ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಆಸ್ತಿ ಜಪ್ತಿಯಾಗಬಾರದು ಎಂದರೆ ಮೊದಲು ತೆರಿಗೆ ಕಟ್ಟಿ: ಬಿಬಿಎಂಪಿ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಬಿಬಿಎಂಪಿಗೆ ತೆರಿಗೆ ಕಟ್ಟದೆ ಹಲವು ವರ್ಷಗಳಿಂದ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ಬಾಕಿದಾರರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ. ಒಂದೊಮ್ಮೆ ತೆರಿಗೆ ಪಾವತಿಸದಿದ್ದರೆ ಅವರ ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ತೆರಿಗೆ ಕಟ್ಟಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಬಿಎಂಪಿ, ತೆರಿಗೆ ಬಾಕಿದಾರರಿಗೆ ಆಸ್ತಿ ಜಪ್ತಿಇ ವಾರಂಟ್ ನೀಡಲು ಪಾಲಿಕೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

 ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

ಬಾಕಿ ತೆರಿಗೆ ಪಾವತಿಸುವಂತೆ ಕಾನೂನು ಪ್ರಕಾರ ಮೂರು ಬಾರಿ ನೋಟಿಸ್ ನೀಡಿದರೂ ತೆರಿಗೆ ಪಾವತಿಸದೆ ನಿರ್ಲಕ್ಷ್ಯ ತೋರುತ್ತಿರುವ ಆಸ್ತಿ ಮಾಲೀಕರ ವಿರುದ್ಧ ಜಪ್ತಿ ವಾರಂಟ್ ನೀಡುವಂತೆ ಬಿಬಿಎಂಪಿ ಜಂಟಿ ಆಯುಕ್ತರು ಎಲ್ಲಾ ಎಂಟು ವಲಯಗಳ ಜಂಟಿ, ಉಪಯುಕ್ತರಿಗೆ ಕಚೇರಿ ಟಿಪ್ಪಣಿ ಹೊರಡಿಸಿ, ತಮ್ಮ ವ್ಯಾಪ್ತಿಯ ಎಲ್ಲಾ ಕಂದಾಯ ಅಧಿಕಾರಿಗಳಿಗೆ ಜಪ್ತಿ ವಾರಂಟ್ ಜಾರಿ ಮಾಡುವ ಬಗ್ಗೆ ನಿರ್ದೇಶನ ನೀಡುವಂತೆ ಸೂಚನೆ ನೀಡಿದ್ದಾರೆ.

BBMP to issue warrants, seize properties of tax defaulters

ಬೆಂಗಳೂರು ನಗರದ ಆಸ್ತಿದಾರರು ಬಿಬಿಎಂಪಿ ನೀಡಿದ ನೋಟಿಸ್ ನಿರ್ಲಕ್ಷಿಸಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಎಚ್ಚೆತ್ತುಕೊಳ್ಳಲೇ ಬೇಕಾಗಿದೆ. ತಪ್ಪಿದಲ್ಲಿ ತಮ್ಮ ಆಸ್ತಿ ಜಪ್ತಿಗೆ ಒಳಗಾಗಬೇಕಾಗುತ್ತದೆ.

ಈಗಾಗಲೇ ಬಿಬಿಎಂಪಿ ಆಸ್ತಿ ತೆರಿಗೆ ಕಟ್ಟದೆ ಇರುವವರ ಪಟ್ಟಿಯನ್ನು ತಯಾರು ಮಾಡಿದ್ದು, ತೆರಿಗೆ ಪಾವತಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತಿದ್ದಾರೆ. ಮೂರು ಬಾರಿ ನೋಟಿಸ್ ಪಡೆದರೂ ತೆರಿಗೆ ಪಾವತಿಗೆ ಮುಂದಾಗದೇ ಇರುವವರ ಆಸ್ತಿಯನ್ನು ಜಪ್ತಿ ಮಾಡಲು ಬಿಬಿಎಂಪಿ ಮುಂದಾಗಿದೆ.

English summary
The Bruhat Bengaluru Mahanagara Palike (BBMP) is all set to crack the whip on those who have defaulted on payment of property tax for a long.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X