ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

By Nayana
|
Google Oneindia Kannada News

ಬೆಂಗಳೂರು, ಜು.16: ಆಸ್ತಿ ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳಲು ಕೆಲವು ಮಾಲಿಕರು ನಿರಂತ್ರಣ ಪ್ರಯತ್ನದಲ್ಲಿದ್ದಾರೆ, ಇಂಥವರನ್ನು ಪತ್ತೆ ಮಾಡಲು ಬಿಬಿಎಂಪಿಗೆ ಇಸ್ರೋ ನೆರವು ನೀಡಲಿದೆ.

ಬಿಬಿಎಂಪಿ 500 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಅನುಭವಿಸಿದೆ, ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೃಹತ್‌ ಕಟ್ಟಡಗಳ ವಿವರವನ್ನು ತಪ್ಪಾಗಿ ನೀಡಿ ವಂಚಿಸುತ್ತಿರುವವರ ಪತ್ತೆಗೆ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಲಾಗಿದೆ. ಆಸ್ತಿ ಮಾಲಿಕರಿಗೆ ಡಿಮ್ಯಾಂಡ್‌ ನೋಡಿಸ್‌ ನೀಡಲಾಗಿದೆ.ಇದೀಗ ಉಳಿದ ಆಸ್ತಿಗಳಿಂದಾಗುವ ವಂಚನೆ ಪತ್ತೆ ಹಚ್ಚಲು ಇಸ್ರೋ ನೆರವು ನೀಡುತ್ತಿದೆ.

23 ಸಾವಿರ ಹೊಸ ಕಟ್ಟಡಗಳ ತೆರಿಗೆ ಬಾಕಿ: ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು23 ಸಾವಿರ ಹೊಸ ಕಟ್ಟಡಗಳ ತೆರಿಗೆ ಬಾಕಿ: ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು

ಕಳೆದೆರೆಡು ವರ್ಷಗಳ ಇಮೇಜ್‌ ಹಾಗೂ ಹೊಸದಾಗಿ ನೀಡಲಾಗುವ ಇಮೇಜ್‌ನಲ್ಲಿ ಹೋಲಿಕೆ ಮಾಡಿ ಎಷ್ಟು ಕಟ್ಟಡಗಳು ಹೊಸದಾಗಿ ನಿರ್ಮಾಣವಾಗಿದೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಅದರಿಂದ ಆ ಆಸ್ತಿಗಳಿಗೆ ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗುತ್ತದೆ.

ಕಳೆದೆರೆಡು ವರ್ಷಗಳ ಹಿಂದೆ ಕೆಲಕಡೆಗಳಲ್ಲಿ ಡ್ರೋನ್‌ ಬಳಸಿ ಪ್ರಾಯೋಗಿಕವಾಗಿ ಆಸ್ತಿಗಳ ಸರ್ವೇ ಮಾಡಲಾಗಿತ್ತು. ಇದೀಗ ಪೈಲಟ್‌ ಯೋಜನೆಯಲ್ಲಿ ಯಾವುದಾದರೊಂದು ವಲಯ ವ್ಯಾಪ್ತಿಯಲ್ಲಿನ ಆಸ್ತಿಗಳ ವಿಸ್ತೀರ್ಣವನ್ನು ಅಳತೆ ಮಾಡಲಾಗುತ್ತದೆ.

 ಡ್ರೋಣ್‌ ಕ್ಯಾಮರಾ ಮೂಲಕ ಅಳತೆ

ಡ್ರೋಣ್‌ ಕ್ಯಾಮರಾ ಮೂಲಕ ಅಳತೆ

ಟ್ರೋಣ್‌ ಕ್ಯಾಮರಾ ಮೂಲಕ ಆಸ್ತಿಗಳ ಏರಿಯಲ್‌ ಸರ್ವೇ ನಡೆಸಲೂ ನಿರ್ಧರಿಸಲಾಗಿದೆ. ಈ ಪ್ರಸ್ತಾವನ ಹಿಂದಿನಿಂದಲೂ ಇದ್ದು ಇದಕ್ಕೆ ಈಗ ಚಾಲನೆ ನೀಡಲಾಗುತ್ತಿದೆ. ಸಣ್ಣ ಕಟ್ಟಡಗಳ ಮಹಡಿಯನ್ನು ಲೆಕ್ಕ ಹಾಕಲು ಮತ್ತು ಅದರ ನಿರ್ಮಿತ ಪ್ರದೇಶವನ್ನು ಅಳತೆ ಮಾಡಲು ಡ್ರೋನ್‌ ಬಳಸಲಾಗುತ್ತದೆ.

 ತೆರಿಗೆ ಕಟ್ಟದ ಹೊಸ ಆಸ್ತಿಗಳ ಪತ್ತೆ

ತೆರಿಗೆ ಕಟ್ಟದ ಹೊಸ ಆಸ್ತಿಗಳ ಪತ್ತೆ

ಈಗಾಗಲೇ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುವ ಆಸ್ತಿಗಳು ಬಿಬಿಎಂಪಿಯಿಂದ ಅನುಮತಿ ಪಡೆದು ನಿರ್ಮಾಣ ಮಾಡಲಾಗಿದಿಯೇ ಎಂಬುದನ್ನು ಇಸ್ರೋ ನೀಡುವ ಸ್ಯಾಟಲೈಟ್‌ ಇಮೇಜ್‌ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹೊಸದಾಗಿ ನಿರ್ಮಾಣವಾಗಿರುವ ಮತ್ತು ತೆರಿಗೆ ವ್ಯಾಪ್ತಿಗೊಳಪಡದ ಆಸ್ತಿಗಳನ್ನು ಕೂಡ ಸ್ಯಾಟಲೈಟ್‌ ಇಮೇಜ್‌ ಬಳಸಿ ಪತ್ತೆ ಮಾಡಲಾಗುತ್ತದೆ.

 ಅನ್‌ಮ್ಯಾನ್ಡ್‌ ಏರಿಯಲ್‌ ಸಿಸ್ಟಂ ಮೂಲಕ ಸರ್ವೆ

ಅನ್‌ಮ್ಯಾನ್ಡ್‌ ಏರಿಯಲ್‌ ಸಿಸ್ಟಂ ಮೂಲಕ ಸರ್ವೆ

ಡ್ರೋನ್ ಕ್ಯಾಮರಾ ಬಳಸಿ ಅನ್‌ಮ್ಯಾನ್ಡ್‌ ಏರಿಯಲ್‌ ಸಿಸ್ಟಂ ಮೂಲಕ ಆಸ್ತಿಗಳ ಏರಿಯಲ್‌ ಸರ್ವೇ ಮಾಡುವ ಕುರಿತು ಖಾಸಗಿ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗುತ್ತದೆ. 2-3 ಸಭೆಗಳ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

 ಆಸ್ತಿ ಸಂಖ್ಯೆ ಹೆಚ್ಚಿಸಲು ಕ್ರಮ

ಆಸ್ತಿ ಸಂಖ್ಯೆ ಹೆಚ್ಚಿಸಲು ಕ್ರಮ

ಕಳೆದೆರೆಡು ವರ್ಷಗಳ ಹಿಂದೆ ಜಿಐಎಸ್‌ ಮ್ಯಾಪಿಂಗ್‌ ಮಾಡಿ 16 ಲಕ್ಷವಿದ್ದ ಆಸ್ತಿಗಳ ಸಖ್ಯೆ 19 ಲಕ್ಷಕ್ಕೆ ಬಿಬಿಎಂಪಿ ಹೆಚ್ಚಿಸಿತ್ತು. ಆದರೆ, ಆಸ್ತಿಗಳ ಸಂಖ್ಯೆ 20 ಲಕ್ಷಕ್ಕೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಇಸ್ರೋ ನೆರವು ಪಡೆದು ಆಸ್ತಿಗಳನ್ನು ಪತ್ತೆ ಮಾಡಲಾಗುತ್ತದೆ.

English summary
BBMP is thinking to take ISRO assistance in surveying the properties through drone camera in Bengaluru. Recently the authority had find out that property owners have cheating on tax under self assessment scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X