ಬಿಬಿಎಂಪಿ ಆರೋಗ್ಯ ಇಲಾಖೆ: ಪ್ಲಾಸ್ಟಿಕ್ ಬಳಕೆ ಕೇಂದ್ರಗಳ ಮೇಲೆ ದಾಳಿ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 08 : ಅನಧಿಕೃತ ಪ್ಲಾಸ್ಟಿಕ್ ಬಳಕೆ ಮತ್ತು ವ್ಯಾಪಾರ ಮಾಡುವ ಕೇಂದ್ರಗಳ ಮೇಲೆ ಬಿಬಿಎಂಪಿ ಆರೋಗ್ಯ ಇಲಾಖೆಯು ದಿಢೀರ್ ದಾಳಿ ನಡೆಸಿದರು.

ಬೆಂಗಳೂರಿಗರೇ, ಪ್ಲಾಸ್ಟಿಕ್ ಕವರ್ ಕೊಂಡೊಯ್ದರೂ ದಂಡ ಕಟ್ಬೇಕು!

ಆರೋಗ್ಯ ದೃಷ್ಟಿಯಿಂದ ಹಾಗೂ ಮಣ್ಣಿನಲ್ಲಿ ಪ್ಲಾಸ್ಟಿಕ್ ಕರಗುವುದಿಲ್ಲ ಇನ್ನಿತರೆ ಕಾರಣಗಳಿಗಾಗಿ ಪ್ಲಾಸ್ಟಿಕ್ ನಿಷೇಧಿಲಾಗಿದೆ. ಬೆಂಗಳೂರಿನಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಆದೇಶ ಹೊರಡಿಸಿ ವರ್ಷಗಳೇ ಕಳೆಯಿತು. ಆದರೂ ಹಣ್ಣು, ತರಕಾರಿ ಮಳಿಗೆಗಳು, ಬಟ್ಟೆ ಅಂಗಡಿಗಳು ಇನ್ನಿತರೆ ಮಳಿಗೆಗಳು ಇದುವರೆಗೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಬಿಟ್ಟಿಲ್ಲ.

BBMP seizes Plastic bags

ಹೀಗಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಿರ್ದೇಶನದಂತೆ ದಾಳಿ ನಡೆಸಲಾಗಿದೆ. ಪಾಲಿಕೆ ಆರೋಗ್ಯಾಧಿಕಾರಿ ಡಾ. ಸುರೇಶ್ ನೇತೃತ್ವದಲ್ಲಿ ಗಾಂಧಿನಗರದ ಹಲವಾರು ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು, ಎಂ.ಆರ್. ಗ್ರಾಫಿಕ್ಸ್ ಸೇರಿದಂತೆ ಇನ್ನಿತರೆ ಕೇಂದ್ರಗಳಿಂದ ಆರೋಗ್ಯಾಧಿಕಾರಿಗಳು ಪ್ಲಾಸ್ಟಿಕ್ ಬ್ಯಾಗ್ ವಶಕ್ಕೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Health officials of BBMP have conducted raids on many places in Gandhi nagar on dec.08. seized plastic bags which were banned as per health departmetn's norms

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ