ಬಿಬಿಎಂಪಿ ವ್ಯಾಪ್ತಿಯಿಂದ ಶಾಲಾ ಕಾಲೇಜು ಹೊರಗೆ?

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 09: ಬಿಬಿಎಂಪಿಗೆ ನೀರು, ಸ್ವಚ್ಛತೆ ಕೆಲಸಗಳೇ ಸಾಕಷ್ಟಿದೆ. ಹೀಗಿರುವಾಗ ಶಾಲೆ ಕಾಲೇಜುಗಳನ್ನು ನಡೆಸಬೇಕೇ, ಬೇಡವೇ ಎಂಬ ಬಗ್ಗೆ ಆಯುಕ್ತ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಶೀಘ್ರವೇ ಬಿಬಿಎಂಪಿ ಖಾಲಿ ಹುದ್ದೆಗಳ ಭರ್ತಿ: ಕೆ.ಜೆ.ಜಾರ್ಜ್‌

ಪ್ರಶ್ನೋತ್ತರ ವೇಳೆ ಬಿಜೆಪಿಯ ರಾಮಚಂದ್ರ ಗೌಡ, ಬಿಬಿಎಂಪಿ 11 ಕಾಲೇಜುಗಳನ್ನು ನಡೆಸುತ್ತಿದೆ. ಆದರೆ ಯಾವುದೇ ಕಾಲೇಜಿಗೆ ಪ್ರಾಂಶುಪಾಲರು ಇಲಲ್. ಹೀಗಾದರೆ ಎಷ್ಟರ ಮಟ್ಟಿಗೆ ಕಾಲೇಜುಗಳು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು, ಕಾಲೇಜುಗಳನ್ನು ಸರಿಯಾಗಿ ನಡೆಸಬೇಕು. ಪ್ರಂಶುಪಾಲರನ್ನು ನೇಮಕ ಮಾಡದ ಧೋರಣೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

BBMP rethinking on run schools and colleges

ಸದಸ್ಯರ ಮಾತಿಗೆ ಉತ್ತರಿಸಿದ ಜಾರ್ಜ್, ಖಾಲಿ ಇರುವ ಪ್ರಾಂಶುಪಾಲರನ್ನು ನೇಮಕ ಮಾಡುವ ಬಗ್ಗೆ ಆಯುಕ್ತರ ಜತೆ ಚರ್ಚಿಸಲಾಗುವುದು, ಬಿಬಿಎಂಪಿಗೆ ಬೇರೆ ಬೇರೆ ಕೆಲಸಗಳು ಸಾಕಷ್ಟಿದೆ. ಹೀಗಿರುವಾಗ ಶಿಕ್ಷಣ ಸಂಸ್ಥೆಗಳ ನಡೆಸುವ ಜವಾಬ್ದಾರಿ ಬೇಕೆ ಎಂಬ ಪ್ರಶ್ನೆ ತಮಗೂ ಇದೆ. ಈ ಬಗ್ಗೆ ಆಯುಕ್ತರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Development minister KJ George said that the bbmp was rethinking on run the schools and colleges while it has many responsibilities. like sanitation, water, supplies, civic amenities and other. He was replying for a question in assembly on Thursay on Bengaluru development.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ