ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಹೊಸ ನೀತಿ: ಕಮರ್ಷಿಯಲ್ ಜಾಹೀರಾತಿಗೆ ಶಾಶ್ವತ ಬ್ರೇಕ್

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಬೆಂಗಳೂರಲ್ಲಿ ಇನ್ನುಮುಂದೆ ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಅಳವಡಿಸುವಂತಿಲ್ಲ, ಅದರಲ್ಲಿಯೂ ವಾಣಿಜ್ಯ ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯು ಕಮರ್ಷಿಯಲ್ ಜಾಹೀರಾತುಗಳಿಗೆ ಶಾಶ್ವತ ಬ್ರೇಕ್ ಹಾಕಲು ಸಿದ್ಧವಾಗಿದೆ. ಸರ್ಕಾರಿ ಕಾರ್ಯಕ್ರಮಗಳ ಪ್ರಚಾರವನ್ನು ಹೊರತುಪಡಿಸಿ ಇನ್ಯಾವುದೇ ಜಾಹೀರಾತುಗಳನ್ನು ಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್ ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್

ಬಿಬಿಎಂಪಿ ಜಾಹೀರಾತು ನೀತಿ ಮತ್ತು ಬೈಲಾ 2018ಕ್ಕೆ ಕೌನ್ಸಿಲ್ ಸಭೆಯು ಮಂಗಳವಾರ ಅನುಮೋದನೆ ನೀಡಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. ಅಷ್ಟೇ ಅಲ್ಲದೆ ಅಂಗಡಿ ಮುಂದಿರುವ ನಾಮಫಲಕಗಳಲ್ಲಿ ಅಂಗಡಿಗಳಲ್ಲಿರುವ ವಸ್ತುಗಳ ಹೆಸರನ್ನು ಬರೆಯುವಂತಿಲ್ಲ.

BBMP proposes permanently ban commercial advertisement in public premises

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಮತ್ತು 40ರಷ್ಟು ಇತರೆ ಭಾಷೆಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿರುವ ತಂಗುದಾಣ, ಸ್ಕೈವಾಕ್, ಶೌಚಾಲಯ ಕಟ್ಟಡಗಳಲ್ಲಿ ಅಳವಡಿಸಿರುವ ಜಾಹೀರಾತು, ಹೋರ್ಡಿಂಗ್ಸ್ ಗಳಿಗೆ ನಿಷೇಧದಿಂದ ವಿನಾಯ್ತಿ ನೀಡಲಾಗಿದೆ. ಅಂಗಟಿ ಮುಗ್ಗಟ್ಟುಗಳಿಗೆ ಅಳವಡಿಸಿರುವ ನಾಮಫಲಕಗಳಲ್ಲಿ ವಾಣಿಜ್ಯ ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ

ಜಾಹೀರಾತು ಏಜೆನ್ಸಿಗಳು, ಆಡಳಿತ ಮತ್ತು ಪ್ರತಿಪಕ್ಷದ ಸದ್ಯರೊಂದಿಗೆ ಚರ್ಚಿಸಿದ ಬಳಿಕವೇ ನೂತನ ಜಾಹೀರಾತು ನೀತಿಯ ಕರಡು ಸಿದ್ಧಪಡಿಸಲಾಗುತ್ತದೆ. ಆಗಸ್ಟ್ 31ಕ್ಕೆ ನೂತನ ಜಾಹೀರಾತು ನೀತಿ ಸಿದ್ಧಪಡಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು.

English summary
New policy on advertisement display which prepared by BBMP has proposed permanently ban commercial advertisement at public premises in Bangalore city except government advertisements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X