ಹೆಬ್ಬಾಳ ಫ್ಲೈ ಓವರ್ ವಿಸ್ತರಣೆ ಕಾರ್ಯ ಆರಂಭಿಸಿದ ಬಿಡಿಎ

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾರ್ಯವನ್ನು ಆರಂಭಿಸಿದೆ. 50 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು, 15 ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

ಹೆಬ್ಬಾಳ್ ಫ್ಲೈಓವರ್ ಬಳಿ ಸಿಲುಕಿಕೊಂಡರೆ ಗೋವಿಂದ!

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾರ್ಯಕ್ಕೆ 2016ರಲ್ಲಿಯೇ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಬಸವೇಶ್ವರ ವೃತ-ಹೆಬ್ಬಾಳ ನಡುವಿನ ಉಕ್ಕಿನ ಸೇತುವೆ ನಿರ್ಮಾಣದ ಪ್ರಸ್ತಾವನೆ ಹಿನ್ನಲೆಯಲ್ಲಿ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಉಕ್ಕಿನ ಸೇತುವೆ ಪ್ರಸ್ತಾಪ ಸ್ಥಗಿತಗೊಂಡಿದ್ದರಿಂದ ಕಾಮಗಾರಿ ಆರಂಭವಾಗಿದೆ.

ಕಟ್ಟುವುದಕ್ಕೆ ಮುಂಚೆ ಕುಸಿದು ಬಿದ್ದ ಬೆಂಗಳೂರು ಸೇತುವೆ!

BDA begins Hebbal flyover upgrading work

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಬರುವ ಮಾರ್ಗಕ್ಕೆ ಎರಡು ಪಥಗಳನ್ನು ಜೋಡಿಸುವ ಕಾಮಗಾರಿ ಇದಾಗಿದೆ. ಮೊದಲಿನ ವಿನ್ಯಾಸದ ಪ್ರಕಾರ ಕೆ.ಆರ್.ಪುರ ಕಡೆ ಸಾಗುವ ರಸ್ತೆಯನ್ನು ಸಂಪರ್ಕಿಸುವ ಭಾಗವನ್ನು ಕೆಡವಬೇಕಿತ್ತು.

ಆದರೆ, ಹೊಸ ವಿನ್ಯಾಸದಂತೆ ಮೇಲ್ಸೇತುವೆಯ ಯಾವುದೇ ಭಾಗವನ್ನು ಕೆಡವುತ್ತಿಲ್ಲ. ಕಾಮಗಾರಿ ನಡೆಯುವಾಗ ಅಗತ್ಯವಿದ್ದರೆ ಕೆಲವು ಮಾರ್ಗದ ವಾಹನ ಸಂಚಾರ ಬಂದ್ ಮಾಡಲು ಬಿಡಿಎ ನಿರ್ಧರಿಸಿದೆ. 15 ತಿಂಗಳಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಬಿಡಿಎ ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Development Authority (BDA) began the work of upgrading the Hebbal flyover. The total project cost is Rs 50 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ