ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನುಡಿದಂತೆ ನಡೆದ ಪರಮೇಶ್ವರ್, ರಾಜಕಾಲುವೆ ಒತ್ತುವರಿ ತೆರವು ಪುನರಾರಂಭ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಪರಮೇಶ್ವರ್ ಅಧಿಕಾರಕ್ಕೆ ಬಂದಂದೇ ರಾಜಕಾಲುವೆ ಒತ್ತುವರಿ ತೆರವು ಶತಾಯಗತಾಯ ಮಾಡುವುದಾಗಿ ಹೇಳಿದ್ದರು. ಈಗ ಅದು ಕಾರ್ಯರೂಪರಕ್ಕೆ ಬರುತ್ತಿದೆ.

ಕೆಲವೇ ದಿನದಲ್ಲಿ ರಾಜಕಾಲುವೆ ಒತ್ತುವರಿ ಸಮೀಕ್ಷೆ ವರದಿ ಮೇಯರ್ ಕೈ ಸೇರಲಿದ್ದು, ಅದರ ಆದಾರದ ಮೇಲೆ ಮೇಯರ್ ಒತ್ತುವರಿ ತೆರವಿಗೆ ಆದೇಶ ನೀಡಲಿದ್ದಾರೆ.

ಬೆಂಗಳೂರು: ಏರ್‌ಪೋರ್ಟ್‌ ಬಳಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಡಿಸಿ ಬೆಂಗಳೂರು: ಏರ್‌ಪೋರ್ಟ್‌ ಬಳಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಡಿಸಿ

ಸರ್ವೆ ವರದಿ ಮೇಯರ್ ಕೈ ಸೇರಿದ ಬಳಿಕ ಉಪಮುಖ್ಯಮಂತ್ರಿಗಳು, ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸಿ ಒತ್ತುವರಿ ತೆರವು ಕಾರ್ಯಚಾರಣೆ ದಿನಾಂಕ ನಿಗದಿಪಡಿಸಲಾಗುತ್ತದೆ.

ನಿರ್ದಾಕ್ಷಿಣ್ಯ ಕ್ರಮ: ಉಸ್ತುವಾರಿ ಪರಮೇಶ್ವರ್‌

ನಿರ್ದಾಕ್ಷಿಣ್ಯ ಕ್ರಮ: ಉಸ್ತುವಾರಿ ಪರಮೇಶ್ವರ್‌

ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಪರಮೇಶ್ವರ್ ಅವರು ಈ ಮುಂಚೆಯೇ ರಾಜಕಾಲುವೆ ಒತ್ತುವರಿಯ ಬಗ್ಗೆ ಮಾತನಾಡಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಒತ್ತುವರಿಯನ್ನು ತೆರವು ಮಾಡುವುದಾಗಿ ಅವರು ಹೇಳಿದ್ದರು. ಹಾಗಾಗಿ ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ ಆಶಾ ಭಾವ ಇದೆ.

ಒತ್ತುವರಿ ಮಾಡಿದವರನ್ನು ಶಿಕ್ಷಿಸದೆ ಬಿಡೆವು : ಜಾರ್ಜ್ ಒತ್ತುವರಿ ಮಾಡಿದವರನ್ನು ಶಿಕ್ಷಿಸದೆ ಬಿಡೆವು : ಜಾರ್ಜ್

ಮುಂದಿನ ವಾರದಿಂದಲೇ ಕಾರ್ಯಾಚರಣೆ ಶುರು

ಮುಂದಿನ ವಾರದಿಂದಲೇ ಕಾರ್ಯಾಚರಣೆ ಶುರು

ಮುಂದಿನ ವಾರದಿಂದಲೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಲಿದೆ ಎನ್ನಲಾಗಿದ್ದು. ಈ ಬಾರಿ ಎಷ್ಟು ಜನ ಸೂರು ಕಳೆದುಕೊಳ್ಳುತ್ತಾರೆಯೋ ನೋಡಬೇಕಿದೆ.

ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು

ಸೆಪ್ಟೆಂಬರ್ ಮಳೆಗ ಬಿಬಿಎಂಪಿ ತಯಾರಿ

ಸೆಪ್ಟೆಂಬರ್ ಮಳೆಗ ಬಿಬಿಎಂಪಿ ತಯಾರಿ

ಸೆಪ್ಟೆಂಬರ್‌ನಲ್ಲಿ ಬೆಂಗಳೂರಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ನೀಡಲಾಗಿದೆ. ರಾಜಕಾಲುವೆ ಒತ್ತುವರಿಯಿಂದಾಗಿ ಮಳೆ ಬಂದಾಗ ಬೆಂಗಳೂರು ಕೆರೆಯಂತಾಗಿ ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಕೆಲವರಾದರೂ ಜೀವ ಕಳೆದುಕೊಳ್ಳುತ್ತಿದ್ದಾರೆ ಹಾಗಾಗಿ ಈ ಬಾರಿ ಸೆಪ್ಟೆಂಬರ್‌ ಮಳೆಯ ಮುಂಚೆಯೇ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.

ಕಳೆದ ಭಾರಿ ಭರ್ಜರಿಯಾಗಿ ನಡೆದಿತ್ತು ಕಾರ್ಯಾಚರಣೆ

ಕಳೆದ ಭಾರಿ ಭರ್ಜರಿಯಾಗಿ ನಡೆದಿತ್ತು ಕಾರ್ಯಾಚರಣೆ

ಕಳೆದ ವರ್ಷ ಕೆಲವು ದಿನಗಳ ಕಾಲ ಭಾರಿ ಜೋರಾಗಿ ಬಿಬಿಎಂಪಿ ಅಧಿಕಾರಿಗಳು ಜಿಲ್ಲಾಧಿಕಾರಿ ಶಂಕರ್ ಮುಂದಾಳತ್ವದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದರು. ಆಗ ಸಾಕಷ್ಟು ಮಂದಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ಕಳೆದುಕೊಂಡಿದ್ದರು. ಅದೇ ಸಮಯಕ್ಕೆ ನಟ ದರ್ಶನ್ ಮನೆಯೂ ರಾಜಕಾಲುವೆ ಮೇಲಿದೆ ಎಂಬ ವಿಶಯವೂ ಸುದ್ದಿಯಾಗಿತ್ತು, ದರ್ಶನ್ ಇದನ್ನು ಅಲ್ಲಗಳೆದಿದ್ದರು. ಬಿಬಿಎಂಪಿ ದರ್ಶನ್ ಅವರ ಮನೆಯನ್ನು ಬಿಬಿಎಂಪಿ ಒಡೆದಿರಲಿಲ್ಲ.

English summary
BBMP is starting Raja kaluve encroachers clearing drive again. Already BBMP officers made a survey of clearing area and Mayor will decide the operation date after a meeting with Bengaluru in-charge minister G Parameshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X