ಕಾರ್ಪೋರೇಟರ್ ಗಳ ಕಿರುಕುಳದಿಂದ ಕಂದಾಯ ಅಧಿಕಾರಿ ಆತ್ಮಹತ್ಯೆ?

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ. 17 : ಹನುಮಂತನಗರಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರದ ತಮ್ಮ ನಿವಾಸದಲ್ಲಿ ಬಿಬಿಎಂಪಿ ಕಂದಾಯ ಇನ್ಸ್ ಪೆಕ್ಟರ್ ಸೋಮವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂದಾಯ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಚ್.ಸಿ. ಶ್ರೀನಿವಾಸ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

BBMP revenue inspector commits suicide at hanumanthnagara bengaluru

ಸುಂಕೇನಹಳ್ಳಿ ವಾರ್ಡ್ ಬಿಜೆಪಿ ಕಾರ್ಪೋರೇಟರ್ ಡಿ.ಎನ್. ರಮೇಶ್ ಕಿರುಕುಳ ಹಿನ್ನೆಲೆಯಲ್ಲಿ ಶ್ರೀನಿವಾಸ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗುತ್ತಿದೆ.

ಅವರನ್ನು ಹಾಲಿ ಮತ್ತು ಮಾಜಿ ಕಾರ್ಪೋರೇಟರ್ ಗಳಿಬ್ಬರು ತಮ್ಮ ಪ್ರಭಾವ ಬಳಸಿ ಶ್ರೀನಿವಾಸ್‍ ಅವರನ್ನು ವರ್ಗಾವಣೆ ಮಾಡಿಸಿದ್ದರು.

ಜೆಪಿ ನಗರ ವಾರ್ಡ್ ಗೆ ಒಂದು ತಿಂಗಳ ಹಿಂದಷ್ಟೇ ವರ್ಗಾವಣೆ ಆಗಿದ್ದ ಶ್ರೀನಿವಾಸ್ ಕಳೆದ 15 ದಿನಗಳಿಂದ ಕೆಲಸಕ್ಕ ಹಾಜರಾಗಿರಲಿಲ್ಲ.

ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದಾಗಿ ಮೃತರ ಸಂಬಂಧಿಗಳು ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಇವರ ಮೇಲೆ ಲೋಕಯುಕ್ತ ದಾಳಿ ಸಹ ನಡೆದಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ತನಿಖೆ ನಂತರ ನಿಜ ಸಂಗತಿ ಹೊರ ಬರಬೇಕಿದೆ.

ಸದ್ಯ ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಹನುಮಂತ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP revenue inspector(H.C. Srinivas) commits suicide in hanumanth Nagara Bengaluru on Monday night. His family alleged on Sunkenahalli ward BJP corporator D.N Ramesh.
Please Wait while comments are loading...