ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಧಾರ್‌ ಕಾರ್ಡ್‌ ಸಮಸ್ಯೆಗೆ ಕೊನೆ: ಪ್ರತಿ ವಾರ್ಡ್‌ನಲ್ಲೂ ಅಪ್‌ಡೇಟ್‌ ಸೆಂಟರ್‌

By Nayana
|
Google Oneindia Kannada News

ಬೆಂಗಳೂರು, ಜು.15: ಇನ್ನುಮುಂದೆ ಆಧಾರ್‌ ಕಾರ್ಡ್‌ ಅಪಡೇಟ್‌ಗೆ ಆಧಾರ್‌ ಕೇಂದ್ರಗಳನ್ನು ಹುಡುಕಿಕೊಂಡ ಅಲೆಯಬೇಕಿಲ್ಲ, ಪ್ರತಿ ಬಿಬಿಎಂಪಿ ವಾರ್ಡ್‌ನಲ್ಲೂ ಅಪ್‌ಡೇಟ್‌ ಕೇಂದ್ರಗಳನ್ನು ಇ-ಆಡಳಿತ ಇಲಾಖೆಯು ಆರಂಭಿಸುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲವು ಯೋಜನೆಗಳಿಗೆ ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಕೆಲವೊಂದು ಜನರ ಪ್ರಮಾಣಪತ್ರ. ಮೊಬೈಲ್‌ ಸೇವೆ, ಪಿಂಚಣಿ ಮತ್ತಿತರೆ ಸೇವೆಗಳಿಗೆ ಅದು ಅನಿವಾರ್ಯವೂ ಆಗಿಬಿಟ್ಟಿದೆ. ಇಂಥ ಆಧಾರ್‌ ಕಾರ್ಡ್‌ನಲ್ಲಿ ಆಗಿರುವ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲು ಕಷ್ಟ ಪಡಬೇಕಾಗಿತ್ತು.

ಆಧಾರ್ ಪ್ಯಾನ್ ಜೋಡಣೆಗೆ ಮಾರ್ಚ್ 31, 2019 ಕಡೆಯ ದಿನಆಧಾರ್ ಪ್ಯಾನ್ ಜೋಡಣೆಗೆ ಮಾರ್ಚ್ 31, 2019 ಕಡೆಯ ದಿನ

ನಗರದಲ್ಲಿ ಸದ್ಯ 150 ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಮಾತ್ರ ಆಧಾರ್‌ ನೋಂದಣಿ ಮತ್ತು ಅಪ್‌ಡೇಟ್‌ ಸೌಲಭ್ಯವಿದೆ. ಅಲ್ಲದೆ 8 ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಈ ಸೇವೆ ಇದೆ.

BBMP to open Aadhaar updating centres in all 198 wards

100 ಕ್ಕೂ ಅಧಿಕ ಬೇರೆ ಬೇರೆ ಸೇವೆ ನೀಡುವ ಬೆಂಗಳೂರು ಒಒನ್‌ ಕೇಂದ್ರದಲ್ಲಿ ದಿನಕ್ಕೆ 25-30 ಮಂದಿಗೆ ಆಧಾರ್‌ ಸೇವೆ ಕಲ್ಪಿಸಲಾಗುತ್ತದೆ. ಕೆಲ ಕೇಂದ್ರಗಳಲ್ಲಿ ಟೋಕನ್‌ ನೀಡಲಾಗುತ್ತಿದೆ. ಹೀಗಾಗಿ ಸಣ್ಣಪುಟ್ಟ ತಿದ್ದುಪಡಿ ಐದಾರು ದಿನ ಬೆಂಗಳೂರು ಒನ್‌ ಕೇಂದ್ರಗಳಿಗೆ ಅಲೆದಾಡಬೇಕಾಗುತ್ತಿತ್ತು.

ಅದೂ ನಿಗದಿತ ಕಾಲಾವಧಿಯೊಳಗೆ ಕೆಲಸ ಆಗುತ್ತಿರಲಿಲ್ಲ. ಈ ಎಲ್ಲ ಸಮಸ್ಯೆಗಳ ನಿವಾರಣೆಗಾಗಿಯೇ ಇ-ಆಡಳಿತ ಇಲಾಖೆಯು ವಾರ್ಡ್ ಕಚೇರಿಗಳಲ್ಲಿ ಆಧಾರ್‌ ಅಪ್‌ಡೇಟ್‌ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಿದೆ.
ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಿಂದೆ ಖಾಸಗಿ ಏಜೆನ್ಸಿಗಳನ್ನು ನಿಯೋಜಿಸಲಾಗಿತ್ತು.

ಅವರು ಹಣ ಸುಲಿಗೆ ಮಾಡಿರುವ ಜತೆಗೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳಿಗೆ ಆಧಾರ್‌ ಮಾಡಿಕೊಟ್ಟಿದ್ದರು ಎನ್ನುವ ಆರೋಪಗಳು ಕೇಳಿ ಬಂದಿವೆ. ಹಾಗಾಗಿ ಖಾಸಿ ಏಜೆನ್ಸಿಗಳ ಸೇವೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

English summary
Citizens of Bengaluru will be more easy to across aadhaar cards, change of name or address and other facilities regarding the same in a center which will be opened in every wards of BBMP. Department of e-administration has taken an initiation to install these centers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X