ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ ಅನ್ಯ ಭಾಷೆಯ ನಾಮಪಲಕ ತೆರವು

By Nayana
|
Google Oneindia Kannada News

ಬೆಂಗಳೂರು, ಜು.30: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನ್ಯಭಾಷಾ ನಾಮಫಲಕಗಳನ್ನು ತೆರವುಗೊಳಿಸುವಂತೆ ಮೇಯರ್‌ ಸಂಪತ್‌ರಾಜ್‌ ನಿರ್ದೇಶಿಸಿದ್ದು ಸೋಮವಾರದಿಂದ ತೆರವು ಕಾರ್ಯ ಆರಂಭಗೊಂಡಿದೆ.

ನಗರದಲ್ಲಿ ಅನ್ಯ ಭಾಷೆಯ ಫಲಕಗಳು ರಾರಾಜಿಸುತ್ತಿವೆ ಅದಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ವಿವಿಧ ಕನ್ನಡಪರ ಸಂಘಟನೆಗಳು ಮೇಯರ್‌ ಭೇಟಿ ಮಾಡಿ ಈ ಕನ್ನಡ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲು ಪಾಲಿಕೆಯು ತೆರವು ಕಾರ್ಯಚರಣೆಯನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಕೇಬಲ್‌ ಮಾಫಿಯಾ ಮೇಲೆ ಡಿಸಿಎಂ ಕೆಂಗಣ್ಣು: ಬಿಬಿಎಂಪಿ-ಪೊಲೀಸ್‌ ಜಂಟಿ ಕ್ರಮಕೇಬಲ್‌ ಮಾಫಿಯಾ ಮೇಲೆ ಡಿಸಿಎಂ ಕೆಂಗಣ್ಣು: ಬಿಬಿಎಂಪಿ-ಪೊಲೀಸ್‌ ಜಂಟಿ ಕ್ರಮ

ಹಾಗಾಗಿ ಸೋಮವಾರದಿಂದ ಅನ್ಯಭಾಷೆಗಳ ನಾಮಫಲಕ ತೆರವು ಕಾರ್ಯ ಆರಂಭಗೊಂಡಿದೆ. ಬೇರೆ ಭಾಷೆಯ ನಾಮ ಫಲಕಗಳು ಕಂಡುಬಂದಲ್ಲಿ ತಕ್ಷಣವೇ ತೆರವು ಗೊಳಿಸಿ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸುವುದಾಗಿ ಮೇಯರ್‌ ಸೂಚನೆ ನೀಡಿದ್ದಾರೆ.

BBMP operations against non Kannada boards in Bengaluru

ಪಾಲಿಕೆಯ ಆರೋಗ್ಯ ವಿಭಾಗದಿಂದ ನೀಡುವ ವಾಣಿಜ್ಯ ಪರವಾನಗಿ ಸಂದರ್ಭದಲ್ಲಿ ಅಂಗಡಿ ಮುಗ್ಗಟ್ಟುಗಳು, ಹೋಟೆಲ್‌ಗಳು, ಕಂಪನಿಗಳು ಹಾಗೂ ಇತರೆ ಪರವಾನಗಿ ಪಡೆದಿರುವ ವ್ಯಾಪಾರಿಗಳು ತಮ್ಮ ಅಂಗಡಿ-ಶಾಖೆಯ ಮುಂದೆ ಅಳವಡಿಸಿರುವ ನಾಮಫಲಕಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಹಾಕಿರಬೇಕು.

ಶೇ.60ರಷ್ಟು ಕನ್ನಡ ಭಾಷೆಯಲ್ಲಿ ಇರುವಂತೆ ಅಂದರೆ ಸ್ಪಷ್ಟವಾಗಿ ಎದ್ದು ಕಾಣಿಸುವಂತೆ ಕನ್ನಡ ಪದಗಳನ್ನು ಉಪಯೋಗಿಸಬೇಕು. ಒಂದು ವೇಳೆ ಕನ್ನಡ ಭಾಷೆಯ ನಾಮಫಲಕ ಕಾಣಿಸದಿದ್ದರೆ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಲಾಗುತ್ತದೆ.

English summary
BBMP has taken drive against non Kannada boards in front of private commercial establishments in Bengaluru from Monday. Mayor Smapath Raj has insisted officials to remove these boards to promote Kannada language in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X