ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ವಾನಗಳಿಗೂ ಪರವಾನಗಿ: ಬಿಬಿಎಂಪಿಯ ಆದೇಶ ವಾಪಸ್

By Nayana
|
Google Oneindia Kannada News

ಬೆಂಗಳೂರು, ಜೂನ್ 22: ಶ್ವಾನಗಳಿಗೆ ಪರವಾನಗಿ ಕಡ್ಡಾಯ ನಿಯಮವನ್ನು ಬಿಬಿಎಂಪಿಯ ಆದೇಶವನ್ನು ನಗರಾಭಿವೃದ್ಧಿ ಇಲಾಖೆ ಹಿಂಪಡೆದಿದೆ.

ಹೈಕೋರ್ಟ್‌ಗೆ ಬುಧವಾರ ಮೌಖಿಕವಾಗಿ ತಿಳಿಸಿರುವ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್‌.ಎನ್ ಪ್ರಭಾಕರ್ ಈ ಕುರಿತು ಗುರುವಾರ ಆದೇಶ ಹೊರಡಿಸಿದ್ದಾರೆ. ಆ ಆದೇಶದಲ್ಲಿ 1954ರ ಅಧಿ ಸೂಚನೆ ಆಧರಿಸಿ ಕೆಎಂಸಿ ಕಾಯ್ದೆ 1976 ಅನ್ವಯ 2018ರ ಫೆ.28ರಂದು ಬಿಬಿಎಂಪಿಯಲ್ಲಿ ಸಾಕು ನಾಯಿಗಳಿಗೆ ಲೈಸೆನ್ಸ್‌ ನೀಡುವ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಆದರೆ ಆ ನಿಯಮಗಳನ್ನು ಜಾರಿಗೊಳಿಸಬಾರದೆಂದು ಹಲವು ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಬಿಬಿಎಂಪಿಗೆ ಮನವಿ, ಆಕ್ಷೇಪಣೆ ಕೇಳಿ ಬಂದಿದೆ.

ನಾಯಿಗೆ ಲೈಸೆನ್ಸ್‌: ಬಿಬಿಎಂಪಿಯಿಂದ ವಿವರಣೆ ಕೇಳಿದ ಹೈಕೋರ್ಟ್ನಾಯಿಗೆ ಲೈಸೆನ್ಸ್‌: ಬಿಬಿಎಂಪಿಯಿಂದ ವಿವರಣೆ ಕೇಳಿದ ಹೈಕೋರ್ಟ್

ಪಾಲಿಕೆಯೂ ಸಹ ವಾಸ್ತವವಾಗಿ ನಿಯಮ ಜಾರಿ ಕಷ್ಟಕರ ಎಂದು ಹೇಳಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಮರು ಪರಿಶೀಲನೆ ನಡೆಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದಿನ ಆದೇಶವನ್ನು ಹಿಂಪಡೆದಿದೆ.

BBMP says no license for dog nutrition

ಎನ್‌ಜಿಇಎಫ್‌ ಪೂರ್ವ ಬಡಾವಣೆಯ ಇಂದಿರಾ ಗೋಪಾಲಕೃಷ್ಣ, ಕ್ಯೂಪಾ, ವೈಲ್ಡ್‌ ಲೈಫ್‌ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್, ಪೀಪಲ್ ಫಾರ್ ಆನಿಮಲ್ಸ್‌ ಮತ್ತಿತರೆ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ.

ಸರ್ಕಾರ ಹಿಂಪಡೆದಿರುವ ಅಂಶ ತಿಳಿಸಿದ ನಂತರ ನ್ಯಾಯಪೀಠ ಆ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ನಿಜಕ್ಕೂ ಆ ಬಗ್ಗೆ ಮರುಪರಿಶೀಲನೆ ಅಗತ್ಯವಿತ್ತು ಎಂದು ಹೇಳಿದೆ.

ಅರ್ಜಿದಾರರಿಗೆ ನೀವು ನಾಯಿಗಳ ನಿಯಂತ್ರಣಕ್ಕೆ ನೀವೇನು ಕ್ರಮ ಕೈಗೊಂಡಿದ್ದೀರಿ. ಪಾಲಿಕೆ ಜೊತೆ ಏನೇನು ಕೆಲಸ ಮಾಡುತ್ತಿದ್ದೀರಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಕಾರಾತ್ಮಕ ಸಲಹೆಗಳನ್ನು ಬಿಬಿಎಂಪಿಗೆ ನೀಡಿ ಎಂದು ನ್ಯಾಯಪೀಠ ಸೂಚಿಸಿತು.

ಪಾಲಿಕೆ ಪ-ರ ವಕೀಲ ವಿ. ಶ್ರೀನಿಧಿ ನಾಯಿಗಳ ನಿಯಂತ್ರಣ ಕುರಿತು ಹಿಂದೆ ಪಾಲಿಕೆ 1954ರಲ್ಲಿ ಹೊರಡಿಸಿದ್ದ ಆದೇಶ, 2017ರ ಮಾರ್ಗಸೂಚಿಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ನಾಯಿಗಳ ಪರವಾನಗಿ ಕುರಿತು ಮರುಪರಿಶೀಲಿಸಲಾಗುವುದು ಎಂದರು.

English summary
BBMP has said before the High court that will withdraw the new law about license for dog nutrition in the city. Earlier authority had imposed law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X