ಗೋಪಿ-ಪುಷ್ಪಾ ದಂಪತಿ ಮಗುವಿಗೆ ಸಿಕ್ತು ಬಿಬಿಎಂಪಿಯ 5 ಲಕ್ಷ ರು.ಹೊಸ ವರ್ಷದ ಗಿಫ್ಟ್

Posted By:
Subscribe to Oneindia Kannada
ಈ ವರ್ಷ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಭರ್ಜರಿ ಗಿಫ್ಟ್ | Oneindia Kannada

ಬೆಂಗಳೂರು, ಜನವರಿ 01 : ಹೊಸ ವರ್ಷದಂದು ಅಂದರೆ ಜನವರಿ 1, 2018ಕ್ಕೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಬಿಬಿಎಂಪಿ ಮೇಯರ್ ಘೋಷಿಸಿದ್ದ 5 ಲಕ್ಷ ರು. ಕೊಡುಗೆ ಗೋಪಿ ಮತ್ತು ಪುಷ್ಪಾ ದಂಪತಿ ಮಗುವಿನ ಪಾಲಾಗಿದೆ.

ಬಿಬಿಎಂಪಿ ಆಸ್ಪತ್ರೆಯಲ್ಲಿ ಜ.1 ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ

ರಾಜಾಜಿನಗರ ಭಾಷಂ ಸರ್ಕಲ್ ನಲ್ಲಿರುವ ಡಾ.ನಾಗರಾಜ್ ಸ್ಮಾರಕ ಬಿಬಿಎಂಪಿ ಆಸ್ಪತ್ರೆಯಲ್ಲಿ ಗೋಪಿ ಮತ್ತು ಪುಷ್ಪಾ ದಂಪತಿಗೆ ರಾತ್ರಿ 12.05 ನಿಮಿಷಕ್ಕೆ ಹುಟ್ಟಿದ ಹೆಣ್ಣು ಮಗುವಿಗೆ ಈ ಹೊಸ ವರ್ಷದ ಗಿಫ್ಟ್ ದೊರಕಿದೆ. ಗೋಪಿ ಮತ್ತು ಪುಷ್ಪಾ ದಂಪತಿಗೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಸೋಮವಾರ 5 ಲಕ್ಷ ರು. ಚೆಕ್ ನೀಡಿ ಶುಭ ಹಾರೈಸಿದರು.

BBMP Mayor Sampath Raj has distributed Rs 5 lakh to Gopi and Pushpa for 1st girl child born in 2018

ಬಳಿಕ ಮಾತನಾಡಿದ ಮೇಯರ್ ಸಂಪತ್ ರಾಜ್ , ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಮಗು ಹಾಗೂ ಬಿಬಿಎಂಪಿ ಕಮಿಷಿನರ್ ಹೆಸರಿನಲ್ಲಿ ಐದು ಲಕ್ಷ ಹಣ ಠೇವಣಿ ಇಡಲಾಗುವುದು. ಮಗುವಿನ ಶಿಕ್ಷಣಕ್ಕೆ ಮಾತ್ರ ಈ ಹಣ ಬಳಕೆಯಾಗಲಿದೆ ಎಂದು ಹೇಳಿದರು.

ಹೊಸ ವರ್ಷದ (ಜ.1) ದಿನದಂದು ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರು.ಹಣ ನೀಡುವುದಾಗಿ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಮೇಯರ್ ಸಂಪತ್ ರಾಜ್ ಈ ಆಫರ್ ಅನ್ನು ಘೋಷಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bhurat Bangalore Mahanagar Palike (BBMP) Mayor Sampath Raj has distributed Rs 5 lakh to Gopi and Pushpa for 1st girl child born in 2018. He announced BBMP will deposit Rs 5 lakhs in joint account of municipal commissioner and 1st girl child born in 2018 in any BBMP hospital.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ