ಗುತ್ತಿಗೆದಾರರಿಗೆ 25 ತಿಂಗಳಿಂದ ವೇತನವನ್ನೇ ನೀಡದ ಬಿಬಿಎಂಪಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 30: ಬೆಂಗಳೂರು ಮಹಾನಗರ ಪಾಲಿಕೆ ಪೂರ್ಣಗೊಳಿಸಿದ ಕಾಮಗಾರಿಗಳಿಗೆ ಕಳೆದ 25 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಗುತ್ತಿಗೆದಾರರ ಸಂಘ ಬೆಂಗಳೂರಿನ ಬಿಬಿಎಂಪಿ ಎದುರು ಪ್ರತಿಭಟನೆ ನಡೆಸಿತು.

25 ತಿಂಗಳಿಂದ ಹಣ ನೀಡದೇ ನಮ್ಮಹತ್ತಿರ ಕೆಲಸ ಮಾಡಿಸಿಕೊಂಡಿರುವ ಬಿಬಿಎಂಪಿ ದೋರಣೆಯಿಂದಾಗಿ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಕೂಲಿ ಕಾರ್ಮಿಕರಿಗೆ/ ಸಾಮಾಗ್ರಿ ಸರಬರಾಜುದಾರರಿಗೆ ಹಣ ಪಾವತಿ ಮಾಡಲು ಆಗದ ದುಸ್ಥಿತಿ ಎದುರಾಗಿದೆ. ಮನೆಗಳಲ್ಲಿ ಆರ್ಥಿಕ ಸಂಕಷ್ಟದಿಂದ ಜೀವನಕ್ಕೆ ತೊಂದರೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಗುತ್ತಿಗೆ ದಾರರ ಸಂಘ ತಿಳಿಸಿದೆ.[60 ಕೆರೆಗಳನ್ನು ಬಿಬಿಎಂಪಿಗೆ ವರ್ಗಾಯಿಸಿದ ಬಿಡಿಎ]

BBMP not give the money in 25 month to contractor

ಕೆಲ ಅಧಿಕಾರಿಗಳು ಟೆಂಡರ್ ಕ್ರಮವನ್ನು ವಿರೋಧಿಸಿ ಪ್ಯಾಕೇಜ್ ಸಿಸ್ಟಂ ಅನ್ನು ಜಾರಿಗೊಳಿಸಿದ್ದಾರೆ ಇದರಿಂದ ಹಣ ಗುತ್ತಿಗೆ ದಾರರಿಗೆ ಸರಿಯಾಗಿ ತಲುಪುತ್ತಲೇ ಇಲ್ಲ. ಕಾಮಗಾರಿಯನ್ನು ಟೆಂಡರ್ ಕರೆಯದೆ ನೇರವಾಗಿ ಕೆಆರ್ಐಡಿಎಲ್ ಸಂಸ್ಥೆಗೆ ವಹಿಸಿದೆ ಅದರೆ ಅಲ್ಲಿ ಸರಿಯಾದ ಯಂತ್ರೋಪಕರಣಗಳಾಗಲಿ, ವ್ಯವಸ್ಥೆಯಾಗಲಿ ಇಲ್ಲ. ಟೆಂಡರ್ ಕರೆಯುವ ದರಕ್ಕಿಂತ ಹೆಚ್ಚಿನ ದರವನ್ನು ಬಿಬಿಎಂಪಿ ಪಾವತಿಸುತ್ತಿದ್ದ ಇದು ಪಾಲಿಕೆಗೆ ಹೊರೆಯಾಗಿದೆ.

BBMP not give the money in 25 month to contractor

ಈ ಸಂಬಂಧ ಬಿಬಿಎಂಪಿಗೆ ಬಾಕಿಯಿರುವ ಹಣ ಪಾವತಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಈ ಮನವಿಗೆ ಬಿಬಿಎಂಪಿಯ ಅಧಿಕಾರಿಗಳು ಅದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಸಂಘ ಒತ್ತಾಯಿಸಿದ್ದು, ಇಲ್ಲದಿದ್ದ ಪಕ್ಷದಲ್ಲಿ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಸಂಘ ಎಚ್ಚರಿಕೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP not give the money in 25 month to contractor, said contractor's association. BBMP not conduct the tender to give work for KIRDL company the problem is beginning there.
Please Wait while comments are loading...