ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಆಯ್ಕೆಗೆ ಸೆ.11ಕ್ಕೆ ಚುನಾವಣೆ

|
Google Oneindia Kannada News

ಬೆಂಗಳೂರು, ಸೆ. 02 : ಭಾರೀ ಕುತೂಹಲ ಕೆರಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಸೆ.11ರಂದು ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, 260 ಸದಸ್ಯರು ಮತದಾನ ಮಾಡಲಿದ್ದಾರೆ.

ಬುಧವಾರ ನಗರಾಭಿವೃದ್ಧಿ ಇಲಾಖೆ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ. ಸೆ.11ರ ಶುಕ್ರವಾರ ಬೆಳಗ್ಗೆ 11.30ಕ್ಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. 260 ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲಿದ್ದಾರೆ. [ಮೇಯರ್ ಚುನಾವಣೆ ಮ್ಯಾಜಿಕ್ ನಂ 131]

mayor

ಮೈತ್ರಿ ಕಸರತ್ತು : ಮೇಯರ್ ಮತ್ತು ಉಪ ಮೇಯರ್ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಸರಣಿ ಸಭೆ ಮತ್ತು ಮಾತುಕತೆಗಳು ನಡೆಯುತ್ತಿವೆ. ಇನ್ನೂ ಮೈತ್ರಿಕೂಟದ ಬಗ್ಗೆ ಸ್ಪಷ್ಟವಾದ ಚಿತ್ರಣಗಳು ಲಭ್ಯವಾಗಿಲ್ಲ. [ದೇವೇಗೌಡ-ಪರಮೇಶ್ವರ ಭೇಟಿ]

ಬಿಬಿಎಂಪಿ ಚುನಾವಣೆಯಲ್ಲಿ 100 ಸ್ಥಾನಗಳನ್ನುಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮೇಯರ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಬಿಜೆಪಿಯವರೇ ಮೇಯರ್ ಕಾದು ನೋಡಿ ಎಂದು ನಾಯಕರು ಈಗಾಗಲೇ ಹೇಳಿದ್ದಾರೆ. ಮೇಯರ್ ಪಟ್ಟ ಗಿಟ್ಟಿಸಲು ಬಿಜೆಪಿ ಯಾವ ಕಾರ್ಯತಂತ್ರ ರೂಪಿಸಿದೆ ಎನ್ನುವುದು ಇನ್ನೂ ನಿಗೂಢ.

ಬಿಜೆಪಿ ಬಲಾಬಲ : ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ 125 ಸದಸ್ಯ ಬಲ ಹೊಂದಿದೆ. ಹಲಸೂರು ವಾರ್ಡ್‌ನ ಪಕ್ಷೇತರ ಸದಸ್ಯೆ ಮಮತಾ ಶರವಣ ಅವರು ಬಿಜೆಪಿ ಸೇರಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಿಜೆಪಿಗೆ ಬೆಂಬಲ ನೀಡಿದರೆ ಬಿಜೆಪಿ ಬಲ 127 ಆಗುತ್ತದೆ.

ಮೈತ್ರಿಕೂಟದ ಬಲ : ಕಾಂಗ್ರೆಸ್ 100 ಸ್ಥಾನಗಳನ್ನು ಹೊಂದಿದ್ದು (ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ), ಜೆಡಿಎಸ್ 22 ಸ್ಥಾನಗಳನ್ನು ಹೊಂದಿದೆ. 7 ಪಕ್ಷೇತರ ಬಿಬಿಎಂಪಿ ಸದಸ್ಯರು, 2 ಪಕ್ಷೇತರ ವಿಧಾನಪರಿಷತ್ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು ಸೇರಿದರೆ 132 ಸದಸ್ಯ ಬಲವಾಗುತ್ತದೆ. ಮೇಯರ್ ಆಯ್ಕೆಗೆ 131 ಮತಗಳು ಸಾಕು.

English summary
Who will become Bruhat Bengaluru Mahanagara Palike (BBMP) Mayor and Deputy Mayor. Mayor and Deputy Mayor election schedule announced 260 voters will choose Mayor on September 11th, Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X