ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 2: ರಾಜ್ಯ ಸರ್ಕಾರಕ್ಕೆ ಈ ಬಾರಿ ಹಲವು ಯೋಜನೆಗಳ ಜಾರಿಯಿಂದ ಸಾಕಷ್ಟು ಹೊರೆಯಾಗಿದೆ. ಅದರೊಂದಿಗೆ ಆಡಳಿತ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದರೂ ಕೂಡ ತಮಗೇನು ಸಂಬಂಧವೇ ಇಲ್ಲ ಎನ್ನುವಂತೆ ಬಿಬಿಎಂಪಿ ಐಷಾರಾಮಿ ಕಾರುಗಳಿಗೆ ಬೇಡಿಕೆ ಇಟ್ಟಿದೆ.

ಈ ಕಾರುಗಳಿಗೆ ಕೋಟ್ಯಂತರ ರೂ. ವೆಚ್ಚವಾಗಲಿದೆ, ಬಿಬಿಎಂಪಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಐಷಾರಾಮಿ ಕಾರು ಖರೀದಿಗೆ ಚಿಂತನೆ ನಡೆಸಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆ ಹೊಸ ಕಾರುಗಳ ಖರೀದಿ ಮಾಡಿದ್ದ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತೆ ಕಾರು ಬದಲಾವಣೆ ಮಾಡುವುದಕ್ಕೆ ಮುಂದಾಗಿದ್ದು 12 ಹೊಸ ಐಷಾರಾಮಿ ಕಾರುಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಒಂದು ಸಿಹಿ,ಕಹಿ ಸುದ್ದಿಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಒಂದು ಸಿಹಿ,ಕಹಿ ಸುದ್ದಿ

ಒಂದೆಡೆ ಕೃಷಿ ಸಾಲ ಮನ್ನಾ ಇನ್ನೊಂದೆಡೆ ವಿವಿಧ ಯೋಜನೆಗಳಿಂದಾಗಿ ಸಾಕಷ್ಟು ವೆಚ್ಚವಾಗಲಿದೆ ಹಾಗಾಗಿ ಸರ್ಕಾರದ ಆಡಳಿತಾತ್ಮಕ ಮತ್ತು ಅನಗತ್ಯ ವೆಚ್ಚ ಕಡಿಮೆ ಇತಿಮಿತಿಯಲ್ಲಿ ವೆಚ್ಚ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಬಿಬಿಎಂಪಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಐಷಾರಾಮಿ ಕಾರು ಖರೀದಿಗೆ ಚಿಂತನೆ ನಡೆಸಿದ್ದಾರೆ.

BBMP strives to purchase new 12 cars!

ಎರಡು ಕೋಟಿ ರೂ. ವೆಚ್ಚ ಮಾಡಿ ಕಾರು ಖರೀದಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಆ.6ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸಭೆಯಲ್ಲಿ ಐಷಾರಾಮಿ ಕಾರು ಖರೀದಿ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

English summary
BBMP is planning to purchase 12 new cars for standing committee chiefs and officials despite state government's ban on new purchase of vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X