ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ : ಲೇಟೆಸ್ಟ್ ಸುದ್ದಿ ಏನಿದೆ?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಆನ್​ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಗೊಂದಲ ನಿವಾರಿಸಲಾಗಿದೆ. ಮೂರು ಬ್ಯಾಂಕ್ ಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಕುಮಾರ ಪುಷ್ಕರ್ ಬುಧವಾರ ತಿಳಿಸಿದ್ದಾರೆ.

ಆಸ್ತಿ ತೆರಿಗೆ ಪಾವತಿಗೆ ಕೆನರಾ ಬ್ಯಾಂಕಿನ 175 ಬ್ರ್ಯಾಂಚ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಈಗ ಐಸಿಐಸಿಐ, ಯಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್​ಗಳ ಶಾಖೆಗಳಲ್ಲೂ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಮಾರ್ ಪುಷ್ಕರ್ ಹೇಳಿದರು. ಐಸಿಐಸಿಐನ 110 ಶಾಖೆಗಳು, ಆಕ್ಸಿಸ್ ಬ್ಯಾಂಕಿನ 80, ಯಸ್ ಬ್ಯಾಂಕಿನ 35 ಬ್ರ್ಯಾಂಚ್ ಗಳಲ್ಲಿ ತೆರಿಗೆ ಪಾವತಿಸಬಹುದು.[ಬೆಂಗಳೂರಿಗರೇ ಗಮನಿಸಿ: ಏಪ್ರಿಲ್ 01 ರಿಂದ ಆಸ್ತಿ ತೆರಿಗೆ ಹೆಚ್ಚಳ]

ಪ್ರತಿ ಶಾಖೆಗಳಲ್ಲಿ 2 ತೆರಿಗೆ ಪಾವತಿ ಕೇಂದ್ರ ಆರಂಭಿಸುವಂತೆ ಸೂಚಿಸಲಾಗಿದೆ. ಜೊತೆಗೆ ಬೇರೆ ಬ್ಯಾಂಕ್​ಗಳ ಡಿಡಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಪಾಲಿಕೆಯ 268 ಸಹಾಯ ಕೇಂದ್ರಗಳಲ್ಲಿ ತೆರಿಗೆ ಕಟ್ಟಲು ಚಲನ್ ಪಡೆಯುವ ಮತ್ತು ಭರ್ತಿ ಮಾಡುವ ಮಾಹಿತಿ ನೀಡಲಾಗುತ್ತದೆ ಎಂದು ಕುಮಾರ್ ಹೇಳಿದರು.[ಆನ್ ಲೈನ್ ಮೂಲಕ ತೆರಿಗೆ ಕಟ್ಟುವುದು ಹೇಗೆ?]

ಬಿಬಿಎಂಪಿಯ ಯಾವುದೇ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವಂತಿಲ್ಲ. ಬೆಂಗಳೂರು ಒನ್ ಕೇಂದ್ರದಲ್ಲಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಪಾಲಿಕೆ ಇನ್ನೂ ಒದಗಿಸಿಲ್ಲ. ಆನ್‌ಲೈನ್ ಮೂಲಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ ಬ್ಯಾಂಕ್ ಗಳಲ್ಲಿ ಪಾವತಿಸಬಹುದು.[ಮೈಸೂರು ಮಹಾನಗರ ಆಸ್ತಿ ತೆರಿಗೆ ಪಾವತಿದಾರರ ಗಮನಕ್ಕೆ]

ಆನ್​ಲೈನ್ ಪಾವತಿ ಸಮಸ್ಯೆ ನಿವಾರಣೆ

ಆನ್​ಲೈನ್ ಪಾವತಿ ಸಮಸ್ಯೆ ನಿವಾರಣೆ

ಆನ್​ಲೈನ್ ಪಾವತಿ ಬಹುತೇಕ ನಿವಾರಣೆ ಮಾಡಲಾಗಿದೆ. ಮಂಗಳವಾರ ಸಂಜೆ ವೇಳೆಗೆ ತೆರಿಗೆ ಪಾವತಿ ಮತ್ತು ಮಾಹಿತಿ ಪಡೆಯಲು ಪಾಲಿಕೆಯ ವೆಬ್​ಸೈಟ್​ಗೆ 1.37 ಲಕ್ಷ ಮಂದಿ ಭೇಟಿ ನೀಡಿದ್ದಾರೆ. 36,500 ಚಲನ್ ಗಳ ಪೈಕಿ 30,250 ವಿತರಣೆ ಮಾಡಲಾಗಿದೆ.

ಬ್ಯಾಂಕ್​ಗಳಲ್ಲಿ ತೆರಿಗೆ ಪಾವತಿ

ಬ್ಯಾಂಕ್​ಗಳಲ್ಲಿ ತೆರಿಗೆ ಪಾವತಿ

3,500 ಮಂದಿ ತೆರಿಗೆ ಪಾವತಿ ಚಲನ್ ಪಡೆದಿದ್ದು, ಆ ಚಲನ್​ಗಳ ಮೂಲಕ 3,250 ಮಂದಿ ಬ್ಯಾಂಕ್​ಗಳಲ್ಲಿ ತೆರಿಗೆ ಪಾವತಿಸಿದ್ದಾರೆ. ವೆಬ್​ಸೈಟ್ ಮೂಲಕ ಚಲನ್ ಪಡೆದು 24 ಕೋಟಿ ರೂ. ತೆರಿಗೆ ಪಾವತಿಸಲಾಗಿದೆ. 18,789 ತೆರಿಗೆದಾರರು ಆನ್​ಲೈನ್ ಮೂಲಕ ತೆರಿಗೆ ಪಾವತಿ ಮಾಡಿದ್ದು 11.50 ಕೋಟಿ ರೂ. ಸಂಗ್ರಹವಾಗಿದೆ

ತೆರಿಗೆ ಪಾವತಿ ಅಭಿಯಾನ

ತೆರಿಗೆ ಪಾವತಿ ಅಭಿಯಾನ

ಬಿ ಖಾತಾ ಹೊಂದಿರುವ ಆಸ್ತಿಗಳಿಗೆ ತೆರಿಗೆ ಪಾವತಿಗೆ ಅನುಕೂಲವಾಗಲೆಂದು ವೆಬ್​ಸೈಟ್​ನಲ್ಲಿ ಹೊಸ ತಂತ್ರಾಂಶ ಅಳವಡಿಸಲಾಗುತ್ತದೆ. ಮುಂದಿನ 15 ದಿನಗಳಲ್ಲಿ ತೆರಿಗೆ ಪಾವತಿ ಅಭಿಯಾನ ನಡೆಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ ಅಪಾರ್ಟ್​ವೆುಂಟ್​ಗಳಿಗೆ ಭೇಟಿ ನೀಡಿ ತೆರಿಗೆ ಪಾವತಿ ಕುರಿತಂತೆ ಜಾಗೃತಿ ಮೂಡಿಸಿ, ಮಾಹಿತಿ ನೀಡಲಾಗುವುದು

ಚೆಕ್, ಡಿಡಿ ಪಾವತಿ ಗೊಂದಲ

ಚೆಕ್, ಡಿಡಿ ಪಾವತಿ ಗೊಂದಲ

ಡಿಮ್ಯಾಂಡ್ ಡ್ರಾಫ್ಟ್ ಹಾಗೂ ನಗದು ಪಾವತಿ ಮಾಡಿದವರಿಗೆ ತಕ್ಷಣವೇ ರಸೀತಿ ಸಿಗಲಿದೆ. ಆದರೆ, ಚೆಕ್ ಮೂಲಕ ಪಾವತಿ ಮಾಡಿದವರು ತಕ್ಷಣಕ್ಕೆ ರಸೀತಿ ಪಡೆಯಲು ಸಾಧ್ಯವಿಲ್ಲ. ಚೆಕ್ ನಲ್ಲಿರುವ ಮೊತ್ತ ಬಿಬಿಎಂಪಿ ಕೈ ಸೇರಿದ ಮೇಲೆ ರಸೀತಿ ವಿತರಿಸಲಾಗುತ್ತದೆ

ಅರ್ಜಿ ನಮೂನೆ ಮತ್ತು ಚಲನ್‌ ಆನ್‌ಲೈನ್‌

ಅರ್ಜಿ ನಮೂನೆ ಮತ್ತು ಚಲನ್‌ ಆನ್‌ಲೈನ್‌

ತೆರಿಗೆ ಪಾವತಿ ಮಾಡಲು ಜನರು ಅರ್ಜಿ ನಮೂನೆ ಮತ್ತು ಚಲನ್‌ಗಳನ್ನು ಆನ್‌ಲೈನ್‌ನಲ್ಲಿಯೇ ಪಡೆದುಕೊಳ್ಳಬೇಕು. bbmp.gov.in ಅಥವಾ bbmptax.karnataka.gov.in ವೆಬ್‌ಸೈಟ್‌ನಲ್ಲಿ ಸಿಗಲಿದೆ. ಕಳೆದ ಎರಡು ವಾರಗಳಿಂದ ಸುಮಾರು 35 ಕೋಟಿ ರು ತೆರಿಗೆ ಸಂಗ್ರಹಿಸಿದ್ದು, ಈ ಪೈಕಿ 11.5 ಕೋಟಿ ರು ಆನ್ ಲೈನ್ ಪೇಮೆಂಟ್ ಆಗಿರುವುದು ವಿಶೇಷ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bruhat Bangalore Mahanagara Palike (BBMP) on Wednesday announced apart from 175 branches of Canara Bank, property owners can pay their dues in 110 branches of ICICI Bank, 80 branches of Axis Bank and 35 branches of YES Bank.
Please Wait while comments are loading...