ಇ-ಟಾಯ್ಲೆಟ್ ಹುಡುಕಲು ಬಂತು ಮೊಬೈಲ್ ಅಪ್ಲಿಕೇಶನ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 25 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಶೌಚಾಲಯ ಎಲ್ಲಿದೆ? ಎಂದು ಹುಡುಕುವುದು ಸವಾಲಿನ ಕೆಲಸ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 'ಇ-ಟಾಯ್ಲೆಟ್' ಹುಡುಕಲು ಸಹಾಯಕವಾಗುವ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.

ಬಿಬಿಎಂಪಿ ಕಚೇರಿಯಲ್ಲಿ ಮೇಯರ್ ಮಂಜುನಾಥ್ ರೆಡ್ಡಿ ಅವರು ಬುಧವಾರ ಮೊಬೈಲ್ ಅಪ್ಲಿಕೇಶನ್‌ ಬಿಡುಗಡೆ ಮಾಡಿದ್ದಾರೆ. ನಗರದಲ್ಲಿರುವ ಶೌಚಾಲಯಗಳ ಸ್ಥಳ, ನಕ್ಷೆಯನ್ನು ಈ ಅಪ್ಲಿಕೇಶನ್ ಒದಗಿಸಲಿದೆ. ಬಿಬಿಎಂಪಿ ನಗರದಲ್ಲಿ ಸದ್ಯ 75 ಸ್ಥಳಗಳಲ್ಲಿ ಇ ಟಾಯ್ಲೆಟ್ ಆಳವಡಿಸಿದೆ. [ಬಸವನಗುಡಿಯಲ್ಲಿದೆ ಇ ಟಾಯ್ಲೆಟ್‌]

e Toilets

'ಬೆಂಗಳೂರು ನಗರದಕ್ಕೆ ಹೊರ ಊರುಗಳಿಂದ ಬರುವ ಜನರಿಗೆ ಮತ್ತು ಪ್ರವಾಸಿಗರಿಗೆ ಈ ಮೊಬೈಲ್ ಅಪ್ಲಿಕೇಶನ್ ನೆರವಾಗಲಿದೆ. ಕಡಿಮೆ ನಿರ್ವಹಣಾ ವೆಚ್ಚದ ಇ-ಶೌಚಾಲಯಗಳನ್ನು 75 ಸ್ಥಳಗಳಲ್ಲಿ ಅಳವಡಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಸ್ಥಳದಲ್ಲಿ ಶೌಚಾಲಯ ಅಳವಡಿಸುವ ಚಿಂತನೆ ಇದೆ' ಎಂದು ಮಂಜುನಾಥ್ ರೆಡ್ಡಿ ಹೇಳಿದರು. [ಬಿಬಿಎಂಪಿಗೆ ದೂರು ಕೊಡಲು ಬಂತು ಮೊಬೈಲ್ ಅಪ್ಲಿಕೇಶನ್]

ಇರಾಮ್ ಸೈಂಟಿಫಿಕ್‌ ಸಲ್ಯೂಷನ್ಸ್‌ ಎಂಬ ಕಂಪೆನಿ ನಗರದಲ್ಲಿ ಈ ಶೌಚಾಲಯಗಳನ್ನು ಬಿಬಿಎಂಪಿ ನೆರವಿನೊಂದಿಗೆ ಸ್ಥಾಪನೆ ಮಾಡಿದೆ. ಸ್ಟೇನ್‌ ಲೆಸ್‌ ಸ್ಟೀಲ್‌ ಕವಚ ಹೊಂದಿರುವ ಶೌಚಾಲ ದಿನದ 24 ಗಂಟೆಯೂ ಬಳಕೆಗೆ ಲಭ್ಯವಿರಲಿದೆ. 1, 2 ಅಥವ 5 ರೂ.ಗಳ ನಾಣ್ಯವನ್ನು ಹಾಕಿ ಜನರು ಶೌಚಾಲಯವನ್ನು ಉಪಯೋಗಿಸಬಹುದಾಗಿದೆ. [ಶತಾಯುಷಿ ಕಟ್ಟಿದ ಶೌಚಾಲಯಕ್ಕೆ ಎಲ್ಲೆಡೆಯಿಂದ ಬಹುಪರಾಕ್]

ಬಳಕೆ ನಂತರ ಶೌಚಾಲಯದ ಒಳಭಾಗವನ್ನು ಸ್ವಯಂ ಚಾಲಿತವಾಗಿ ಸ್ವಚ್ಛಗೊಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಶೌಚಾಲಯದಲ್ಲಿ 225 ಲೀ. ನೀರು ಸಂಗ್ರಹವಿರುವ ಟ್ಯಾಂಕ್‌ ಇದ್ದು, ಕೇವಲ 35 ಚದರ ಶೌಚಾಲಯ ಸ್ಥಾಪನೆ ಮಾಡಬಹುದಾಗಿದೆ.

ಯಾವ ಸ್ಥಳದಲ್ಲಿ ಶೌಚಾಲಯವಿದೆ ಎಂಬ ಮಾಹಿತಿಯನ್ನು ಮೊಬೈಲ್‌ ಅಪ್ಲಿಕೇಶನ್ ನೀಡಲಿದೆ. ಗೂಗಲ್‌ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After commissioning around 75 e Toilets in Bengaluru city Bruhat Bengaluru Mahanagara Palike (BBMP) on Wednesday launched a mobile application, that locates the nearest e-Toilet via a map and address.
Please Wait while comments are loading...