ಅಬ್ಬಾ,,ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಬಿಬಿಎಂಪಿ

Written By:
Subscribe to Oneindia Kannada

ಬೆಂಗಳೂರು, ಮೇ 13: ಮಳೆಗಾಲ ಶುರುವಾಯಿತು ಎಂದರೆ ಮಹಾನಗರಿ ನರಕವಾಗುತ್ತದೆ. ಜಲಾವೃತವಾದ ಮನೆಗಳು, ಗಾಳಿ ಆಂಜನೇಯ ದೇವಾಯಕ್ಕೆ ನೀರು ನುಗ್ಗಿತು. ಮನೆ ಕುಸಿತ, ಅಂಡರ್ ಪಾಸ್ ನಲ್ಲಿ ಮುಳುಗಿದ ಬಸ್ ಎಂಬ ಎಲ್ಲ ಸುದ್ದಿಗಳನ್ನು ಕೇಳಿರುತ್ತೇವೆ.

ಪ್ರತಿ ವರ್ಷ ಸಮಸ್ಯೆ ಉಂಟಾದ ಮೇಲೆ ಹೌಹಾರುತ್ತಿದ್ದ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿ ಕೊಂಚ ಮುಂಚಿತವಾಗಿ ಎಚ್ಚರಗೊಂಡಿದೆ. ಸಮಸ್ಯೆ ಅನುಭವಿಸುವ ನಗರದ 224 ಪ್ರದೇಶಗಳನ್ನು ಗುರುತು ಮಾಡಿದ್ದು ದುರಸ್ತಿ ಮಾಡಲು ಮುಂದಾಗಿದೆ.[ವರುಣ ಈ ಬಾರಿ ಬೇಗನೆ ಬರುತ್ತಿದ್ದಾನೆ, ಸ್ವಾಗತ ಕೋರಿರಿ]

bbmp

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಸಿದ್ದೇಗೌಡ, ಕಳೆದ ಐದು ವರ್ಷಗಳಿಂದ 224 ದುರ್ಬಲ ತಾಣಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 65 ಸ್ಥಳಗಳನ್ನು ಸರಿಪಡಿಸಲಾಗಿದ್ದು, 37 ಕಡೆ ದುರಸ್ತಿ ಕಾರ್ಯ ನಡೆಯುತ್ತಿದೆ. ಉಳಿದ 122 ಸ್ಥಳಗಳನ್ನು ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿದ್ದು ಅದನ್ನು ಸಹ ಮಳೆಗಾಲ ಆರಂಭಕ್ಕೆ ಮುನ್ನ ಅಂತ್ಯಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.[ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]

ಚರಂಡಿ ದುರವಸ್ಥೆ ಸರಿ ಮಾಡುವುದು, ರಸ್ತೆ ಗುಂಡಿ ಮುಚ್ಚುವುದು, ಅಪಾಯಕಾರಿ ಮರಗಳ ಕಡಿತಲೆ, ಪಾದಚಾರಿ ಮಾರ್ಗ ರಿಪೇರಿ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಬಿಬಿಎಂಪಿ ಕೈಗೆಎತ್ತಿಕೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This year, the Bruhat Bangalore Mahanagara Palike (BBMP) is trying its best to save the city from flooding in the monsoon. It has identified 224 vulnerable spots that are most likely to flood and is taking measures to prevent it.
Please Wait while comments are loading...