ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕೋರ್ಟ್‌ಗೆ ಧನ್ಯವಾದ: ಸುಣ್ಣ-ಬಣ್ಣ ಕಾಣುತ್ತಿವೆ ಬೆಂಗಳೂರು ಗೋಡೆಗಳು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 13: ನಗರದಲ್ಲಿರುವ ಎಲ್ಲಾ ಅಕ್ರಮ ಫ್ಲೆಕ್ಸ್‌, ಬ್ಯಾನರ್ ಮತ್ತು ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ ನೀಡಿದ ಆದೇಶದಿಂದಾಗಿ ಬೆಂಗಳೂರಿನ ಗೋಡೆಗಳು ಸುಣ್ಣ-ಬಣ್ಣವನ್ನು ಕಾಣುವಂತಾಗಿದೆ.

ನಿತ್ಯ ಸಾವಿರಾರು ಫ್ಲೆಕ್ಸ್, ಬ್ಯಾನರ್‌ಗಳನ್ನು ಅಂಟಿಸುತ್ತಿದ್ದರು, ಕೆಲವೊಂದನ್ನು ಅರ್ಧ ಕಿತ್ತುಬಿಡುತ್ತಿದ್ದರು ಇದು ಬೆಂಗಳೂರಿನ ಅಂದವನ್ನೇ ಹಾಳುಮಾಡಿತ್ತು. ಇದೀಗ ಹೈಕೋರ್ಟ್‌ಗೆ ನೀಡಿದ ಆದೇಶ ಅನುಸಾರ ಬಿಬಿಎಂಪಿ ಕ್ರಮ ಕೈಗೊಂಡಿದೆ ಹಾಗಾಗಿ ಹೈಕೋರ್ಟ್‌ಗೆ ಧನ್ಯವಾದ ಸಲ್ಲಿಸಲೇ ಬೇಕು.

ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ

ಹೈಕೋರ್ಟ್‌ ಸೂಚನೆ ಹಿನ್ನಲೆಯಲ್ಲಿ ಕಳೆದೆರೆಡು ದಿನಗಳಿಂದ ಭಿತ್ತಿಪತ್ರ, ಗೋಡೆ ಬರಹಗಳನ್ನು ಅಳಿಸುವಲ್ಲಿ ಪಾಲಿಕೆ ಸಿಬ್ಬಂದಿ ಜತೆಗೆ ಮೇಯರ್‌ ಕೂಡ ಕೈ ಜೋಡಿಸಿದ್ದಾರೆ.

ಮೇಯರ್‌ ಸಂಪತ್‌ರಾಜ್‌ ಶನಿವಾರ ಗಾಂಧಿನಗರದಲ್ಲಿ ಭಿತ್ತಿಪತ್ರ ತೆರವಿಗೆ ಮುಂದಾದರೆ, ಭಾನುವಾರ ಶಿವಾಜಿನಗರ ಆದರ್ಶ ಚಿತ್ರಮಂದಿರದ ಸುತ್ತಮುತ್ತಲ ರಸ್ತೆಗಳ ಇಕ್ಕೆಲಗಳಲ್ಲಿನ ಗೋಡೆಗಳು, ಮರ, ವಿದ್ಯುತ್‌ ಕಂಬಗಳ ಮೇಲೆ ರಾಋಆಜಿಸುತ್ತಿದ್ದ ಭಿತ್ತಿಪತ್ರ, ಪೋಸ್ಟರ್‌ಗಳನ್ನು ಕಿತ್ತು ಬಿಸಾಡಿದರು.

ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌

ನಗರದ ಪ್ರಮುಖ ರಸ್ತೆಗಳು, ಜನದಟ್ಟಣೆ ಪ್ರದೇಶಗಳಲ್ಲಿ ಭಿತ್ತಿಪತ್ರಗಳು ಮಾಯವಾಗಿದ್ದವು. ಆದರೆ, ಹೊರ ವಲಯ, ಬಡಾವಣೆಗಳಲ್ಲಿ ಅಂಟಿಸಿದ್ದ ಭಿತ್ತಿಪತ್ರಗಳು, ಪೋಸ್ಟರ್‌ಗಳು ಕಣ್ಣಿಗೆ ರಾಚುತ್ತಲೇ ಇದೆ.

 ಸ್ಟ್ರಕ್ಚರ್‌ ತೆರವಿಗೆ ಸೆ.5ರವರೆಗೆ ಗಡುವು

ಸ್ಟ್ರಕ್ಚರ್‌ ತೆರವಿಗೆ ಸೆ.5ರವರೆಗೆ ಗಡುವು

ಜಾಹೀರಾತು ಏಜೆನ್ಸಿಗಳು, ಖಾಸಗಿ ಕಟ್ಟಡಗಳ ಮಾಲೀಕರು ಜಾಹೀರಾತು ಫಲಕಗಳ ಲೋಹದ ಸಂರಚನೆಯಗಳನ್ನು ಸೆ.5ರೊಳಗೆ ಸ್ವಇಚ್ಛೆಯಿಂದ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್

 94 ಜನರ ವಿರುದ್ಧ ಪ್ರಕರಣ ದಾಖಲು

94 ಜನರ ವಿರುದ್ಧ ಪ್ರಕರಣ ದಾಖಲು

ಹೈಕೋರ್ಟ್‌ ಆದೇಶ ಬಂದ ಬಳಿಕ ವೈಟ್‌ ಫೀಲ್ಡ್‌ ಪೊಲೀಸರು ವಿವಿಧೆಡೆ ಅಕ್ರಮವಾಗಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ ಅಳವಡಿಸಿ ನಗರದ ಅಂದ ಹಾಳು ಮಾಡಿದ ಆರೋಪದ ಮೇರೆಗೆ 94 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹದ್‌ ತಿಳಿಸಿದ್ದಾರೆ.

 ಪ್ರತಿದಿನ ಒಂದು ಗಂಟೆ ಭಿತ್ತಿಪತ್ರ ತೆರವು ಕಾರ್ಯ

ಪ್ರತಿದಿನ ಒಂದು ಗಂಟೆ ಭಿತ್ತಿಪತ್ರ ತೆರವು ಕಾರ್ಯ

ಪ್ರತಿದಿನ ಒಂದು ಗಂಟೆಗಳ ಕಾಲ ತಮ್ಮ ಕಾರ್ಯ ವ್ಯಾಪ್ತಿ ಪ್ರದೇಶದಲ್ಲಿ ಭಿತ್ತಿಪತ್ರಗಳ ತೆರವು ಕಾರ್ಯ ಕೈಗೊಳ್ಳಲಾಗುತ್ತದೆ. ಇದಕ್ಕೆ ಅಗತ್ಯ ಸೂಚನೆ ನೀಡಲಾಗಿದೆ. ಆಯಾ ವಾರ್ಡ್‌ ಕಾರ್ಪೊರೇಟರ್‌ಗಳು ಮತ್ತು ವಾರ್ಡ್‌ ಅಧಿಕಾರಿಗಳು ತಮ್ಮ ವಾರ್ಡ್‌ ವ್ಯಾಪ್ತಿಯ ಭಿತ್ತಿಪತ್ರ, ಪೋಸ್ಟರ್‌ಗಳ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಜಾಹೀರಾತುಗಳು ಯಾವುವು?

ಜಾಹೀರಾತುಗಳು ಯಾವುವು?

ಉದ್ಯೋಗಾವಕಾಶ, ಜ್ಯೋತಿಷ್ಯ, ಪಿಜಿ ಕೋರ್ಸ್‌, ಶಿಕ್ಷಣ ಕೋರ್ಸುಗಳು, ಆರೋಗ್ಯಕ್ಕೆ ಸಂಬಂಧಿಸಿದ ಜಾಹೀರಾತು ಪ್ರಕರಣೆಗಳು ಎಲ್ಲೆಡೆ ರಾರಾಜಿಸುತ್ತಿವೆ, ಪಾಲಿಕೆಯ ಪೌರಕಾರ್ಮಿಕರೂ ಕೂಡ ಪೋಸ್ಟರ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

English summary
Removing flex, poster and illegal hoardings in the city, BBMP officials have worked this Sunday too. Mayor Sampath Raj was also on streets in the morning to supervise the operations following recent high court order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X