ಬಿಬಿಎಂಪಿಯ 50ನೇ ಮೇಯರ್ ಜಿ ಪದ್ಮಾವತಿ ವ್ಯಕ್ತಿಚಿತ್ರ

Posted By:
Subscribe to Oneindia Kannada

ಬೆಂಗಳೂರು, ಸೆ. 28: 'ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಇರಲ್ಲ. ಸರ್ಕಾರ ಬೇಕಾದ ವ್ಯವಸ್ಥೆ ಮಾಡಿದೆ' ಎಂದು ಘೋಷಿಸಿರುವ ಬಿಬಿಎಂಪಿಯ 50ನೇ ಮೇಯರ್ ಜಿ ಪದ್ಮಾವತಿ ಅವರ ವ್ಯಕ್ತಿ ಚಿತ್ರ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ವಿವರಗಳು ಇಲ್ಲಿವೆ.

ಪ್ರಕಾಶ್ ನಗರ ವಾರ್ಡ್ ಕಾಂಗ್ರೆಸ್ ಕಾರ್ಪೊರೇಟರ್ ಪದ್ಮಾವತಿ ಅವರು ಬುಧವಾರ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ರಾಧಾಕೃಷ್ಣನಗರ ವಾರ್ಡಿನ ಜೆಡಿಎಸ್ ಕಾರ್ಪೊರೇಟರ್ ಆನಂದ್ ಅವರು ಉಪಮೇಯರ್ ಆಗಿದ್ದಾರೆ.

ಬಿಬಿಎಂಪಿಯಲ್ಲಿ ಮೇಯರ್ ಆಯ್ಕೆಗಾಗಿ 198 ಬಿಬಿಎಂಪಿ ಸದಸ್ಯರು, 28 ಶಾಸಕರು, 28 ವಿಧಾನಪರಿಷತ್ ಸದಸ್ಯರು, 5 ಲೋಕಸಭಾ ಸದಸ್ಯರು, 11 ರಾಜ್ಯಸಭಾ ಸದಸ್ಯರು ಸೇರಿ 269 ಮತದಾರರು. ಆದರೆ, 262 ಜನಪ್ರತಿನಿಧಿಗಳು ಮತ ಹಾಕಿದರು. 135 ಮ್ಯಾಜಿಕ್ ನಂಬರ್.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಕೆಂಪೇಗೌಡ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತೆ ಎಂ ಜಯಂತಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮ್ಯಾಜಿಕ್ ಸಂಖ್ಯೆ 135 ದಾಟಿದ ಪದ್ಮಾವತಿ ಅವರ ಪರ 142 ಮತ ಬಿದ್ದರೆ, ಗಣೇಶ್ ಮಂದಿರ ವಾರ್ಡಿನ ಬಿಜೆಪಿ ಸದಸ್ಯೆ ಲಕ್ಷ್ಮೀ ಪರ 120 ವೋಟ್ ಬಿತ್ತು. [ಬಿಬಿಎಂಪಿ ಮೇಯರ್ ಚುನಾವಣೆ : ಅಂಕಿ-ಸಂಖ್ಯೆಗಳಲ್ಲಿ ಬಲಾಬಲ]

ಓದುಗರಿಗೆ ಸೂಚನೆ: 2008ರಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್ ನಂತೆ ಕ್ರಿಮಿನಲ್ ಕೇಸ್ ಹಾಗೂ ಆಸ್ತಿ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಸದ್ಯದ ಮಾಹಿತಿ ಇನ್ನೂ ಲಭ್ಯವಿಲ್ಲ. ಇಲ್ಲಿ ರುವ ಆಸ್ತಿ ಮೌಲ್ಯ ಅಂದಾಜು ಲೆಕ್ಕಕ್ಕೆ ಮಾತ್ರ

ಮನೆ ವಿಳಾಸ ಹಾಗೂ ಸಂಪರ್ಕ ಸಂಖ್ಯೆ

ಮನೆ ವಿಳಾಸ ಹಾಗೂ ಸಂಪರ್ಕ ಸಂಖ್ಯೆ

ಹೆಸರು: ಜಿ ಪದ್ಮಾವತಿ
ಪತಿ ಹೆಸರು: ಆರ್ ಜೈಪಾಲ್
ಮಗ: ಜೆ ಮಂಜುನಾಥ್
ವಿಳಾಸ: #2/1, 2ನೇ ಅಡ್ಡರಸ್ತೆ, ಕೆಪಿ ದೇಗುಲ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560 010
ದೂರವಾಣಿ ಸಂಖ್ಯೆ : 96630 00002

ಪದ್ಮಾವತಿ ಅವರ ವಾರ್ಡ್ ವಿವರ

ಪದ್ಮಾವತಿ ಅವರ ವಾರ್ಡ್ ವಿವರ

ವಾರ್ಡ್ ಸಂಖ್ಯೆ: 98
ವಾರ್ಡ್ ಹೆಸರು: ಪ್ರಕಾಶ್ ನಗರ
ವಾರ್ಡ್ ವಿಸ್ತೀರ್ಣ(ಚದರ ಕಿ.ಮೀ) : 0.5
ವಿಧಾನ ಸಭಾ ಕ್ಷೇತ್ರ: ರಾಜಾಜಿನಗರ

ಕ್ರಿಮಿನಲ್ ಕೇಸುಗಳು: ಬಿಎಂಪಿ ಸಮಿತಿಯ ಆರ್ಥಿಕ ಅವ್ಯವಹಾರ ಆರೋಪ: ಐಪಿಸಿ ಸೆಕ್ಷನ್ 120ಬಿ, 468, 420 ಅನ್ವಯ ಪ್ರಕರಣ 6ನೇ ಎಸಿಎಂಎಂ ಕೋರ್ಟಿನಲ್ಲಿ ದಾಖಲಾಗಿದೆ.

ಸ್ಥಿರಾಸ್ತಿ ವಿವರ

ಸ್ಥಿರಾಸ್ತಿ ವಿವರ

* ಪದ್ಮಾವತಿ, ಜೈಪಾಲ್ ಹಾಗೂ ಅವಲಂಬಿತ ಜೆ ಮಂಜುನಾಥ್ ಅವರ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು, ಕೃಷಿಯೇತರ ಜಮೀನು ಇಲ್ಲ
* ಕಟ್ಟಡಗಳು :
-ಪದ್ಮಾವತಿ ಅವರ ಹೆಸರಿನಲ್ಲಿ ರಾಜಾಜಿನಗರ 6ನೇ ಬ್ಲಾಕಿನಲ್ಲಿ ವಾಣಿಜ್ಯ ಕಟ್ಟಡ 30X45 ವಿಸ್ತೀರ್ಣ 2500 ಚ.ಅಡಿ, ಮಾರುಕಟ್ಟೆ ಮೌಲ್ಯ 40,00,000 ರು ಗೂ ಅಧಿಕ
-ಪದ್ಮಾವತಿ ಅವರ ಹೆಸರಿನಲ್ಲಿ ರಾಜಾಜಿನಗರ 6ನೇ ಬ್ಲಾಕಿನಲ್ಲಿ ವಾಣಿಜ್ಯ ಕಟ್ಟಡ 60X40 ವಿಸ್ತೀರ್ಣ 3500 ಚ.ಅಡಿ, ಮಾರುಕಟ್ಟೆ ಮೌಲ್ಯ 48,00,000 ರು ಗೂ ಅಧಿಕ

*ಮೂವರ ಹೆಸರಿನಲ್ಲಿ ಸ್ವಂತ ಮನೆ ಇಲ್ಲ

ಚರಾಸ್ತಿಗಳ ವಿವರಗಳು

ಚರಾಸ್ತಿಗಳ ವಿವರಗಳು

ನಗದು: ಪದ್ಮಾವತಿ: 22,000 ರು, ಜೈಪಾಲ್ 40,000 ರು ಹಾಗೂ ಮಂಜುನಾಥ್ (ಏನು ಇಲ್ಲ)
ಬ್ಯಾಂಕ್ ಠೇವಣಿ: ಪದ್ಮಾವತಿ: 44,682 ರು, ಜೈಪಾಲ್ 10,000 ರು ಹಾಗೂ ಮಂಜುನಾಥ್ (ಏನು ಇಲ್ಲ)
* ಬಾಂಡ್, ಡಿಬೆಂಚರುಗಳು, ಷೇರುಗಳು, ಎನ್ ಎಸ್ ಎಸ್, ಅಂಚೆ ಉಳಿತಾಯ, ಎಲ್ ಐಸಿ ಪಾಲಿಸಿ ಇಲ್ಲ
* ವಾಹನ: ಜೈಪಾಲ್ ಬಳಿ ಮಾರುತಿ ವ್ಯಾನ್(2004 ಮಾಡೆಲ್) 1,10000 ರು ಅಂದಾಜು
ಆಭರಣಗಳು: ಮಂಗಳ ಸೂತ್ರ 30 ಗ್ರಾಂ, ಬಳೆಗಳು (3)- 177 ಗ್ರಾಂ, ಕೈ ಉಂಗುರ(3)- 15ಗ್ರಾಂ, ಹಾರಗಳು(2) 160ಗ್ರಾಂ: 382ಗ್ರಾಂ 3 ಲಕ್ಷ ಅಂದಾಜು
* ಜೈಪಾಲ್ ಬಳಿ ಹಾರ: 35 ಗ್ರಾಂ, ಉಂಗುರ(2)-20 ಗ್ರಾಂ, ಬ್ರೇಸ್ ಲೆಟ್ -20ಗ್ರಾಂ, ಒಟ್ಟು 75ಗ್ರಾಂ-52,500 ರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress corporator G Padmavathi from Prakash Nagar ward has been elected as New mayor of BBMP. JD(S) Corporator Anand from Radakrishna ward as her deputy. BBMP Mayor G Padmavathi INC Profile Affidavit details
Please Wait while comments are loading...