ತೆರಿಗೆಯಲ್ಲಿ ಸರ್ಕಾರದಿಂದ ಪಾಲು ಕೇಳಲು ಬಿಬಿಎಂಪಿ ನಿರ್ಧಾರ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 13: ಸರಕು ಮತ್ತು ಸೇವಾ ತೆರಿಗೆ ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆಯಲ್ಲಿ ಬಿಬಿಎಂಪಿಗೆ ಸ್ವಲ್ಪ ಪಾಲು ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳು ಜಿಎಸ್ ಟಿ, ಮನರಂಜನಾ ತೆರಿಗೆಯಲ್ಲಿ ಅಲ್ಪ ಭಾಗವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡುತ್ತಿವೆ. ಅದೇ ರೀತಿ ಕೊಂಚ ಪಾಲು ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಬಿಬಿಎಂಪಿ ಬಜೆಟ್: 10,208 ಕೋಟಿ ಗಾತ್ರಕ್ಕೆ ಪರಿಷ್ಕರಣೆ

ಜಿಎಸ್ ಟಿ ನಿಯಮಾವಳಿಯಂತೆ ಮನರಂಜನಾ ತೆರಿಗೆಯನ್ನು ರಾಜ್ಯ ಸರ್ಕಾರ ಸಂಗ್ರಹಿಸಲು ಅವಕಾಶವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ. ಕನ್ನಡ ಹೊರತುಪಡಿಸಿ, ಪರಭಾಷಾ ಸಿನಿಮಾ ಟಿಕೆಟ್ ಗಳ ಮೇಲೆ ಶೇ.30ರಷ್ಟು ಮನರಂಜನಾ ತೆರಿಗೆ ವಸೂಲಿ ಮಾಡಬಹುದು.

BBMP seek share in GST and entertainment tax from state

ಬಿಹಾರದಲ್ಲಿ ಶೇ.50, ಆಂಧ್ರದಲ್ಲಿ ಶೇ.20 ನವದೆಹಲಿಯ್ಲಿ ಶೇ.20 ಪಶ್ಚಿಮ ಬಂಗಾಳದಲ್ಲಿ ಶೇ. 30ರಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ಟಿವಿ, ಐಪಿಎಲ್, ಕ್ರೀಡೆಗಳಿಂದಲೂ ತೆರಿಗೆ ಸಂಗ್ರಹಿಸಲು ಅವಕಾಶವಿದೆ ಂದು ಮಾಹಿತಿ ನೀಡಿದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕನ್ನಡ ಫಲಕ ಅಳವಡಿಕೆಗೆ ತಿಂಗಳ ಗಡುವು: ನಗರದಲ್ಲಿನ ಎಲ್ಲ ಅಂಗಡಿ-ಮುಂಗಟ್ಟುಗಳು, ಕಂಪನಿಗಳು ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಒಂದು ತಿಂಗಳೊಳಗೆ ಕನ್ನಡ ನಾಮ ಫಲಕ ಅಳವಡಿಸದಿದ್ದಲ್ಲಿ, ಪರವಾನಗಿ ರದ್ದುಪಡಿಸಲಾಗುತ್ತದೆ. ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಲೇಬೇಕು ಎಂದು ಎಚ್ಚರಿಕೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP has decided to ask share in GST and entertainment tax from the state government as many state have been sharing tax with their local bodies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ