ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಆಯ್ಕೆ ದಿನಾಂಕ ನಿಗದಿ, ಚುನಾವಣೆ ಹೇಗೆ?

By Manjunatha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03: ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್‌ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು. ಇದೇ ತಿಂಗಳ 28ನೇ ತಾರೀಖಿನಂದು ಚುನಾವಣೆ ನಡೆಯಲಿದೆ.

ಸೆಪ್ಟೆಂಬರ್ 28ರಂದು ಬೆಳಿಗ್ಗೆ 11 ಗಂಟೆಗೆ ಚುನಾವಣೆ ನಡೆಸುವಂತೆ ಸೂಚಿಸಲಾಗಿದ್ದು, ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತ ಶಿವಪ್ರಸಾದ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಈಗಾಗಲೇ ಮೇಯರ್ ಸ್ಥಾನಕ್ಕೆ ಭಾರಿ ಪೈಪೋಟಿ ಆರಂಭವಾಗಿದೆ.

ಬೆಂಗ್ಳೂರು ಬಿ ಖಾತೆ ಮಾಲೀಕರಿಗೆ ಸಿಹಿ ಸುದ್ದಿ ಇದೆ, ಆದರೆ ಎಚ್ಚರ ಇರಲಿ ಬೆಂಗ್ಳೂರು ಬಿ ಖಾತೆ ಮಾಲೀಕರಿಗೆ ಸಿಹಿ ಸುದ್ದಿ ಇದೆ, ಆದರೆ ಎಚ್ಚರ ಇರಲಿ

ಸಂಪತ್ ರಾಜ್ ಅವರ ಅಧಿಕಾರ ಸಮಯವು ಮುಕ್ತಾಯವಾಗಲಿದ್ದು ಈ ಬಾರಿ ಆಯ್ಕೆ ಆಗುವ ಮೇಯರ್ ಈ ಅವಧಿಯ ಮೂರನೇ ಮೇಯರ್ ಆಗಲಿದ್ದಾರೆ.

ಯಾರ್ಯಾರು ಮತ ಚಲಾಯಿಸುತ್ತಾರೆ?

ಯಾರ್ಯಾರು ಮತ ಚಲಾಯಿಸುತ್ತಾರೆ?

ಬಿಬಿಎಂಪಿ ಸದಸ್ಯರು, ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ಮೇಲ್ಮನೆ ಸದಸ್ಯರು ಸೇರಿ ಒಟ್ಟು 259 ಮಂದಿ ಜನಪ್ರತಿನಿಧಿಗಳು ಮೇಯರ್ ಚುನಾವಣೆಯಲ್ಲಿ ಮತಚಲಾಯಿಸುತ್ತಾರೆ. ಮೇಯರ್ ಆಗಲು 130 ಮತ ಗಳಿಸಬೇಕಿದೆ.

ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಕಳವು!ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಕಳವು!

ಒಟ್ಟು ಮತಗಳ ಸಂಖ್ಯೆ ಎಷ್ಟು?

ಒಟ್ಟು ಮತಗಳ ಸಂಖ್ಯೆ ಎಷ್ಟು?

ಬಿಬಿಎಂಪಿಯಲ್ಲಿ ಒಟ್ಟು 198 ಸದಸ್ಯರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಶಾಸಕರಿದ್ದಾರೆ, 5 ಲೋಕಸಭಾ ಸದಸ್ಯರಿದ್ದಾರೆ, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ಎಲ್ಲರನ್ನೂ ಸೇರಿಸಿ 259 ಜನಪ್ರತಿನಿಧಿಗಳು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಆಸ್ತಿ ತೆರಿಗೆ ಜತೆ ವಾಹನ ತೆರಿಗೇನೂ ಕಟ್ಟಬೇಕು: ನಾಗರಿಕರಿಗೆ ಶಾಕ್ಆಸ್ತಿ ತೆರಿಗೆ ಜತೆ ವಾಹನ ತೆರಿಗೇನೂ ಕಟ್ಟಬೇಕು: ನಾಗರಿಕರಿಗೆ ಶಾಕ್

ಬಿಬಿಎಂಪಿಯಲ್ಲಿ ಯಾರ ಬಲ ಎಷ್ಟಿದೆ?

ಬಿಬಿಎಂಪಿಯಲ್ಲಿ ಯಾರ ಬಲ ಎಷ್ಟಿದೆ?

ಬಿಬಿಎಂಪಿಯಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವುದು ಬಿಜೆಪಿ. ಕಾಂಗ್ರೆಸ್‌ ಪಕ್ಷದ 77 ಸದಸ್ಯರಿದ್ದರೆ, ಬಿಜೆಪಿಯ 100 ಸದಸ್ಯರಿದ್ದಾರೆ, ಜೆಡಿಎಸ್‌ನ 17 ಸದಸ್ಯರಿದ್ದಾರೆ. 7 ಪಕ್ಷೇತರ ಸದಸ್ಯರಿದ್ದಾರೆ.

ಕಾಂಗ್ರೆಸ್ ಬಲ ಎಷ್ಟಿದೆ?

ಕಾಂಗ್ರೆಸ್ ಬಲ ಎಷ್ಟಿದೆ?

ಬಿಬಿಎಂಪಿಯಲ್ಲಿ ಕಾಂಗ್ರೆಸ್‌ನ ಒಟ್ಟು 77 ಸದಸ್ಯರಿದ್ದಾರೆ. ಬಿಬಿಎಂಪಿಯ 7 ಪಕ್ಷೇತರ ಸದಸ್ಯರು ಕೂಡಾ ಕಾಂಗ್ರೆಸ್ ಜೊತೆಗಿದ್ದಾರೆ. ಜೊತೆಗೆ 15 ಶಾಸಕರು, 6 ರಾಜ್ಯಸಭಾ ಸದಸ್ಯರು, 9 ವಿಧಾನಪರಿಷತ್ ಸದಸ್ಯರು, ಇಬ್ಬರು ಸಂಸದರು ಸೇರಿ ಒಟ್ಟು 116 ಮತಗಳು ಕಾಂಗ್ರೆಸ್‌ ಬಳಿ ಇವೆ. ಆದರೆ ಮೇಯರ್ ಚುನಾವಣೆ ಗೆಲ್ಲಲು 130 ಮತಗಳು ಬೇಕಿವೆ ಹಾಗಾಗಿ ಜೆಡಿಎಸ್‌ನ 17 ಸದಸ್ಯರು ಮತ್ತು ಇಬ್ಬರು ಶಾಸಕರ ಬಲ ಸೇರಿಸಿದರೆ ಕಾಂಗ್ರೆಸ್ ಪಕ್ಷವು ಸುಲಭವಾಗಿ ಮೇಯರ್ ಚುನಾವಣೆ ಗೆಲ್ಲುತ್ತದೆ.

ಸೌಮ್ಯಾ ಶಿವಕುಮಾರ್ ಆಕಾಂಕ್ಷಿ

ಸೌಮ್ಯಾ ಶಿವಕುಮಾರ್ ಆಕಾಂಕ್ಷಿ

ಜಿ.ಪದ್ಮಾವತಿ ಅವರು ಮೇಯರ್ ಆಗಿ ಆಯ್ಕೆ ಆಗುವಾಗಲೇ ಮೇಯರ್ ಸ್ಥಾನಕ್ಕೆ ಭಾರಿ ಪೈಪೋಟಿ ನೀಡಿದ್ದ ಆಕಾಂಕ್ಷಿ ಸೌಮ್ಯಾ ಶಿವಕುಮಾರ್ ಅವರು ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಕ್ಕಲಿಗ ಸಮುದಾಯದವರೂ ಆಗಿರುವ ಅವರಿಗೆ ಮೇಯರ್ ಸ್ಥಾನ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ವೀರಶೈವ ಸಮುದಾಯಕ್ಕೆ ಅವಕಾಶ ಕೊಡಿ

ವೀರಶೈವ ಸಮುದಾಯಕ್ಕೆ ಅವಕಾಶ ಕೊಡಿ

ವೀರಶೈವ ಸಮುದಾಯದವರಿಗೆ ಈ ಬಾರಿ ಮೇಯರ್ ಸ್ಥಾನ ನೀಡಬೇಕು ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ. 40 ವರ್ಷದಿಂದ ಒಬ್ಬ ವೀರಶೈವ ಸಮುದಾಯದವರೂ ಮೇಯರ್ ಆಗಿಲ್ಲ ಹಾಗಾಗಿ ಈ ಬಾರಿ ವೀರಶೈವ ಸಮುದಾಯದ ಸದಸ್ಯೆ ಗಂಗಾಂಬಿಕೆ ಅವರಿಗೆ ಮೇಯರ್ ಸ್ಥಾನ ನೀಡಬೇಕು ಎಂಬ ಕೂಗು ಸಹ ಇದೆ.

English summary
BBMP mayor election date announced. election is going to held on September 28. 259 people will vote in this election. Congress may win the election with the help of JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X