ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ 2 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸ್ವಚ್ಛತಾ ಕಾರ್ಯ

By Nayana
|
Google Oneindia Kannada News

ಬೆಂಗಳೂರು, ಜು.3: ನಗರದಲ್ಲಿ ತ್ಯಾಜ್ಯ ಪ್ರಮಾಣ ವಿಪರೀತವಾಗಿದೆ, ಅದರ ವಿಲೇವಾರಿ ಸಮಸ್ಯೆಯೂ ಕಾಡುತ್ತಿದೆ, ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯು ಪ್ರತಿ ವರ್ಷ ಒಂದು ಸಾವಿರ ಕೋಟಿ ಹಣವನ್ನು ವ್ಯಯಿಸುತ್ತಿದೆ. ಆದರೆ ಈ ಬಾರಿ ಅದು 2 ಸಾವಿರ ಕೋಟಿ ರೂ. ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಬಿಎಂಪಿ ನೀಡಿರುವ ಗುತ್ತಿಗೆ ಪ್ರಕಾರ ಸುಲ್ತಾನ್‌ ಪಾಳ್ಯ, ರೆಹಮತ್‌ನಗರ ಮುಖ್ಯರಸ್ತೆ, ಆರ್‌ಟಿನಗರ ಮುಖ್ಯರಸ್ತೆ ಪ್ರದೇಶವಿರುವ 5.5 ಕಿ.ಮೀ ರಸ್ತೆಯನ್ನು ಸ್ವಚ್ಛತೆಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಎಸ್‌ಎನ್‌ಎಸ್‌ ಎಂಟರ್‌ಪ್ರೈಸಸ್‌ಗೆ 1 ಕಿ.ಮೀಗೆ 60,050 ರೂ.ನಂತೆ ಮಾಸಿಕ ಒಟ್ಟು 3,30,275 ಲಕ್ಷ ರೂ. ಪಾವತಿಸಲಾಗುತ್ತಿದೆ. ಈಗ ನೀಡಿರುವ ಗುತ್ತಿಗೆ ಅವಧಿ 6 ತಿಂಗಳಿಗೆ ಎಂದು ನಿಗದಿ ಮಾಡಲಾಗಿದೆ.

ಬೆಂಗಳೂರಲ್ಲಿ ಕಿರು ತ್ಯಾಜ್ಯ ಸಂಸ್ಕರಣಾ ಘಟಕ ತೆರೆಯಲು ಚಿಂತನೆ: ಪರಮೇಶ್ವರ್ಬೆಂಗಳೂರಲ್ಲಿ ಕಿರು ತ್ಯಾಜ್ಯ ಸಂಸ್ಕರಣಾ ಘಟಕ ತೆರೆಯಲು ಚಿಂತನೆ: ಪರಮೇಶ್ವರ್

ಅದಕ್ಕೂ ಮುನ್ನ ಟೆಂಡರ್‌ ಪ್ರಕ್ರಿಯೆ ನಡೆಸಿ, ತ್ಯಾಜ್ಯ ನಿರ್ವಹಣೆಗೆ ಹೊಸ ಗುತ್ತಿಗೆದಾರರನ್ನು ನಿಯೋಜಿಸುವುದಾಗಿಯೂ ಬಿಬಿಎಂಪಿ ತಿಳಿಸಿದೆ. ಒಂದು ವೇಳೆ ಟೆಂಡರ್‌ ಪ್ರಕ್ರಿಯೆ ನಡೆಯದಿದ್ದರೆ, ಎಸ್‌ಎನ್‌ಎಸ್‌ ಎಂಟರ್‌ಪ್ರೈಸಸ್‌ ಸಂಸ್ಥೆಯನ್ನೇ ಮುಂದುವರೆಸುವುದಾಗಿಯೂ ತಿಳಿಸಿದೆ.

BBMP likely to spend 2 thousand crore for road cleaning

ನಗರದಲ್ಲಿರುವ 13 ಸಾವಿರ ಕಿ.ಮೀ 93,135 ರಸ್ತೆಗಳ ಸ್ವಚ್ಛತೆಗೆ ಅನ್ವಯಿಸಿದರೆ 2 ಸಾವಿರ ಕೋಟಿ ರೂ.ಗಳೂ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಆಗ ಬಿಬಿಎಂಪಿ ವಸೂಲಿ ಮಾಡುವ ಆಸ್ತಿ ತೆರಿಗೆಯ ಶೇ.95 ಭಾಗ ತ್ಯಾಜ್ಯ ನಿರ್ವಹಣೆಗೆ ಖರ್ಚಾಗಲಿದ್ದು, ಉಳಿದ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಅನುದಾನ ಅಥವಾ ಸಾಲದ ಮೊರೆ ಹೋಗಬೇಕಾಗುತ್ತದೆ.

English summary
BBMP is planning to spend 2000 crore for road cleaning and waste management in the city. Initial tenders has given recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X