ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಅನಿವಾರ್ಯವಲ್ಲ'

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10 : 'ಬಿಬಿಎಂಪಿಯಲ್ಲಿ ಜೆಡಿಸ್ ಪಕ್ಷಕ್ಕೆ ಕಾಂಗ್ರೆಸ್ ಜೊತೆ ಮೈತ್ರಿ ಅನಿವಾರ್ಯವಲ್ಲ. ಕಾಂಗ್ರೆಸ್ ನಾಯಕರು ಹಾಗೆ ತಿಳಿದುಕೊಂಡಿದ್ದರೆ ತಪ್ಪು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸೆಪ್ಟೆಂಬರ್ 28ಕ್ಕೆ ಬೆಂಗಳೂರು ಮೇಯರ್ ಚುನಾವಣೆಸೆಪ್ಟೆಂಬರ್ 28ಕ್ಕೆ ಬೆಂಗಳೂರು ಮೇಯರ್ ಚುನಾವಣೆ

ಭಾನುವಾರ ಜೆ.ಪಿ.ನಗರದಲ್ಲಿನ ಕುಮಾರಸ್ವಾಮಿ ಅವರ ನಿವಾಸದಲ್ಲಿ ಬಿಬಿಎಂಪಿ ಸದಸ್ಯರ ಸಭೆ ನಡೆಯಿತು. ಸೆ.28ರಂದು ನಡೆಯಲಿರುವ ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ಬಗ್ಗೆ ಚರ್ಚೆ ನಡೆಯಿತು. ಬಿಬಿಎಂಪಿ ಉಪ ಮೇಯರ್ ಆನಂದ ಸೇರಿದಂತೆ ಎಲ್ಲಾ ಬಿಬಿಎಂಪಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

 BBMP mayoral polls : Kumaraswamy meets BBMP corporators

ಸಭೆಯ ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಬಿಬಿಎಂಪಿಯಲ್ಲಿ ಈ ಬಾರಿ ಮೇಯರ್ ಪಟ್ಟ ಪಡೆಯಬೇಕು ಎಂಬುದು ಅಭಿಪ್ರಾಯವಾಗಿದೆ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಮೇಯರ್ ಪಟ್ಟ ಪಡೆದಿದೆ' ಎಂದರು.

ಬಿಬಿಎಂಪಿ ಮೇಯರ್ ಆಯ್ಕೆಗೆ ಸಿದ್ಧತೆ ಆರಂಭ, ಯಾರೊಂದಿಗೆ ಮೈತ್ರಿ?ಬಿಬಿಎಂಪಿ ಮೇಯರ್ ಆಯ್ಕೆಗೆ ಸಿದ್ಧತೆ ಆರಂಭ, ಯಾರೊಂದಿಗೆ ಮೈತ್ರಿ?

'ಕಾಂಗ್ರೆಸ್ ಬಿಬಿಎಂಪಿಯಲ್ಲಿ ನಮ್ಮ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಜೆಡಿಎಸ್ ಸದಸ್ಯರಿರುವ ಕ್ಷೇತ್ರಕ್ಕೆ ಅನುದಾನ ಸರಿಯಾಗಿ ನೀಡುತ್ತಿಲ್ಲ. ಚುನಾವಣೆ ಬಂದಾಗ ಬೇರೆರೀತಿಯಾಗಿ ಅವರು ನಡೆದುಕೊಳ್ಳುತ್ತಾರೆ' ಎಂದು ಹೇಳಿದರು.

'ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಅನಿವಾರ್ಯವಲ್ಲ. ಯಾವ ಕಾಂಗ್ರೆಸ್ ನಾಯಕರು ಮೈತ್ರಿ ಕುರಿತು ನಮ್ಮ ಜೊತೆ ಚರ್ಚೆ ನಡೆಸಿಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಪ್ರಸ್ತುತ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ (ಕಾಂಗ್ರೆಸ್), ಉಪ ಮೇಯರ್ ಎಂ.ಆನಂದ (ಜೆಡಿಎಸ್). ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಜೆಡಿಎಸ್ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟಿದೆ. ಮೇಯರ್ ಪಟ್ಟ ಕೊಟ್ಟರೆ ಮೈತ್ರಿ ಮುಂದುವರೆಸುವುದಾಗಿ ಹೇಳಿದ್ದು, ಕುತೂಹಲಕ್ಕೆ ಕಾರಣವಾಗಿದೆ.

English summary
Bruhat Bangalore Mahanagara Palike (BBMP) Mayoral polls scheduled on September 28, 2017. JDS state president HD Kumaraswamy met the JDS corporators and discussed about election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X