ಮನೆ ಮೇಲೂ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಕುಟುಂಬಸ್ಥರ ಹೆಸರಿನಲ್ಲಿದ್ದ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಭೂಮಿ, ಚಿನ್ನ 1.6ಕೆಜಿ, 4 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಈ ಎರಡು ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಮಾಹಿತಿಮಮೇರೆಗೆ ಅವರಿಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ದಾಳಿ ನಡೆದಿತ್ತು.

English summary
State government has been suspended BDA engineer G.N.Gowdaiah following raid conducted recently by the ACB in disproportionate asset case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X