ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ 10 ವಲಯ ವಿಂಗಡಣೆ, ಯಾರಿಗೆ ಲಾಭ? ಯಾರಿಗೆ ನಷ್ಟ?

By Mahesh
|
Google Oneindia Kannada News

ಬೆಂಗಳೂರು, ಜೂನ್ 16: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ವಿಕೇಂದ್ರೀಕರಣಕ್ಕಾಗಿ ಸದ್ಯದ ಎಂಟು ವಲಯಗಳನ್ನು ಹತ್ತು ವಲಯಗಳನ್ನಾಗಿ ಮರು ವಿಂಗಡಿಸಲಾಗಿದೆ. ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆ ಇತ್ತೀಚೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಆದರೆ, ಈ ವಲಯ ವಿಂಗಡಣೆ ಹಿಂದೆ ಬೆಂಗಳೂರಿನ ಶಾಸಕರ ಪ್ರಭಾವ ಇರುವುದು ಸ್ಪಷ್ಟವಾಗಿದೆ.

ಬಿಬಿಎಂಪಿ ಪುನಾರಚನೆ ಕುರಿತು ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ತಂಡ ವರದಿ ನೀಡಿದಾಗಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕಳೆದ ವರ್ಷ ವಲಯ ವಿಂಗಡಣೆಗೊಳಿಸಿ ಬಿಬಿಎಂಪಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಪಟ್ಟಿಯಲ್ಲಿ ಸಾಕಷ್ಟು ದೋಷಗಳಿದ್ದ ಕಾರಣಗಳಿಂದಾಗಿ ಮರುಪರಿಶೀಲನೆಗೆ ಬಿಬಿಎಂಪಿಯಿಂದ ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿತ್ತು.

ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಕರ್ನಾಟಕ ಮುನ್ಸಿಪಲ್ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಯಿಂದ ನಿರ್ಧಾರ ಹೊರಬೀಳುವುದಕ್ಕೆ ಮುನ್ನವೇ ಸರ್ಕಾರ ಬಿಬಿಎಂಪಿ ವಲಯಗಳ ಮರುವಿಂಗಡಣೆ ಮಾಡಿದೆ. ಹೊಸ ವಲಯಗಳಿಗೆ ಹಿರಿಯ ಅಧಿಕಾರಿಗಳ ನೇಮಕ ಮಾಡಿದ್ದು, ಮುಂಬರುವ ಅಸೆಂಬ್ಲಿ ಚುನಾವಣೆಗೆ ಈ ಬಿಬಿಎಂಪಿ ವಲಯ ವಿಂಗಡಣೆ ದಿಕ್ಸೂಚಿಯಾಗಲಿದೆ. ಯಾರಿಗೆ ಲಾಭ? ಯಾರಿಗೆ ನಷ್ಟ ಕಾದುನೋಡಬೇಕಿದೆ.

ವಲಯ ವಿಂಗಡಣೆ ಏನು ವ್ಯತ್ಯಾಸ

ವಲಯ ವಿಂಗಡಣೆ ಏನು ವ್ಯತ್ಯಾಸ

ಬಿಬಿಎಂಪಿಯನ್ನು ಹತ್ತು ವಲಯಗಳಾಗಿ ವಿಂಗಡಿಸಿದ ಬಳಿಕ ಪ್ರತಿ ವಲಯಕ್ಕೆ ಎರಡು ಹಾಗೂ ನಾಲ್ಕು ಅಸೆಂಬ್ಲಿ ಕ್ಷೇತ್ರಗಳು ಸಿಗಲಿವೆ. ಆದರೆ, ಈ ಮುಂಚೆ ಕೆಲ ವಲಯಗಳಲ್ಲಿ 8 ಅಸೆಂಬ್ಲಿ ಕ್ಷೇತ್ರಗಳಿದ್ದವು. ನಗರ ವ್ಯಾಪ್ತಿಯ ಶಾಸಕರ ಬೇಡಿಕೆಗೆ ತಕ್ಕಂತೆ ವಲಯಗಳು ವಿಂಗಡಣೆಯಾಗಿದೆ. ಯಾವ ವಲಯ ಯಾರಿಗೆ ಲಾಭ ತರುವುದೋ ಕಾದು ನೋಡಬೇಕಿದೆ.

ಯಾವ ವಲಯಕ್ಕೆ ಯಾವ ವಾರ್ಡ್?

ಯಾವ ವಲಯಕ್ಕೆ ಯಾವ ವಾರ್ಡ್?

ಯಲಹಂಕ ವಲಯ: ವಿಧಾನಸಭಾ ಕ್ಷೇತ್ರಗಳು, ಯಲಹಂಕ, ಬ್ಯಾಟರಾಯನಪುರ.
ವಾರ್ಡ್ : ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು, ಯಲಹಂಕ ಉಪನಗರ, ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕುವೆಂಪುನಗರ

ದಾಸರಹಳ್ಳಿ

ದಾಸರಹಳ್ಳಿ

ವಿಧಾನಸಭಾ ಕ್ಷೇತ್ರಗಳು:ಯಶವಂತಪುರ, ದಾಸರಹಳ್ಳಿ.

ವಾರ್ಡ್ : ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ.ದಾಸರಹಳ್ಳಿ, ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ರಾಜಗೋಪಾಲನಗರ, ಹೆಗ್ಗನಹಳ್ಳಿ, ದೊಡ್ಡಬಿದರಕಲ್ಲು, ಹೇರೋಹಳ್ಳಿ, ಕೆಂಗೇರಿ, ಉಲ್ಲಾಳು, ಹೆಮ್ಮಿಗೆಪುರ

ಸರ್ವಜ್ಞನಗರ

ಸರ್ವಜ್ಞನಗರ

ವಿಧಾನಸಭಾ ಕ್ಷೇತ್ರ : ಕೆ.ಆರ್. ಪುರ, ಸರ್ವಜ್ಞನಗರ, ಸಿ.ವಿ. ರಾಮನ್​ನಗರ.

ವಾರ್ಡ್​ಗಳು: ಬೆನ್ನಿಗಾನಹಳ್ಳಿ, ಸಿ.ವಿ. ರಾಮನ್​ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳನಗರ, ಜೀವನ್​ಭೀಮಾನಗರ, ಕೋನೇನ ಅಗ್ರಹಾರ, ನಾಗವಾರ, ಎಚ್.ಬಿ.ಆರ್.ಬಡವಾಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ, ಮಾರುತಿಸೇವಾನಗರ, ಹೊರಮಾವು, ರಾಮಮೂರ್ತಿನಗರ, ವಿಜಿನಾಪುರ, ಕೆ.ಆರ್.ಪುರ, ಬಸವನಪುರ, ದೇವಸಂದ್ರ, ಎ.ನಾರಾಯಣಪುರ, ವಿಜ್ಞಾನನಗರ, ಎಚ್.ಎ.ಎಲ್. ವಿಮಾನ ನಿಲ್ದಾಣ

ರಾಜರಾಜೇಶ್ವರಿನಗರ

ರಾಜರಾಜೇಶ್ವರಿನಗರ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ: ರಾಜರಾಜೇಶ್ವರಿನಗರ, ಮಹಾಲಕ್ಷ್ಮೀ ಲೇಔಟ್.

ವಾರ್ಡ್ ಗಳು: ನಂದಿನಿ ಲೇಔಟ್, ಮಾರಪ್ಪನಪಾಳ್ಯ, ನಾಗಪುರ, ಮಹಾಲಕ್ಷ್ಮೀಪುರ, ಶಕ್ತಿಗಣಪತಿನಗರ, ಶಂಕರಮಠ, ವೃಷಭಾವತಿನಗರ, ಜಾಲಹಳ್ಳಿ, ಜೆ.ಪಿ. ಉದ್ಯಾನ, ಯಶವಂತಪುರ, ಎಚ್​ಎಂಟಿ, ಲಕ್ಷ್ಮೀದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ

ಜಯನಗರ ವಿಧಾನಸಭಾ ಕ್ಷೇತ್ರ

ಜಯನಗರ ವಿಧಾನಸಭಾ ಕ್ಷೇತ್ರ

ಜಯನಗರ ವಿಧಾನಸಭಾ ಕ್ಷೇತ್ರ: ಶಾಂತಿನಗರ, ಬಿಟಿಎಂ ಲೇಔಟ್, ಜಯನಗರ, ಪದ್ಮನಾಭನಗರ.
ವಾರ್ಡ್​ಗಳು:ಜೋಗುಪಾಳ್ಯ, ಶಾಂತಲಾನಗರ, ದೊಮ್ಮಲೂರು, ಅಗರಂ, ವನ್ನಾರಪೇಟೆ, ನೀಲಸಂದ್ರ, ಶಾಂತಿನಗರ, ಲಕ್ಕಸಂದ್ರ, ಆಡುಗೋಡಿ, ಈಜೀಪುರ, ಕೋರಮಂಗಲ, ಸದ್ದುಗುಂಟೆಪಾಳ್ಯ, ಮಡಿವಾಳ, ಜಕ್ಕಸಂದ್ರ, ಬಿಟಿಎಂ ಲೇಔಟ್, ಪಟ್ಟಾಭಿರಾಮನಗರ, ಭೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆ.ಪಿ.ನಗರ, ಸಾರಕ್ಕಿ, ಶಾಕಾಂಬರಿನಗರ, ಹೊಸಕೆರೆಹಳ್ಳಿ, ಗಣೇಶಮಂದಿರ, ಕರಿಸಂದ್ರ, ಯಡಿಯೂರು, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಕಲ್ಲಸಂದ್ರ

ಮಲ್ಲೇಶ್ವರ

ಮಲ್ಲೇಶ್ವರ

ವಿಧಾನಸಭೆ ಕ್ಷೇತ್ರಗಳು: ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ, ಶಿವಾಜಿನಗರ.

ವಾರ್ಡ್​ಗಳು: ಅರಮನೆನಗರ, ಮತ್ತಿಕೆರೆ, ಮಲ್ಲೇಶ್ವರ, ರಾಜಮಹಲ್ ಗುಟ್ಟಹಳ್ಳಿ, ಕಾಡುಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ರಾಧಾಕೃಷ್ಣ ದೇವಸ್ಥಾನ, ಸಂಜಯನಗರ, ಗಂಗಾನಗರ, ಹೆಬ್ಬಾಳ, ವಿ.ನಾಗೇನಹಳ್ಳಿ, ಮನೋರಾಯನಪಾಳ್ಯ, ಗಂಗೇನಹಳ್ಳಿ, ಜೆ.ಸಿ. ನಗರ, ಕುಶಾಲನಗರ, ಕಾವಲ್ ಭೈರಸಂದ್ರ, ದೇವರ ಜೀವನಹಳ್ಳಿ, ಮುನೇಶ್ವರನಗರ, ಸಗಾಯಪುರ, ಎಸ್.ಕೆ.ಗಾರ್ಡನ್, ಪುಲಕೇಶಿನಗರ, ರಾಮಸ್ವಾಮಿಪಾಳ್ಯ, ಜಯಮಹಲ್, ಹಲಸೂರು, ಭಾರತಿನಗರ, ಶಿವಾಜಿನಗರ, ವಸಂತನಗರ, ಸಂಪಂಗಿರಾಮನಗರ

ಗಾಂಧಿನಗರ

ಗಾಂಧಿನಗರ

ವಿಧಾನಸಭಾ ಕ್ಷೇತ್ರ: ಚಿಕ್ಕಪೇಟೆ, ಗಾಂಧಿ ನಗರ, ಚಾಮವಾರ್ಡ್​ಗಳು: ಸುಧಾಮನಗರ, ಧರ್ಮರಾಯಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿ.ವಿ.ಪುರ, ಸಿದ್ದಾಪುರ, ಹೊಂಬೇಗೌಡನಗರ, ಜಯನಗರ, ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್​ನಗರ, ಓಕಳಿಪುರ, ಚಿಕ್ಕಪೇಟೆ, ಕಾಟನ್​ಪೇಟೆ, ಬಿನ್ನಿಪೇಟೆ, ಪಾದರಾಯನಪುರ, ಜಗಜೀವನರಾಮ್ಗರ, ರಾಯಪುರ, ಛಲವಾದಿಪಾಳ್ಯ, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ, ಆಜಾದ್​ನಗರ, ಬಸವನಗುಡಿ, ಹನುಮಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠರಾಜಪೇಟೆ, ಬಸವನಗುಡಿ.

ವಿಜಯನಗರ

ವಿಜಯನಗರ

ವಿಧಾನಸಭಾ ಕ್ಷೇತ್ರ: ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ.

ವಾರ್ಡ್​ಗಳು: ದಯಾನಂದನಗರ, ಪ್ರಕಾಶ್​ನಗರ, ರಾಜಾಜಿನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಶಿವನಗರ, ಶ್ರೀರಾಮಮಂದಿರ, ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ, ಡಾ.ರಾಜಕುಮಾರ್, ಮಾರೇನಹಳ್ಳಿ, ಮಾರುತಿಮಂದಿರ, ಮೂಡಲಪಾಳ್ಯ, ನಾಗರಬಾವಿ, ನಾಯಂಡಹಳ್ಳಿ, ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ, ಬಾಪೂಜಿನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ದೀಪಾಂಜಲಿನಗರ

ಮಹದೇವಪುರ

ಮಹದೇವಪುರ

ಮಹದೇವಪುರ ವಿಧಾನಸಭಾ ಕ್ಷೇತ್ರ:
ವಾರ್ಡ್​ಗಳು:ಹೂಡಿ, ಗರುಡಾಚಾರ್​ಪಾಳ್ಯ, ಕಾಡುಗುಡಿ, ಹಗದೂರು, ದೊಡ್ಡಾನೆಕ್ಕುಂದಿ, ಮಾರತಹಳ್ಳಿ, ವರ್ತೂರು, ಬೆಳ್ಳಂದೂರು

English summary
BBMP now gets 10 zones What is the Political motive behind it. Each zone will consist of two to four assembly constituencies as against the earlier system in which some zone had two and some eight assembly constituencies.This was a demand from the city’s legislators cutting across party lines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X