ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಹೊಸ ತೆರಿಗೆ ಹಾಕಲಿದೆ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ನವೆಂಬರ್ 24 : ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಯದ ಗೋಳು. ಕಸ ವಿಲೇವಾರಿಗಾಗಿಯೇ ಬಿಬಿಎಂಪಿ ವಾರ್ಷಿಕ 300 ಕೋಟಿ ಗೂ ಅಧಿಕ ಖರ್ಚು ಮಾಡುತ್ತದೆ. ಅನುದಾನ ಸಂಗ್ರಹಣೆ ಮಾಡಲು ಆಸ್ತಿ ತೆರಿಗೆ ಮೇಲೆ ಕಸದ ಕರ ಸಂಗ್ರಹಣೆ ಮಾಡುವ ಪ್ರಸ್ತಾವನೆ ಸಿದ್ಧವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ನವೆಂಬರ್ 28ರಂದು ಪಾಲಿಕೆಯ ಕೌನ್ಸಿಲ್ ಸಭೆ ನಡೆಯಲಿದ್ದು, ಅಂದು ಈ ಕುರಿತು ಚರ್ಚೆ ನಡೆಯುತ್ತದೆ.

ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಮುಂದಾದ ಬಿಬಿಎಂಪಿಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಮುಂದಾದ ಬಿಬಿಎಂಪಿ

BBMP may collect garbage collection service charge with property tax

ರಾಜಸ್ಥಾನದಲ್ಲಿ ಆಸ್ತಿ ತೆರಿಗೆ ಜೊತೆಗೆ ಕಸ ಸಂಗ್ರಹ ಕರವನ್ನು ಸಂಗ್ರಹ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ತೆರಿಗೆ ಸಂಗ್ರಹ ಮಾಡಲು ಬಿಬಿಎಂಪಿ ಪ್ರಸ್ತಾವನೆ ಸಿದ್ಧಪಡಿಸಿದೆ.

ಮಂಗಳೂರಿನ ಡಾ. ಹರೀಶ್ ಜೋಷಿಯವರ ಸ್ವಚ್ಛತೆಯ ಮೌನ ಕ್ರಾಂತಿಮಂಗಳೂರಿನ ಡಾ. ಹರೀಶ್ ಜೋಷಿಯವರ ಸ್ವಚ್ಛತೆಯ ಮೌನ ಕ್ರಾಂತಿ

ವಾಣಿಜ್ಯ, ವಾಸದ ಕಟ್ಟಡಗಳ ಆಸ್ತಿ ತೆರಿಗೆ ಜೊತೆಗೆ ಶೇ 15ರಷ್ಟು ಕಸದ ಕರವನ್ನು ಸಂಗ್ರಹಣೆ ಮಾಡಲಾಗುತ್ತದೆ. ಮಂಗಳವಾರ ನಡೆಯುವ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಬಿಬಿಎಂಪಿ ವೆಬ್ ತಾಣದಲ್ಲಿ ಆಸ್ತಿ ವಿವರ ಗುರುತಿಸುವುದು ಹೇಗೆ?ಬಿಬಿಎಂಪಿ ವೆಬ್ ತಾಣದಲ್ಲಿ ಆಸ್ತಿ ವಿವರ ಗುರುತಿಸುವುದು ಹೇಗೆ?

ಕಸದ ಕರ ಹೇಗೆ? : ವಾಸದ ಕಟ್ಟಡ 1000 ಚದರ ಅಡಿ ಇದ್ದರೆ 10 ರೂ., 1001 ಚದರ ಅಡಿ ಇದ್ದರೆ 30 ರೂ., 3001 ಚದರ ಅಡಿ ಇದ್ದರೆ 50 ರೂ. ದರ ವಿಧಿಸುವ ಪ್ರಸ್ತಾವನೆ ಇದೆ.

ಹೋಟೆಲ್, ಕಲ್ಯಾಣ ಮಂಟಪ, ನರ್ಸಿಂಗ್ ಹೋಂಗಳಿಗೆ 1000 ಚದರ ಅಡಿಗೆ 300 ರೂ., 1001 ಚದರ ಅಡಿಗೆ 50 ರೂ., 5001 ಚದರ ಅಡಿಗೆ 600 ರೂ. ಕರ ವಿಧಿಸಲಾಗುತ್ತದೆ.

ಕೈಗಾರಿಕಾ ಕಟ್ಟಡಕ್ಕೆ 1000 ಚದರ ಅಡಿಗೆ 100 ರೂ., 1001 ಚದರ ಅಡಿಗೆ 200 ರೂ., 5001 ಚದರ ಅಡಿಗೆ 300 ರೂ. ಕರ ಸಂಗ್ರಹಣೆ ಮಾಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

English summary
The Bruhat Bengaluru Mahanagara Palike (BBMP) may collect service charges for garbage collection with payment of property tax. Proposal will be discussed in council meeting on November 28, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X