ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ದಟ್ಟಣೆ ಕಡಿಮೆ ಮಾಡುವ ಪಾಡ್‌ ಟ್ಯಾಕ್ಸಿಗೆ ಒಪ್ಪಿಗೆ ಸಿಗುತ್ತಾ?

By Nayana
|
Google Oneindia Kannada News

ಬೆಂಗಳೂರು, ಜೂನ್‌ 28: ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆ ಪರಿಹರಿಸಲು ಬಿಬಿಎಂಪಿಯ ಖಾಸಗಿ ಸಹ ಭಾಗಿತ್ವದಲ್ಲಿ ಕೈಗೊಂಡಿರುವ ಪಾಡ್‌ ಟ್ಯಾಕ್ಸಿ ಯೋಜನೆ ಜಾರಿ ಪ್ರಸ್ತಾಪಕ್ಕೆ ಕೌನ್ಸಿಲ್‌ ಸಭೆ ಅನುಮೋದನೆ ನೀಡುವ ಸಾಧ್ಯತೆ ಇದೆ.

ಟ್ರಿನಿಟಿ ವೃತ್ತದಿಂದ ವೈಟ್‌ಫೀಲ್ಡ್‌ವರೆಗೆ ಮತ್ತು ಹೊರವರ್ತುಲ ರಸ್ತೆಯ ಹೋಮ್‌ಫಾರಂವರೆಗೆ 30 ಕಿ.ಮೀ ಮಾರ್ಗದಲ್ಲಿ ಪಾಡ್‌ ಟ್ಯಾಕ್ಸಿಗಳು ಸಂಚರಿಸಲಿದೆ. ಪಾಡ್‌ ಟ್ಯಾಕ್ಸಿ ಯೋಜನೆಯ ಟೆಂಡರ್‌ ಅನ್ನು ಎಸ್‌ಪಿಆರ್‌ಟಿಎಸ್‌, ಅಲ್ಟ್ರಾ ಪಿಆರ್‌ಟಿ ಲಿಮಿಟೆಡ್‌ ಮತ್ತು ಎಂಬೆಸ್ಸಿ ಪ್ರಾಪರ್ಟಿ ಡೆವಲಪ್‌ಮೆಂಟ್ಸ್ ಪ್ರೈವೇಟ್‌ ಲಿಮಿಟೆಡ್ ಕಂಪನಿಗಳು ಪಡೆದುಕೊಂಡಿವೆ. ಈ ಟೆಂಡರ್‌ ಗೆ ಅನುಮೋದನೆ ಕೋರಿ ಪಾಲಿಕೆ ಆಯುಕ್ತರು ಕೌನ್ಸಿಲ್‌ ಸಭೆಯ ಮುಂದೆ ಪ್ರಸ್ತಾಪ ಮಂಡಲಿಸಲಿದ್ದಾರೆ.

 'ಪಾಡ್ ಕಾರ್ ಟ್ಯಾಕ್ಸಿ' ಯೋಜನೆಗೆ ಬಿಬಿಎಂಪಿಯಿಂದ ಜಾಗತಿಕ ಟೆಂಡರ್ 'ಪಾಡ್ ಕಾರ್ ಟ್ಯಾಕ್ಸಿ' ಯೋಜನೆಗೆ ಬಿಬಿಎಂಪಿಯಿಂದ ಜಾಗತಿಕ ಟೆಂಡರ್

ಸುಗಮ ಸಂಚಾರ ವ್ಯವಸ್ಥೆಗೆ ಮತ್ತು ಸಾರ್ವಜನಿಕರಿಗೆ ಅಂತಿಮ ಹಂತದವರೆಗೆ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮೆಟ್ರೋ ರೈಲು ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳನ್ನು ಸಂಪರ್ಕಿಸುವ 5 ಮಾರ್ಗಗಳಲ್ಲಿ ಪಾಡ್‌ ಟ್ಯಾಕ್ಸಿಗಳು ಸಂಚರಿಸಲಿದೆ.

BBMP likely to give nod to POD taxi

 ಟ್ಯಾಕ್ಸಿ- ಕ್ಯಾಬ್ ಆಪರೇಟರ್ ಗಳಿಂದ ಶೋಷಣೆ ತಪ್ಪಿಸಲು ಸಿಎಂಗೆ ಮನವಿ ಟ್ಯಾಕ್ಸಿ- ಕ್ಯಾಬ್ ಆಪರೇಟರ್ ಗಳಿಂದ ಶೋಷಣೆ ತಪ್ಪಿಸಲು ಸಿಎಂಗೆ ಮನವಿ

ಈ ಟ್ಯಾಕ್ಸಿಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಮೆಟ್ರೋ ರೈಲು ನಿಲ್ದಾಣಗಳಿಗೆ ಪೂರಕ ಸೇವೆ ಒದಗಿಸಲಿವೆ. ಪ್ರತಿ ಪಾಡ್‌ ಟ್ಯಾಕ್ಸಿಯು 3 ಮೀಟರ್‌ ಉದ್ದ, 2.2 ಮೀಟರ್‌ ಅಗಲವಿದ್ದು ಒಮ್ಮೆಗೆ ಕನಿಷ್ಠ 6 ಮಂದಿ ಪ್ರಯಾಣಿಸಬಹುದಾಗಿದೆ. ಒಂದು ಕಿ.ಮೀ ಮಾರ್ಗ ನಿರ್ಮಾಣಕ್ಕೆ 50 ಕೋಟಿ ರೂ. ವೆಚ್ಚವಾಗಲಿದ್ದು, ಟೆಂಡರ್‌ ಪಡೆದಿರುವ ಕಂಪನಿಗಳು ಸಂಪೂರ್ಣ ಬಂಡವಾಳ ಹೂಡಲಿದೆ.

English summary
Most awaiting POD taxi service will resume soon as BBMP council expected to give green signal to the same. It will be helpful for the commuters who travel in metro to reach their end to end destination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X