ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : ಕರ್ನಾಟಕ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್. ಬೆಂಗಳೂರು ನಗರದಲ್ಲಿ ಕ್ಯಾಂಟೀನ್‌ನನ್ನು ಬಿಬಿಎಂಪಿ ನಡೆಸುತ್ತಿದೆ. ನಗರದ ಕ್ಯಾಂಟೀನ್‌ನಲ್ಲಿನ ಮೆನು ಬದಲಾವಣೆ ಮಾಡಲು ಪಾಲಿಕೆ ಮುಂದಾಗಿದೆ.

ಬೆಂಗಳೂರು ನಗರದಲ್ಲಿ 198 ಇಂದಿರಾ ಕ್ಯಾಟೀನ್‌, ಹಲವಾರ ಸಂಚಾರಿ ಕ್ಯಾಂಟೀನ್‌ಗಳಿವೆ. ಕ್ಯಾಂಟೀನ್‌ಗೆ ಆಗಮಿಸಿದ 1,500 ಜನರು ಮೆನು ಬದಲಾವಣೆಗಾಗಿ ಸಲಹೆ ನೀಡಿದ್ದಾರೆ. ಕಾಫಿ, ಟೀ ಒದಗಿಸುವಂತೆಯೂ ಸಲಹೆ ಬಂದಿದೆ.

ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್

ಜನರ ಸಲಹೆ ಆಧರಿಸಿ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆ ಮಾಡಲಿದೆ. ಟೀ ಅನ್ನು ಬೆಳಗಿನ ಉಪಹಾರದ ಜೊತೆ ಒದಗಿಸುವ ಕುರಿತು ಚಿಂತನೆ ನಡೆಸುತ್ತಿದೆ. ಇನ್ನೆರಡು ವಾರದಲ್ಲಿ ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆ ಆಗುತ್ತಿದೆ.

ಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟ

BBMP to change Indira Canteen food menu

ಬಿಬಿಎಂಪಿ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಜನರ ಸಲಹೆಯಂತೆ ಮೆನು ಬದಲಾವಣೆ ಮಾಡಲಾಗುತ್ತಿದೆ. ಇದರಿಂದಾಗಿ ಮತ್ತಷ್ಟು ಜನರನ್ನು ಕ್ಯಾಂಟೀನ್‌ಗೆ ಸೆಳೆಯಲು ಸಹಾಯಕವಾಗಲಿದೆ' ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ಗೆ ಹಣ ನೀಡದ ಸರ್ಕಾರ, ಇಕ್ಕಟ್ಟಿನಲ್ಲಿ ಬಿಬಿಎಂಪಿಇಂದಿರಾ ಕ್ಯಾಂಟೀನ್‌ಗೆ ಹಣ ನೀಡದ ಸರ್ಕಾರ, ಇಕ್ಕಟ್ಟಿನಲ್ಲಿ ಬಿಬಿಎಂಪಿ

ಇಂದಿರಾ ಕ್ಯಾಂಟೀನ್‌ಗಳಲ್ಲಿನ ಮೆನು ಬದಲಾವಣೆ ಬೆಂಗಳೂರು ನಗರದ ಕ್ಯಾಂಟೀನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಬೇರೆ ಜಿಲ್ಲೆಗಳ ಕ್ಯಾಂಟೀನ್‌ಗಳಿಗೆ ಇದು ಅನ್ವಯವಾಗುವುದಿಲ್ಲ.

English summary
Bruhat Bengaluru Mahanagara Palike (BBMP) will change the menu for all 198 Indira Canteen's in the Bengaluru city. BBMP to come up with some modifications in the food menu so that more people visit the canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X