ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್‌ ಮಾರ್ಗ, ಮೆನು ತಿಳಿಸಲಿದೆ ಬಿಬಿಎಂಪಿಯ ಹೊಸ ಆ್ಯಪ್‌

By Sachhidananda Acharya
|
Google Oneindia Kannada News

ಬೆಂಗಳೂರು, ಜುಲೈ 27: ರಾಜ್ಯಸರಕಾರ ಜನಸಾಮಾನ್ಯರಿಗೆ ಮಿತ ದರದಲ್ಲಿ ಊಟ ಮತ್ತು ಉಪಹಾರ ನೀಡಲು ಆರಂಭಿಸಲಿರುವ ಇಂದಿರಾ ಕ್ಯಾಂಟೀನ್ ಗಳನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಬಿಬಿಎಂಪಿ ಮುಂದಾಗಿದೆ.

ಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿ

ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭವಾಗಲಿದ್ದು ಗ್ರಾಹಕರಿಗೆ ಸಮೀಪದ 5ಇಂದಿರಾ ಕ್ಯಾಂಟೀನ್‌ಗಳಿಗೆ ಹೋಗುವ ಮಾರ್ಗ ಹಾಗೂ ದಿನದ ಮೆನುವನ್ನು ತಿಳಿಸಲು ಆ್ಯಪ್ ತಯಾರಿಗೆ ಮುಂದಾಗಿದೆ.

BBMP's new App to guide route to Indiara Canteen and menu of the day

ಈಗಾಗಲೇ ಬಿಬಿಎಂಪಿಯ ಐ.ಟಿ ತಂಡ ಆ್ಯಪ್‌ ಸಿದ್ಧಪಡಿಸುತ್ತಿದೆ. ಆ್ಯಪ್ ನ ಅಂತಿಮ ಕೆಲಸಗಳಷ್ಟೇ ಬಾಕಿ ಇದ್ದು ಆಗಸ್ಟ್ 15ರಂದು ಮೊದಲ ಹಂತದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಬಿಡುಗಡೆಯಾಗಲಿದೆ.

ಸ್ಮಾರ್ಟ್‌ ಫೋನ್‌ ಹೊಂದಿರುವ ಗ್ರಾಹಕರು ಆ್ಯಪ್‌ ಡೌನ್‌ಲೋಡ್‌ ಮಾಡಿ ಜಿಪಿಎಸ್‌ ಮುಖಾಂತರ ಹತ್ತಿರದ ಐದು ಇಂದಿರಾ ಕ್ಯಾಂಟೀನ್‌ಗಳ ಮಾಹಿತಿಯನ್ನು ಪಡೆಯಬಹುದು. ಜತೆಗೆ ಆ ದಿನದ ಮೆನುವನ್ನೂ ಇದರಲ್ಲೇ ಪಡೆಯಬಹುದಾಗಿದೆ.

ಆಗಸ್ಟ್ 15ರಿಂದ 125 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭ : ಸಿದ್ದರಾಮಯ್ಯಆಗಸ್ಟ್ 15ರಿಂದ 125 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭ : ಸಿದ್ದರಾಮಯ್ಯ

ಇನ್ನು ಕ್ಯಾಂಟೀನ್ ಗಳಿಗೆ ರೇಟಿಂಗ್ ನೀಡಲೂ ಆ್ಯಪ್ ನಲ್ಲಿ ಅವಕಾಶವಿದೆ. ಜತೆಗೆ ಅಧಿಕಾರಿಗಳಿಗೆ ಕ್ಯಾಂಟೀನ್‌ಗೆ ಸರಬರಾಜು ಆದ ಆಹಾರ ಪದಾರ್ಥ, ಖರ್ಚಾದ ಉಪಾಹಾರ, ಊಟ, ಮಿಕ್ಕಿರುವ ಆಹಾರ ಪ್ರಮಾಣದ ಬಗ್ಗೆ ಈ ಆ್ಯಪ್‌ ನಿಂದಲೇ ಮಾಹಿತಿ ಪಡೆದುಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಎರಡು ಸಂಸ್ಥೆಗಳಿಗೆ ಗುತ್ತಿಗೆ

ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಸಲು ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಚೆಫ್‌ ಟಾಕ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ರಿವಾರ್ಡ್ಸ್‌ ಸಂಸ್ಥೆ ಆಹಾರಗಳನ್ನು ಪೂರೈಸಲಿದೆ.

ಎರಡೂ ಸಂಸ್ಥೆಗಳು ಈಗಾಗಲೇ ಬೇರೆ ಬೇರೆ ಉದ್ದೇಶಗಳಿಗೆ ಊಟ ಮತ್ತು ಉಪಾಹಾರ ಪೂರೈಕೆಯಲ್ಲಿ ನಿರತವಾಗಿದ್ದು ಈ ಕ್ಷೇತ್ರಗಳಲ್ಲಿ ಅನುಭವಿ ಸಂಸ್ಥೆಗಲಾಗಿವೆ.

English summary
The BBMP is seeking to make Indira Canteen more popular by creating an App for it. The app is preparing to inform customers of the route to the nearest 5 Indira Canteens and menu of the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X