ಬೆಂಗಳೂರಿನ ರೂಫ್ ಟಾಪ್ ಬಾರ್ ಗಳನ್ನು ಜಾಲಾಡಿದ ಬಿಬಿಎಂಪಿ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 06 : ಮುಂಬೈನಲ್ಲಿ ಕಳೆದ ವಾರ ಸಂಭವಿಸಿದ ಅಗ್ನಿ ಅನಾಹುತದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲೂ ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ.

ಜಯನಗರ 4ನೇ ಹಂತದಲ್ಲಿರುವ ಕೇಕ್ವಾಲಾ ಸೇರಿದಂತೆ ಮೂರು ರೂಫ್ ಟಾಪ್ ಬಾರ್ ಗಳನ್ನು ಬಂದ್ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಅನಧಿಕೃತ ಫ್ಲೆಕ್ಸ್ ಹಾವಳಿ: ಮುದ್ರಣ ಮಳಿಗೆಗಳ ಮೇಲೆ ದಾಳಿ

ನಗರದ ಹಲವು ರೂಫ್ ಟಾಪ್ ಮಳಿಗೆಗಳಿಗೆ ಶುಕ್ರವಾರ(ಜ.05 )ರಂದು ಭೇಟಿ ನೀಡಿದ್ದ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು, ನಿಯಮ ಉಲ್ಲಂಘನೆ ಪತ್ತೆ ಹಚ್ಚಿದದ್ಆರೆ. ಗ್ರಿಲ್ ಸ್ಕ್ಯೂರ್, ಒನ್ಸ್ ಓಪನ್ ರೂಫ್, ಟಾಪ್ ಬಾರ್ ಗಳಿಗೂ ನೋಟಿಸ್ ನೀಡಿದರು.

BBMP raids rooftop restaurants in Jayanagar

ಕಟ್ಟಡ ನಿರ್ಮಾಣ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಗರದ ಹಲವು ರೂಫ್ ಟಾಪ್ ಪಬ್, ಬಾರ್, ರೆಸ್ಟೋರೆಂಟ್ ಗಳನ್ನು ಬಂದ್ ಮಾಡುವಂತೆ ನೋಟಿಸ್ ನೀಡಿದ್ದೇವೆ, ದಂಡವನ್ನೂ ವಿಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು ಬಿಬಿಎಂಪಿ ಅಧಿಕಾರಿಗಳು ನಗರದ ವಿವಿದೆಡೆ 69 ರೂಫ್ ಟಾಪ್ ಬಾರ್ ಗಳಿಗೆ ನೋಟಿಸ್ ಗಳನ್ನು ಜಾರಿ ಮಾಡಿ ಬಂದ್ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಬಿಬಿಎಂಪಿ ದಕ್ಷಿಣ ವಲಯದ 38 ರೂಫ್ ಟಾಪ್ ಬಾರ್ ಮತ್ತು ರೆಸ್ಟೋರೆಂಟ್ ಗಳ ಪೈಕಿ 12 ಬಾರ್ ಮತ್ತು ರೆಸ್ಟೋರೆಂಟ್ ಗಳ ಪರಿಶೀಲನೆ ನಡೆಸಿ ಅವುಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಮನೋರಂಜನ್ ಹೆಗಡೆ ತಿಳಿಸಿದ್ದಾರೆ.

ಬಿಬಿಎಂಪಿ ಈವರೆಗೆ ನಡೆಸಿರುವ ರೂಫ್ ಟಾಪ್ ಮತ್ತು ರೆಸ್ಟೋರೆಂಟ್ ದಾಳಿಗಳ ಪೈಕಿ ಬಾಣಸವಾಡಿ ಪ್ರದೇಶದಲ್ಲಿರುವ ಒನೆಸ್ಟಾ ರೂಫ್ ಟಾಪ್ ಬಾರ್ ಮೊದಲ ಬಂದ್ ಮಾಡಿಸಲಾಗ ರೂಫ್ ಟಾಪ್ ಹಾಗೂ ರೆಸ್ಟೋರೆಂಟ್ ಆಗಿದ್ದು5ಲಕ್ಷ ರೂ. ದಂಡ ವಿಧಿಸಲಾಗಿದೆ. ರಾಸ್ತಾ ಕೆಫೆ ಎನ್ನುವ ಬಾರ್ ಹಾಗೂ ರೆಸ್ಟೋರೆಂಟ್ ಹಾಗೂ ಲ್ಯಾವಲ್ಲೆ ರಸ್ತೆಯಲ್ಲಿರುವ ಔಟ್ ಲೆಟ್ ಆಟಿಕ್ ಹಾಗೂ ಲೇಡಿ ಬಗ್ ಗಳಿಗೂ 5 ಲಕ್ಷ ರೂ ದಂಡ ವಿಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six-rooftop restaurants and bars were raided in Jayanagar 4th block on Friday evening by members of the BBMP health committee. Three rooftop restaurants were ordered to be closed for operating without a license while the three other restaurants were fined for poor hygiene and food safety regulations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ