ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ಲಾಸ್ಟರ್ ಆಫ್‌ ಪ್ಯಾರೀಸ್ ಗಣೇಶ ನಿಷೇಧಕ್ಕೆ ಬಿಬಿಎಂಪಿ ಚಿಂತನೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 25: ಕಳೆದ ವರ್ಷವೇ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿ ಮೂರ್ತಿ ಬಳಕೆ ಮಾಡದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿತ್ತು. ಅದಕ್ಕೆ ಬಿಬಿಎಂಪಿಯು ತಲೆಯಾಡಿಸಿತ್ತು. ಆದರೆ ಅದು ಮಧ್ಯಂತರ ಆದೇಶವಾಗಿದ್ದರಿಂದ ರಾಜಾರೋಷವಾಗಿ ಪ್ಲಾಸ್ಟರ್ ಆಫ್‌ ಪ್ಯಾರೀಸ್ ಗಣೇಶ ಮೂರ್ತಿಯನ್ನು ನಗರದಲ್ಲಿ ಪ್ರತಿಷ್ಠಾಪಿಸಿದ್ದರು.

ಆದರೆ ಈ ಬಾರಿ ಗಣೇಶ ಚತುರ್ಥಿ ತಿಂಗಳು ಇರುವ ಮೊದಲೇ ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಷೇಧಿಸುವ ಕುರಿತು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಪ್ಲಾಸ್ಟರ್ ಪ್ಯಾರೀಸ್ ನೀರಿನಲ್ಲಿ ಸುಲಭವಾಗಿ ಕರಗದಿರುವುದು ಮತ್ತೆ ಅಲ್ಲಿರುವ ಹಾನಿಕಾರಕ ಅಂಶಗಳು ಜನಚರಗಳಿಗೆ ಮಾರಕವಾಗಿರುವ ಹಿನ್ನಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಶ್ ಗಣೇಶನ ಮೂರ್ತಿಯನ್ನು ತಯಾರಿಸಲು ಹಾಗೂ ಪ್ರತಿಷ್ಠಾಪನೆ ನಿಷೇಧಿಸುವ ಸಾಧ್ಯತೆ ಇದೆ.

ಗಣೇಶನನ್ನು ಪ್ರತಿಷ್ಠಾಪಿಸಬೇಕೆ? ಬಿಬಿಎಂಪಿ ಅನುಮತಿ ಬೇಕೇ ಬೇಕುಗಣೇಶನನ್ನು ಪ್ರತಿಷ್ಠಾಪಿಸಬೇಕೆ? ಬಿಬಿಎಂಪಿ ಅನುಮತಿ ಬೇಕೇ ಬೇಕು

ಪಿಒಪಿ ಗಣಪತಿಯನ್ನು ಸಂಪೂರ್ಣವಾಗಿ ನಗರದಲ್ಲಿ ನಿಷೇಧಿಸಲು ಬಿಬಿಎಂಪಿ ಮುಂದಾಗಿದೆ. ಸಾರ್ವಜನಿಕ ಸ್ಥಳಗಳು, ಸಂಘಸಂಸ್ಥೆಗಳಲ್ಲಿ ಪಿಒಪಿ ಗಣಪತಿಯನ್ನು ಕೂರಿಸಬಾರದು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲು ಗಂಭೀರ ಚಿಂತನೆ ನಡೆದಿದೆ. ಒಂದು ವೇಳೆ ಷರತ್ತು ಮೀರಿ ಪ್ರತಿಷ್ಠಾಪಿಸಿದರೆ ದಂಡ ವಿಧಿಸಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಆಲೋಚನೆ ನಡೆಸಲಾಗಿದೆ.

 ಗಣೇಶನ ಮೂರ್ತಿ ಪರಿಸರಸ್ನೇಹಿಯಾಗಿರಬೇಕು

ಗಣೇಶನ ಮೂರ್ತಿ ಪರಿಸರಸ್ನೇಹಿಯಾಗಿರಬೇಕು

ನಗರದಲ್ಲಿ ಗಣೇಶ ಚತರ್ಥಿ ಪ್ರಯುಕ್ತ ಒಂದು ತಿಂಗಳುಗಳ ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವ ಗಣೇಶ ಸಂಪೂರ್ಣ ಪರಿಸರಸ್ನೇಹಿಯಾಗಿರುವಂತೆ ಕ್ರಮ ವಹಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಜತೆಗೂಡಿ ಬಿಬಿಎಂಪಿ ಹಲವು ಮಾರ್ಗಸೂಚಿಗಳನ್ನು ರೂಪಿಸಿದೆ.

 ಪಿಒಪಿ ಗಣೇಶ ಅಲ್ಲ ಖಾತ್ರಿ ಪತ್ರ ಪಡೆದುಕೊಳ್ಳಬೇಕು

ಪಿಒಪಿ ಗಣೇಶ ಅಲ್ಲ ಖಾತ್ರಿ ಪತ್ರ ಪಡೆದುಕೊಳ್ಳಬೇಕು

ಸಾರ್ವಜನಿಕ ಸ್ಥಳಗಳು ಅಥವಾ ಕಚೇರಿಯಲ್ಲಿ ಗಣಪತಿ ಕೂರಿಸಲು ಅನುಮತಿ ಪಡೆಯುವಾಗ ತಾವು ಕೂರಿಸುವ ಗಣಪತಿ ಪಿಒಪಿ ಗಣಪತಿ ಅಲ್ಲ ಎಂದು ಖಾತ್ರಿ ಪತ್ರ ಪಡೆದುಕೊಳ್ಳುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮ

 2016ರಲ್ಲೇ ಸರ್ಕಾರ ಪಿಒಪಿ ಗಣೇಶನನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು

2016ರಲ್ಲೇ ಸರ್ಕಾರ ಪಿಒಪಿ ಗಣೇಶನನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು

2016ರಲ್ಲೇ ಸರ್ಕಾರ ಪರಿಸರಕ್ಕೆ ಮಾರಜವಾಗುವ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶನನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ಗಣೇಶ ಮೂರ್ತಿಗಳ ತಯಾರಕರಿಂದ ಇದಕ್ಕೆ ಭಾರಿ ವಿರೋದ ವ್ಯಕ್ತವಾಗಿತ್ತು. ಕೆಲ ವರ್ಷಗಳಿಂದ ಮಾರಾಟವಾಗದೆ ಉಳಿಸಿರುವ ಲಕ್ಷಾಂತರ ರೂ ಮೌಲ್ಯದ ಗಣೇಶ ಮೂರ್ತಿಗಳು ನಮ್ಮ ಬಳಿ ಇದೆ. ಪಿಒಪಿ ಗಣೇಶ ನಿಷೇಧಿಸಿದರೆ ಇವುಗಳ ತಯಾರಿಕೆಗೆ ನಾವುಗಳು ವೆಚ್ಚವನ್ನು ಭರಿಸುವರು ಯಾರು ಎಂದು ಪ್ರಶ್ನಿಸಿದ್ದರು.ಹಾಗಾಘಿ ಕಳೆದ ಎರಡು ವರ್ಷ ವಿನಾಯಿತಿ ನೀಡಲಾಗಿತ್ತು.

 ಗಣೇಶ ಮೂರ್ತಿ ಎತ್ತರ ಐದು ಅಡಿಗೆ ನಿಗದಿ

ಗಣೇಶ ಮೂರ್ತಿ ಎತ್ತರ ಐದು ಅಡಿಗೆ ನಿಗದಿ

ಬಿಬಿಎಂಪಿ ಪಿಒಪಿ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ತಯಾರಿಕೆ, ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಕ್ಕೆ ನಿರ್ದರಿಸಿದೆ. ಸಾರ್ವಜನಿಕವಾಗಿ ಐದು ಅಡಿ ಮಿತಿ ಗೊತ್ತುಪಡಿಸಲಾಗಿದೆ. ಮಣ್ಣಿನ ಮೂರ್ತಿಗಳು ಹೆಚ್ಚು ತೂಕವಿರುವದರಿಂದ ಕೆಲವೊಮ್ಮೆ ಬಿರುಕು ಮೂಡುವ ಸಾಧ್ಯತೆ ಇದೆ. ಸಣ್ಣ ಪುಷ್ಕರಣಿ, ಟ್ಯಾಂಕ್‌, ಕಲ್ಯಾಣಿ ವಿಸರ್ಜಿಸುವುದು ಸವಾಲಾಗಿತ್ತು.

English summary
Ensuring eco friendly initiation, BBMP is thinking to abandon Ganesha idol which made by plaster of Paris. The authority also mandating prior permission for Ganesha installation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X