ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರೆಂಚ್ ಕಲಿಯಲಿದ್ದಾರೆ ಬೆಂಗಳೂರಿನ ಪಾಲಿಕೆ ಶಾಲೆ-ಕಾಲೇಜು ವಿದ್ಯಾರ್ಥಿಗಳು

|
Google Oneindia Kannada News

Recommended Video

ಎಚ್ ಡಿ ಕೆ ಉದ್ಘಾಟಿಸಿದ ರೋಶಿನಿ ಯೋಜನೆಯಡಿಯಲ್ಲಿ ಬಿಬಿಎಂಪಿ ಶಾಲಾ ಕಾಲೇಜು ಮಕ್ಕಳು ಫ್ರೆಂಚ್ ಕಲಿಯಲಿದ್ದಾರೆ |

ಬೆಂಗಳೂರು, ಸೆಪ್ಟೆಂಬರ್ 26: ಮುಂದಿನ ಐದು ವರ್ಷಗಳಲ್ಲಿ 156 ಬಿಬಿಎಂಪಿ ಶಾಲೆ, ಕಾಲೇಜುಗಳು ರೋಶನಿ ಯೋಜನೆ ಅಡಿಯಲ್ಲಿ ಫ್ರಾನ್ಸ್ ನ ಶಿಕ್ಷಕರಿಂದ ಫ್ರೆಂಚ್ ಕಲಿಯಲಿವೆ. ಬುಧವಾರದಂದು ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಂಟ್-ಗಾರ್ಡೆ ಸಹಯೋಗದಲ್ಲಿ ಪಾಲಿಕೆ ಈ ಯೋಜನೆಗೆ ಚಾಲನೆ ನೀಡಿದೆ.

"ವಿಶ್ವದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನ ಮಾಡಲಾಗುತ್ತಿದೆ. ಪಾಲಿಕೆ ಶಾಲೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಪಾಠ ಮಾಡುವ ವಿಧಾನ ಬದಲಾಗಿಯೇ ಇಲ್ಲ. ಆದರೆ ನಾವು ಈಗ ಅದನ್ನು ಬದಲಾಯಿಸಲು ಬಯಸಿದ್ದೇವೆ. ಆ ಮೂಲಕ ಖಾಸಗಿ ಶಾಲೆಗಳ ಜತೆಗೆ ಸ್ಪರ್ಧೆ ನಡೆಸಬಹುದು" ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಬಿಬಿಎಂಪಿ ಶಾಲೆಗಳಲ್ಲಿ ವಿಶ್ವದರ್ಜೆಯ ಕಲಿಕಾ ಸೌಲಭ್ಯಬಿಬಿಎಂಪಿ ಶಾಲೆಗಳಲ್ಲಿ ವಿಶ್ವದರ್ಜೆಯ ಕಲಿಕಾ ಸೌಲಭ್ಯ

ಈ ಯೋಜನೆ ಮೂಲಕ ಮೈಕ್ರೋಸಾಫ್ಟ್ ಆಸ್ಪೈರ್ ಸ್ಟೂಡೆಂಟ್ ಕಾರ್ಯಕ್ರಮವನ್ನು ಪಾಲಿಕೆಯ ಎಲ್ಲ ಶಾಲೆಗಳಲ್ಲಿ ಜಾರಿಗೆ ತರಲಾಗುವುದು. ಆಗ್ಯುಮೆಂಟೆಡ್ ರಿಯಾಲಿಟಿ, ವರ್ಚುಯಲ್ ರಿಯಾಲಿಟಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಕ್ಲೌಡ್ ಹಾಗೂ ಐಒಟಿ ತಂತ್ರಜ್ಞಾನದ ಜತೆಗೇ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.

BBMP school and college students to learn French

ಇದು ಐದು ವರ್ಷದ ಯೋಜನೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸದ್ಯಕ್ಕೆ ಇರುವ ಶಾಲೆಯ ಮೂಲ ಸೌಕರ್ಯಗಳ ಸಮೀಕ್ಷೆ ಪೂರ್ಣವಾಗಿದೆ. ಇದು ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಡಿಯಲ್ಲಿ ಕೈಗೆತ್ತಿಕೊಂಡ ಯೋಜನೆ ಆದ್ದರಿಂದ ಪಾಲಿಕೆಯಿಂದ ಯಾವುದೇ ಹಣವನ್ನು ಹೂಡಿಕೆ ಮಾಡುತ್ತಿಲ್ಲ.

ಮೈಕ್ರೋಸಾಫ್ಟ್ ನಿಂದ ಐನೂರು- ಆರು ನೂರು ಕೋಟಿ ರುಪಾಯಿ ಹಣ ಹೂಡಿಕೆ ಮಾಡುತ್ತಾರೆ. ಸುರಕ್ಷತೆ, ಕಟ್ಟಡ ಹಾಗೂ ತಂತ್ರಜ್ಞಾನ ಮೂಲಸೌಕರ್ಯದ ಹೊಣೆ ಕೂಡ ಅವರದೇ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಶಾಲೆ, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲು ಸಿಎಂ ಸೂಚನೆ ಶಾಲೆ, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲು ಸಿಎಂ ಸೂಚನೆ

ಈಗಾಗಲೇ ಇದಕ್ಕಾಗಿ ಕೆಲಸಗಳು ಶುರುವಾಗಿವೆ. ಶಿಕ್ಷಕ- ಶಿಕ್ಷಕಿಯರ ಸಂಖ್ಯೆ, ಮೂಲ ಸೌಕರ್ಯ ಮತ್ತಿತರ ಅನುಕೂಲಕ್ಕೆ ತಯಾರಿ ನಡೆದಿದೆ. ಬಿಬಿಎಂಪಿ ಶಾಲೆ ಹಾಗೂ ಕಾಲೇಜುಗಳು ಒಂದಕ್ಕೊಂದು ಹೊಂದಿಕೊಂಡಂಥ ಕಲಿಕಾ ಸಮುದಾಯವಾಗಿ ಮಾರ್ಪಡಲಿದೆ. ಈಗಾಗಲೇ ಬಿಬಿಎಂಪಿ ಶಿಕ್ಷಕರು ಮೈಕ್ರೋಸಾಫ್ಟ್ ಇನೊವೇಟಿವ್ ಎಜುಕೇಟರ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!

ಬೆಂಗಳೂರಿನಲ್ಲಿರುವ ವಿದ್ಯಾರ್ಥಿಗಳು ಫ್ರಾನ್ಸ್ ನಲ್ಲಿರುವ ಶಿಕ್ಷಕರಿಂದ ಫ್ರೆಂಚ್ ಕಲಿಯುವ ದಿನ ಇನ್ನೇನು ಹತ್ತಿರದಲ್ಲಿದೆ ಎಂದು ಟೆಕ್ ಅವಂಟ್ ಗಾರ್ಡೆ ಸಿಇಒ ಅಲಿ ಸೇಠ್ ತಿಳಿಸಿದ್ದಾರೆ.

English summary
Over the next five years, the 156 BBMP schools and colleges could potentially learn French from teachers in France under Project Roshni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X