ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

47 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಇನ್ನೂ ಜಾಗ ಸಿಕ್ಕಿಲ್ಲ!

|
Google Oneindia Kannada News

Recommended Video

Bengaluru BBMP Yet To Set Up 47 Indira Canteens | Oneindia Kannada

ಬೆಂಗಳೂರು, ಅಕ್ಟೋಬರ್ 03 : ಬೆಂಗಳೂರು ನಗರದಲ್ಲಿ 50 ಇಂದಿರಾ ಕ್ಯಾಂಟೀನ್‌ಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 101 ಕ್ಯಾಂಟೀನ್ ಉದ್ಘಾಟನೆಗೊಂಡಿತ್ತು. ಇನ್ನೂ 47 ಕ್ಯಾಂಟೀನ್‌ಗಳನ್ನು ನಿರ್ಮಾಣ ಮಾಡಬೇಕಾಗಿದೆ.

ಎಲ್ಲಾ ಜಿಲ್ಲೆಗಳಲ್ಲಿ ಇಂದಿರಾ ಸವಿರುಚಿ ಕೈ ತುತ್ತು ಕ್ಯಾಂಟೀನ್ಎಲ್ಲಾ ಜಿಲ್ಲೆಗಳಲ್ಲಿ ಇಂದಿರಾ ಸವಿರುಚಿ ಕೈ ತುತ್ತು ಕ್ಯಾಂಟೀನ್

ಭಾನುವಾರ ಕೆ.ಆರ್.ಮಾರುಕಟ್ಟೆ ಬಸ್ ನಿಲ್ದಾಣ, ಹೊಸಕೆರೆಹಳ್ಳಿ ಬಳಿಯ ಕ್ಯಾಂಟೀನ್ ಸೇರಿ 50 ಕ್ಯಾಂಟೀನ್‌ಗಳನ್ನು ಉದ್ಘಾಟಿಸಲಾಗಿದೆ. ಕೆ.ಆರ್.ಮಾರುಕಟ್ಟೆ ಬಳಿಯ ಕ್ಯಾಂಟೀನ್‌ಗೆ ಶಾಸಕ ಆರ್.ವಿ.ದೇವರಾಜ್ ಚಾಲನೆ ನೀಡಿದರು.

BBMP yet to set up 47 Indira Canteen

ನಂತರ ಮಾತನಾಡಿದ ಅವರು, 'ಕೆ.ಆರ್.ಮಾರುಕಟ್ಟೆ ಪ್ರದೇಶವು ವ್ಯಾಪಾರ ಕೇಂದ್ರವಾಗಿದ್ದು, ನಿತ್ಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿ ಕ್ಯಾಂಟೀನ್ ಆರಂಭಿಸಲಾಗಿದೆ' ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ ಸವಿದ ಜಿ.ಪರಮೇಶ್ವರಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ ಸವಿದ ಜಿ.ಪರಮೇಶ್ವರ

'ಕೆ.ಆರ್.ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಜಾಸ್ತಿ ಇರುತ್ತದೆ. ಇಲ್ಲಿನ ಕ್ಯಾಂಟೀನ್‌ನಲ್ಲಿ ಮೂರು ಹೊತ್ತು ತಲಾ 500 ಮಂದಿಗೆ ತಿಂಡಿ, ಊಟ ನೀಡಿದರೆ ಸಾಲದು. ಪ್ರತಿ ಹೊತ್ತು ಕನಿಷ್ಠ 1000 ಜನರಿಗೆ ತಿಂಡಿ, ಊಟ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ' ಎಂದು ಆರ್.ವಿ.ದೇವರಾಜ್ ಹೇಳಿದರು.

ಜಾತ್ರೆಯಂತಾದ ಇಂದಿರಾ ಕ್ಯಾಂಟೀನ್ ನಲ್ಲಿ ಜನವೋ ಜನಜಾತ್ರೆಯಂತಾದ ಇಂದಿರಾ ಕ್ಯಾಂಟೀನ್ ನಲ್ಲಿ ಜನವೋ ಜನ

47 ಕ್ಯಾಂಟೀನ್ ನಿರ್ಮಾಣ ಬಾಕಿ : '47 ಕ್ಯಾಂಟೀನ್‌ಗಳನ್ನು 3ನೇ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಅವುಗಳನ್ನು ನವೆಂಬರ್ 1ರಂದು ಉದ್ಘಾಟಿಸಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.

'ಕ್ಯಾಂಟೀನ್‌ ನಿರ್ಮಾಣ ಮಾಡಲು ಇನ್ನು ಜಾಗ ಸಿಕ್ಕಿಲ್ಲ. ಯಾವುದಾದರೂ ವಾರ್ಡ್‌ನಲ್ಲಿ ಜಾಗ ಸಿಕ್ಕದಿದ್ದರೆ ಪಕ್ಕದ ವಾರ್ಡ್‌ನಲ್ಲಿ ಕ್ಯಾಂಟೀನ್ ನಿರ್ಮಿಸಲು ಉದ್ದೇಶಿಸಿದ್ದೇವೆ. ಈಗಾಗಲೇ ಎರಡು ಕಡೆ ಪಕ್ಕದ ವಾರ್ಡ್‌ಗಳಲ್ಲಿ ಜಾಗ ಗುರುತಿಸಲಾಗಿದೆ' ಎಂದು ಆಯುಕ್ತರು ತಿಳಿಸಿದರು.

'ಇದುವರೆಗೂ ಕ್ಯಾಂಟೀನ್ ನಿರ್ಮಾಣಕ್ಕೆ ಬಿಬಿಎಂಪಿ, ಬಿಡಿಎ, ಜಲಮಂಡಳಿಗೆ ಸೇರಿದ ಜಾಗವನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಸಂಸ್ಥೆಗಳಿಗೆ ಸೇರಿದ ಜಾಗ ಲಭ್ಯವಿಲ್ಲದ ಕಡೆ ಆಸ್ಪತ್ರೆ, ಮಾರುಕಟ್ಟೆ, ಬಸ್ ನಿಲ್ದಾಣಗಳ ಬಳಿ ಕ್ಯಾಂಟೀನ್ ನಿರ್ಮಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಅಲ್ಲೂ ಜಾಗ ಸಿಗದಿದ್ದರೆ ಖಾಸಗಿ ಜಾಗ ಬಾಡಿಗೆಗೆ ಪಡೆದು ಕ್ಯಾಂಟೀನ್ ಆರಂಭಿಸಲಾಗುತ್ತದೆ' ಎಂದರು.

ಕರ್ನಾಟಕ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ನಗರದಲ್ಲಿ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಬಿಬಿಎಂಪಿ ಕ್ಯಾಂಟೀನ್ ನಿರ್ಮಾಣ, ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಕ್ಯಾಂಟೀನ್‌ನಲ್ಲಿ 5 ರೂ.ಗೆ ಉಪಹಾರ, 10 ರೂ.ಗೆ ಊಟ ನೀಡಲಾಗುತ್ತಿದೆ.

English summary
The Bruhat Bengaluru Mahanagara Palike (BBMP) on October 2, 2017 inaugurated 50 Indira Canteen's in city. BBMP yet to set up 47 canteen's in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X