ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ತೆರಿಗೆ ಜತೆ ವಾಹನ ತೆರಿಗೇನೂ ಕಟ್ಟಬೇಕು: ನಾಗರಿಕರಿಗೆ ಶಾಕ್

By Nayana
|
Google Oneindia Kannada News

Recommended Video

ಬೆಂಗಳೂರು ಬಿಬಿಎಂಪಿ ಆಸ್ತಿ ತೆರಿಗೆ ಜೊತೆ ವಾಹನ ತೆರಿಗೆ ಕೂಡ ಹೇರುವ ಸಾಧ್ಯತೆ | Oneindia kannada

ಬೆಂಗಳೂರು, ಆಗಸ್ಟ್ 31: ಇತ್ತೀಚೆಗಷ್ಟೇ ಸಾರಿಗೆ ಉಪಕರ ಹೇರುವ ಕ್ರಮಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧಕ್ಕೆ ಕಾರಣವಾಗಿದ್ದ ಬಿಬಿಎಂಪಿ ಇದೀಗ ಬೆಂಗಳೂರು ನಗರದ ಸರಿಸುಮಾರು 70 ಲಕ್ಷ ವಾಹನಗಳ ಮೇಲೆ ತೆರಿಗೆ ಹೇರಲು ಹೊಸ ತೆರಿಗೆ ಪ್ರಸ್ತಾಪ ಮುಂದಿಟ್ಟಿದೆ.

ಬಿಬಿಎಂಪಿ ಉನ್ನತ ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಪ್ರತಿಯೊಂದು ಬೈಕ್, ಕಾರು ಹಾಗೂ ಇತರೆ ಎಲ್ಲ ವಾನಗಳ ಮೇಲೆ ಹಂತ ಹಂತವಾಗಿ ತೆರಿಗೆ ಹೇರಲು ಬಿಬಿಎಂಪಿ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಪ್ರತಿ ಬೈಕ್ ಗೆ 50ರೂ ಕಾರಿಗೆ 100 ಹಾಗೂ ಭಾರಿ ವಾಹನಗಳಿಗೆ 500ರೂ ವಾರ್ಷಿಕವಾಗಿ ತೆರಿಗೆ ವಸೂಲಿ ಮಾಡಲಿದೆ.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಈ ವಾಹನಗಳ ತೆರಿಗೆಯನ್ನು ಆಸ್ತಿ ತೆರಿಗೆ ಪಾವತಿ ವೇಳೆಯೆ ವಸೂಲಿ ಮಾಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಪ್ರತಿ ಮನೆಗೆ ನಾಲ್ಕಕ್ಕಿಂತ ಹೆಚ್ಚು ವಾಹನಗಳಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಆದಾಯ ಮೂಲವನ್ನು ವಾಹನಗಳ ಮೇಲೆ ತೆರಿಗೆ ಹೇರುವ ಮೂಲಕವೇ ಕಂಡುಕೊಳ್ಳಲು ಚಿಂತನೆ ನಡೆಸಿದೆ.

BBMP likely to impose vehicle tax

ಬೆಂಗಳೂರು ನಗರದ ವಾಹನಗಳ ದಟ್ಟಣೆಯಿಂದ ರಸ್ತೆಗಳು ಕೂಡಾ ಸದಾ ಗಿಜಿಗುಡುತ್ತಿರುವುದರಿಂದ ರಸ್ತೆಗಳ ನಿರ್ವಹಣೆ ಪಾಲಿಕೆಗೆ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ವಾಹನಗಳ ತೆರಿಗೆ ಪಾವತಿಸದಿದ್ದರೆ ವಾಹನಗಳ ಪಾರ್ಕಿಂಗ್ ಗೂ ಕಡಿವಾಣ ಹಾಕಲು ನಿಯಮ ರೂಪಿಸುತ್ತಿದೆ

ಬಿಬಿಎಂಪಿ ಹೊಸ ನೀತಿ: ಕಮರ್ಷಿಯಲ್ ಜಾಹೀರಾತಿಗೆ ಶಾಶ್ವತ ಬ್ರೇಕ್ಬಿಬಿಎಂಪಿ ಹೊಸ ನೀತಿ: ಕಮರ್ಷಿಯಲ್ ಜಾಹೀರಾತಿಗೆ ಶಾಶ್ವತ ಬ್ರೇಕ್

ವಾಹನಗಳ ತೆರಿಗೆ ಪಾವತಿಸಿದ ನಂತರವಷ್ಟೇ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಕೊಡುವ ಕಠಿಣ ನಿರ್ಧಾರವೂ ನಿಯಮಗಳಲ್ಲಿ ಅಡಕವಾಗಿದೆ ಎನ್ನಲಾಗುತ್ತಿದೆ.

ಬಿಬಿಎಂಪಿಯ ಈ ಹೊಸ ಪ್ರಸ್ತಾವಕ್ಕೆ ನಾಗರಿಕರು ಹೇಗೆ ಸ್ಪಂದಿಸುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಬಿಬಿಎಂಪಿ ಹೇರುತ್ತಿರುವ ತೆರಿಗೆ ಸಾಕಷ್ಟು ಹೊರೆಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿತ್ತು, ವಾಹನಗಳ ಮೇಲೆಯೂ ತೆರಿಗೆ ಹೇರುವ ಪ್ರಸ್ತಾವಕ್ಕೆ ಜನರು ಒಪ್ಪುವುದು ಕಷ್ಟವೇ ಎನ್ನಲಾಗುತ್ತಿದೆ.

ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್

ಒಟ್ಟಾರೆ ಆದಾಯ ಸಂಗ್ರಹಕ್ಕಾಗಿ ಪಾಲಿಕೆ ದಿನಕ್ಕೊಂದು ಹೊಸ ರೀತಿಯ ತೆರಿಗೆ ಪ್ರಸ್ತಾವ ಮುಂದಿಡುತ್ತಿರುವುದು ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ.ಕಳೆದ ವಾರವಷ್ಟೇ ಬಿಬಿಎಂಪಿ ಸಾರಿಗೆ ಉಪಕರದ ಮೂಲಕ ಶೇ.2ರಷ್ಟು ಸೆಸ್ ಹೇರಲು ಮುಂದಾಗಿತ್ತು, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾವ ಕೈಬಿಡಲಾಗಿತ್ತು.

English summary
BBMP likely to impose new tax on every vehicle in the city as Rs.50 on bike and Rs.100 on car. The new tax should be paid with property tax as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X