ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಸೂಚನಾ ಫಲಕಗಳಿನ್ನು ದೆಹಲಿ ಮಾದರಿ

By Nayana
|
Google Oneindia Kannada News

ಬೆಂಗಳೂರು, ಜೂನ್ 22: ನಗರದಲ್ಲಿ ನವದೆಹಲಿ ಮಾದರಿಯ ಸೂಚನಾ ಫಲಕವನ್ನು ಅಳವಡಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಅಧಿಕ ವಾಹನಗಳು ಸಂಚರಿಸುವ 12 ಕಾರಿಡಾರ್‌ಗಳಲ್ಲಿ ಸೂಚನಾ ಫಲಕ ಅಳವಡಿಸಲಿದೆ.

ಜುಲೈ ತಿಂಗಳಲ್ಲಿ ಸೂಚನಾ ಫಲಕಗಳ ಅಳವಡಿಕೆಗೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಅದನ್ನು ಎಲ್ಲರಿಗೂ ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗುತ್ತದೆ. ಪ್ರತಿ 30 ಮೀಟರ್‌ಗಳಿಗೊಂದು ಫಲಕವನ್ನು ಹಾಕಲಾಗುತ್ತದೆ. ಇದರಿಂದ ನಗರಕ್ಕೆ ಹೊಸದಾಗಿ ಬರುವವರಿಗೆ ರಸ್ತೆ ಮಾರ್ಗವನ್ನು ಹುಡುಕುವುದು ಇನ್ನುಮುಂದೆ ಸುಲಭವಾಗಲಿದೆ.

ರಸ್ತೆ ಗುಂಡಿ ಕಂಡರೆ ಆನ್ಲೈನ್ ನಲ್ಲಿ ಬಿಬಿಎಂಪಿಗೆ ದೂರು ನೀಡಿರಸ್ತೆ ಗುಂಡಿ ಕಂಡರೆ ಆನ್ಲೈನ್ ನಲ್ಲಿ ಬಿಬಿಎಂಪಿಗೆ ದೂರು ನೀಡಿ

ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಗೆ 2,491 ಕೋಟಿ ರೂ. ಅನುದಾನವನ್ನು ಒದಗಿಸಿದೆ. ಇದರಲ್ಲಿ 200 ಕೋಟಿ ರೂ.ಗಳನ್ನು ರಸ್ತೆ ಉಬ್ಬುಗಳ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ , ರಸ್ತೆ ವಿಭಜಕಗಳು ಮತ್ತು ಜಂಕ್ಷನ್‌ಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಪಾಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

BBMP will install sign boards like Delhi streets

ನವದೆಹಲಿಯಲ್ಲಿ ಉತ್ತಮ ಮಾರ್ಗ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ನಗರದಲ್ಲಿ ಅಳವಡಿಸಿರುವ ಫಲಕಗಳು ಸಾರ್ವಜನಿಕರಿಗೆ ಕಾಣುವುದಿಲ್ಲ, ಕೆಲ ಕಬ್ಬಿಣದ ಫಲಕಗಳು ಮಳೆಯಿಂದ ತುಕ್ಕು ಹಿಡಿದು ಹಾಳಾಗಿವೆ. ಸೂಚನಾ ಫಲಕಗಳ ಬದಲಾವಣೆಗೆ 10 ಕೋಟಿ ರೂ. ಮೀಸಲಿಡಲಾಗಿದೆ. ಉಕ್ಕಿನಿಂದ ತಯಾರಿಸಲ್ಪಟ್ಟ ಅಂತಾರಾಷ್ಟ್ರೀಯ ಗುಣಮಟ್ಟದ ಫಲಕಗಳನ್ನು ಹಾಕಲಾಗುತ್ತಿದೆ.

English summary
BBMP has decided to install sign boards in the line Delhi corporation which shows clear vision with big words. The authority has identified 12 corridors of thick populated and heavy traffic area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X