ಬಿಬಿಎಂಪಿ ಬಜೆಟ್ಟಿಗೆ ನಿಮ್ಮದೊಂದು ಸಲಹೆ ಕೊಡಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2017-18 ನೇಸಾಲಿನ ಆಯವ್ಯಯ ಹೇಗಿರಬೇಕು? ಯಾವ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಬಗ್ಗೆ ನೀವೇನಾದರೂ ಸಲಹೆ ನೀಡುತ್ತೀರಾ? MyCityMYBudge ಎಂಬ ಹೆಸರಿನಲ್ಲಿ ಬಿಬಿಎಂಪಿ ಹೀಗೊಂದು ಅಭಿಯಾನ ಆರಂಭಿಸಿದೆ. ಇದರ ಮೂಲಕ ನಾಗರಿಕರು ಕೂಡಾ ಬಜೆಟ್ ಆದ್ಯತೆ ಬಗ್ಗೆ ಸಲಹೆ ನೀಡಬಹುದು.

ನಿಮ್ಮ ಸಲಹೆಯನ್ನು ಬಿಬಿಎಂಪಿಗೆ ತಲುಪಿಸುವುದಕ್ಕೆ ವೇದಿಕೆ ಸಿದ್ದವಾಗಿದೆ. ಬಿಬಿಎಂಪಿ ಬಜೆಟ್ ಗೆ ನಾಗರಿಕರ ಸಲಹೆಗಳನ್ನು ಸಂಗ್ರಹಿಸುವ ಸಲುವಾಗಿIchangemycity.com ವೆಬ್ ಸೈಟ್ ಗೆ ನಿಮ್ಮ ಸಲಹೆಗಳನ್ನು ಕಳುಹಿಸಿ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

BBMP MyCityMyBudget campaign for Citizens Janaagraha

ಜನಸ್ನೇಹಿ ಆಗಲಿದೆ ಬಿಬಿಎಂಪಿ ವೆಬ್ ಸೈಟ್: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್ ಸೈಟ್ ಗೆ ಹೊಸ ಆಯಾಮ ನೀಡಲಾಗುತ್ತಿದೆ. ವೆಬ್ ಸೈಟ್ ಇನ್ನಷ್ಟು ನಾಗರಿಕ ಸ್ನೇಹಿಯಾಗಲಿದೆ. ನವೀಕೃತ ವೆಬ್ ಸೈಟ್ ಗೆ ಈ ತಿಂಗಳಲ್ಲಿ ಚಾಲನೆ ನೀಡಲಾಗುವುದು. ಹೊಸ ವೆಬ್ ಸೈಟ್ ಮೂಲಕ ಸಾರ್ವಜನಿಕರು ಬಿಬಿಎಂಪಿಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಗಳನ್ನೂ ಸುಲಭವಾಗಿ ಪಡೆಯಬಹುದು.

ಸಾರ್ವಜನಿಕರ ಸಲಹೆ ಪಡೆಯಲು ಜನಾಗ್ರಹ ಎನ್ ಜಿಒ ಜತೆ ಬಿಬಿಎಂಪಿ ಕೈಜೋಡಿಸಿದ್ದು, MyCityMYBudge ಅಭಿಯಾನದ ವಾಹನ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಲಿದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಜನಾಗ್ರಹದ ಸಪ್ನ ಕರಮ್ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bruhat Bengaluru Mahanagara Palike (BBMP) on Monday kicked off a campaign — ‘MyCityMyBudget’ — to crowdsource suggestions for the 2017-18 BBMP Budget. Janaagraha Centre for Citizenship and Democracy is collaborating with BBMP on this endeavour.
Please Wait while comments are loading...