ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ನಿವೇಶನ ಬಿಬಿಎಂಪಿ ಸ್ವತ್ತು' ಫಲಕ ಹಾಕುವ ಮೊದಲು ತೆರಿಗೆ ಪಾವತಿಸಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟಲು ಇನ್ನೂ ವಿಳಂಬ ಮಾಡದಿರಿ. ಇಲ್ಲವಾದಲ್ಲಿ ನಿಮ್ಮ ನಿವೇಶನಗಳ ಮುಂದೆ 'ಈ ನಿವೇಶನ ಬಿಬಿಎಂಪಿ ಸ್ವತ್ತು' ಎನ್ನುವ ನಾಮಫಲಕ ಬೀಳುವುದೊಂದು ಗ್ಯಾರಂಟಿ.

ದಾಖಲೆ ಪ್ರಕಾರ ನಿವೇಶನ ನಿಮ್ಮದೆ, ಆದರೆ ಅದರ ಮುಂದೆ ಈ ನಿವೇಶನ ಬಿಬಿಎಂಪಿ ಸ್ವತ್ತು ಎಂಬ ಫಲಕ ಮಾತ್ರ ನಮ್ಮದು ಇರಲಿದೆ. ನಿವೇಶನ ಎಂಬ ಕಾರಣಕ್ಕೆ ಆಸ್ತಿ ತೆರಿಗೆ ಪಾವತಿಸದೆ ವಂಚಿಸುತ್ತಿರುವವರಿಗೆ ಪಾಠ ಕಲಿಸಲು ಬಿಬಿಎಂಪಿ ಈ ರೀತಿಯ ಆಲೋಚನೆ ಮಾಡಿದೆ. ನಿವೇಶನಗಳ ಮಾಲೀಕರಿಂದ ತೆರಿಗೆ ಪಾವತಿ ಆಗಿರದಿದ್ದರೆ ಅವುಗಳ ಮುಂದೆ ಫಲಕ ಅಳವಡಿಸುವಂತೆ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೂಚಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಪತ್ತೆ ಮತ್ತು ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಅದರಂತೆ 19 ಲಕ್ಷ ಆಸ್ತಿಗಳನ್ನು ಪತ್ತೆ ಹಚ್ಚಿ ಅವುಗಳಿಂದ ತೆರಿಗೆ ವಸೂಲಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

BBMP will go rigorously on tax evaders

ಲೆಕ್ಕಕ್ಕೆ ಸಿಗದ ನಿವೇಶನಗಳಿಂದ ತೆರಿಗೆ ವಸೂಲು ಮಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ. ನಿವೇಶನ ಮಾಲೀಕರು ಕೂಡ ಪತ್ತೆಯಾಗದೆ ತೆರಿಗೆ ವಸೂಲಿ ಆಗುವುದಿಲ್ಲ. ಹೀಗಾಗಿ ನಿವೇಶನ ಮಾಲೀಕರು ತಾವಾಗಿಯೇ ಬಿಬಿಎಂಪಿಗೆ ಬರುವಂತೆ ಮಾಡಲು ಹೊಸ ಪ್ಲ್ಯಾನ್ ರೂಪಿಸಲಾಗಿದೆ.

2 ಲಕ್ಷಕ್ಕೂ ಹೆಚ್ಚು ನಿವೇಶನಗಳು: ಬಿಬಿಎಂಪಿ ಅಧಿಕಾರಿಗಳ ಮಾಹಿತಿಯಂತೆ ಈಗಾಗಲೇ ಲೆಕ್ಕ ಹಾಕಿರುವ 19 ಲಕ್ಷ ಆಸ್ತಿಗಳಲ್ಲಿ 2017-18 ನೇ ಸಾಲಿನಲ್ಲಿ 16 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸುತ್ತಿದ್ದರು. ಇನ್ನು 3 ಲಕ್ಷ ಆಸ್ತಿಗಳಿಂದ ತೆರಿಗೆ ವಸೂಲು ಮಾಡಬೇಕಿದೆ. ಲೆಕ್ಕಕ್ಕೆ ಸಿಗದ ಆಸ್ತಿಗಳೆಂದರೆ ನಿವೇಶನಗಳಾಗಿದ್ದು ಬಿಬಿಎಂಪಿ ಅಂದಾಜಿನ ಪ್ರಕಾರ 2 ಲಕ್ಷಕ್ಕೂ ಹೆಚ್ಚು ನಿವೇಶನಗಳು ಬೆಂಗಳೂರಿನಲ್ಲಿದೆ.

ದಾಖಲೆಗಳಿಲ್ಲದ ನಿವೇಶನ ಮಾಲೀಕರನ್ನು ಪತ್ತೆ ಮಾಡಲು ಯಾವುದೇ ರೀತಿಯ ದಾಖಲೆಗಳು ಬಿಬಿಎಂಪಿಯ ಬಳಿ ಇಲ್ಲ. ಅದರಲ್ಲೂ ಹೆಚ್ಚು ನಿವೇಶನಗಳು ಹೊಸ ವಾರ್ಡ್ ಗಳಲ್ಲಿದ್ದು ಅವುಗಳ ಖಾತೆ ಮಾಡಿಕೊಂಡಿರುವುದು ಸೇರಿ ಇನ್ನಿತರೆ ದಾಖಲೆಗಳು ದೊರೆಯುತ್ತಿಲ್ಲ.

ನಿವೇಶನ ಮಾಲೀಕರು ವಿದೇಶದಲ್ಲಿ, ಬೇರೆ ಊರುಗಳಲ್ಲಿ ವಾಸಿಸುತ್ತಿರುವುದರಿಂದ ಅವರ ಪತ್ತೆಯೂ ಆಗುತ್ತಿಲ್ಲ. ಬಿಬಿಎಂಪಿ ಸ್ವತ್ತು ನಾಮಫಲಕ ಹಾಕಿದರೆ ನಿವೇಶನ ಮಾಲೀಕರು ಬಿಬಿಎಂಪಿ ಕಚೇರಿಯನ್ನು ಸಂಪರ್ಕಿಸುತ್ತಾರೆ ಎಂಬ ವಿಶ್ವಾಸವನ್ನು ಬಿಬಿಎಂಪಿ ಅಧಿಖಾರಿಗಳು ವ್ಯಕ್ತಪಡಿಸಿದ್ದಾರೆ.

English summary
BBMP decided to put bbmp name plate those who avoid Property taxes. BBMP will put tax evaders name in the sites after their notices. According to survey nearly 2 lakh property owners who have not paid the taxes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X